ಮಂಗಳವಾರ, ನವೆಂಬರ್ 19, 2019
23 °C

‘ಇಂಡಿಯನ್‌ 2’ ಕಮಲಹಾಸನ್‌ ಪಾತ್ರ ಬಹಿರಂಗ

Published:
Updated:
prajavani

‘ಇಂಡಿಯನ್‌ 2’ ಸಿನಿಮಾ ಘೋಷಣೆ ಮಾಡಿದಾಗಿನಿಂದಲೂ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಲೇ ಇದೆ. ಈಗ ಈ ಸಿನಿಮಾದಲ್ಲಿ ನಟ ಕಮಲಹಾಸನ್‌ 90 ವರುಷದ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಹೊಸ ಸಂಗತಿ ಹೊರಬಿದ್ದಿದೆ.

ಈ ಸಿನಿಮಾದ ಸ್ಟಂಟ್‌ ಕೊರಿಯೋಗ್ರಾಫರ್‌ ಪೀಟರ್‌ ಹೇನ್‌ ಅವರು, ಕಮಲಹಾಸನ್‌ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಶಂಕರ್‌ ನಿರ್ದೇಶನದ ‘ಇಂಡಿಯನ್‌ 2’ ಸಿನಿಮಾದ ಚಿತ್ರೀಕರಣದಲ್ಲಿ ಕಮಲಹಾಸನ್‌ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ಪೀಟರ್‌ ಹೇನ್‌, ‘ಕಮಲ್‌ ಸರ್‌ ಆ್ಯಕ್ಷನ್‌ ದೃಶ್ಯಗಳು ಉತ್ತಮವಾಗಿ ಮೂಡಿಬರಬೇಕು ಎಂದು ಬಯಸುತ್ತಾರೆ.  ಚಿತ್ರದಲ್ಲಿ 90 ವರ್ಷದ ಮುದುಕನ ಪಾತ್ರಕ್ಕೆ ತಕ್ಕಂತೆ ವೇಷವನ್ನು ಬದಲಾಯಿಸಿದ್ದು, ನಟನೆಯಲ್ಲೂ ಪರ್‌ಫೆಕ್ಷನ್‌ ಬಯಸುತ್ತಾರೆ’ ಎಂದು ಹೇಳಿದ್ದಾರೆ.

1996ರಲ್ಲಿ ಬಿಡುಗಡೆಯಾದ ‘ಇಂಡಿಯನ್‌’ ಸಿನಿಮಾದಲ್ಲಿ ಕಮಲಹಾಸನ್‌ 80 ವರ್ಷದ ಮುದುಕನ ಪಾತ್ರ ಮಾಡಿದ್ದರು. ಈ ಸಿನಿಮಾದ ಸೀಕ್ವೆಲ್‌ ‘ಇಂಡಿಯನ್‌ 2’ 10 ವರುಷದ ನಂತರದ ಕತೆಯನ್ನು ಹೊಂದಿದೆ ಎನ್ನಲಾಗಿದೆ.

ಭೋಪಾಲ್‌ನಲ್ಲಿ ಈ ಚಿತ್ರದ ವಿಶೇಷ ಸ್ಟಂಟ್‌ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತದೆ. ಈ ಒಂದು ದೃಶ್ಯಕ್ಕಾಗಿಯೇ ಲೈಕಾ ಪ್ರೊಡಕ್ಷನ್ಸ್‌ ₹40 ಕೋಟಿ ವೆಚ್ಚ ಮಾಡಲಿದೆಯಂತೆ. ಪೀಟರ್‌ ಹೇನ್‌ ಇದನ್ನು ಕೊರಿಯೊಗ್ರಾಫ್‌ ಮಾಡಲಿದ್ದಾರೆ. ಈ ದೃಶ್ಯದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಕಿರಿಯ ಕಲಾವಿದರು ಇರಲಿದ್ದಾರೆ ಎಂದು ಹೇನ್‌ ಮಾಹಿತಿ ನೀಡಿದ್ದಾರೆ.

ಈ ಸಿನಿಮಾದಲ್ಲಿ ಅನಿಲ್‌ ಕಪೂರ್‌ ನಟಿಸಲಿದ್ದಾರೆ. ಎರಡು ವಾರಗಳ ಹಿಂದೆ ಅನಿಲ್‌ ಹಾಗೂ ಶಂಕರ್‌ ಮಾತನಾಡುತ್ತಿರುವ ಪೋಟೊಗಳು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು.  ಇದರಲ್ಲಿ ಕಾಜಲ್‌ ಅಗರ್‌ವಾಲ್‌, ರಕುಲ್‌ ಪ್ರೀತ್‌, ಸಿದ್ಧಾರ್ಥ್‌, ಪ್ರಿಯಾ ಭವಾನಿ ಶಂಕರ್‌ ಮೊದಲಾದವರು ನಟಿಸಲಿದ್ದಾರೆ.

ಪ್ರತಿಕ್ರಿಯಿಸಿ (+)