ಬುಧವಾರ, ನವೆಂಬರ್ 13, 2019
17 °C

ಹಾಲಿವುಡ್‌ಗೆ ಹಾರಲು ಸಜ್ಜಾದ ಇಂದ್ರಜಿತ್‌

Published:
Updated:
Prajavani

ಇಂದ್ರಜಿತ್‌ ಲಂಕೇಶ್ ಅವರು ಹಾಲಿವುಡ್‌ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಆ ಮೂಲಕ ಹಾಲಿವುಡ್‌ ಚಿತ್ರ ನಿರ್ದೇಶಿಸುತ್ತಿರುವ ಕನ್ನಡದ ಮೊದಲ ನಿರ್ದೇಶಕ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಕಳೆದ ಒಂದು ವರ್ಷದಿಂದ ಶಕೀಲಾ ಜೀವನಾಧಾರಿತ ಹಿಂದಿ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಅದರ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಈ ನಡುವೆಯೇ ಹಾಲಿವುಡ್‌ಗೆ ಹಾರಲು ಸಜ್ಜಾಗಿರುವ ಅವರಿಗೆ ಇದು 11ನೇ ಚಿತ್ರ. ಈ ಕುರಿತು ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.

ಮುಂದಿನ ತಿಂಗಳಿನಿಂದ ಈ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕೆಲಸನಗಳು ಶುರುವಾಗಲಿವೆಯಂತೆ. ಮುಸ್ಲಿಂ ಮಹಿಳೆ ಬಗೆಗಿನ ಚಿತ್ರ ಇದು. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ನಟಿಯೊಬ್ಬರು ಇದರಲ್ಲಿ ನಟಿಸಲಿದ್ದಾರಂತೆ. ಆಕೆ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

‘ನೈಜ ಘಟನೆಯಾಧಾರಿತ ಚಿತ್ರ ಇದಾಗಿದೆ. ಅಕ್ಟೋಬರ್‌ನಲ್ಲಿ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಪ್ರಸ್ತುತ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)