ಶುಕ್ರವಾರ, ಡಿಸೆಂಬರ್ 3, 2021
20 °C

ಇನ್ನೋವೇಟಿವ್ ಇಂಟರ್‌ನ್ಯಾಷನಲ್‌ ಚಿತ್ರೋತ್ಸವ: ಪ್ರಶಸ್ತಿ ಬಾಚಿತು ‘ಡೊಳ್ಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಡೆಯರ್‌ ಮೂವೀಸ್‌ ಲಾಂಛನದ ಅಡಿ ನಿರ್ಮಾಣವಾದ ಡೊಳ್ಳು ಚಿತ್ರಕ್ಕೆ ಇನ್ನೋವೇಟಿವ್ ಇಂಟರ್‌ನ್ಯಾಷನಲ್‌ ಚಿತ್ರೋತ್ಸವದಲ್ಲಿ ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ನೀಡಲಾದ ದಾದಾಸಾಹೇಬ್ ಫಾಲ್ಕೆ ಉತ್ತಮ ಚಲನಚಿತ್ರ ಪ್ರಶಸ್ತಿ ದೊರಕಿದೆ.

ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಪುರೋಹಿತ್ ಚಿತ್ರದ ನಿರ್ಮಾಪಕರು. ಸಾಗರ್‌ ಪುರಾಣಿಕ್‌ ಈ ಚಿತ್ರದ ನಿರ್ದೇಶಕರು.

ಈ ಚಿತ್ರವು ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಢಾಕಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್ ಹಾಗೂ ಡಲ್ಲಾಸ್‌ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.  

ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ.ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರಮನು ನಟಿಸಿದ್ದಾರೆ.

ಅಭಿಲಾಷ್ ಕಳತ್ತಿ -ಛಾಯಾಗ್ರಹಣ, ಎಂ ಅನಂತ್ ಕಾಮತ್ - ಸಂಗೀತ ಸಂಯೋಜನೆ, ಬಿ.ಎಸ್.ಕೆಂಪರಾಜು - ಸಂಕಲನ, ಶ್ರೀನಿಧಿ ಡಿ.ಎಸ್ - ಚಿತ್ರಕಥೆ ಮತ್ತು ಸಂಭಾಷಣೆ, ದೇವಿ ಪ್ರಕಾಶ್- ಕಲೆ ನಿತಿನ್ ಲೂಕೋಸ್ - ಶಬ್ದ ವಿನ್ಯಾಸ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು