ಸೋಮವಾರ, ಏಪ್ರಿಲ್ 19, 2021
25 °C

ಮಹಿಳಾ ದಿನಾಚರಣೆ: ಸೆಲೆಬ್ರಿಟಿಗಳು ಹೀಗಂತಾರೆ..

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ಗಂಡಿನ ಜೀವನಕ್ಕೆ ಹೆಣ್ಣಿನ ಕೊಡುಗೆ ಅಪಾರ. ಜನ್ಮ ಅವಳಿಂದ, ಬದುಕು ಅವಳಿಂದ, ಬದುಕು ಪೂರ್ತಿಗೊಳ್ಳುವುದೂ ಅವಳಿಂದ. ಗಂಡಿನ ಜತೆಗೆ ಎಲ್ಲೆಡೆಯೂ ಹೆಣ್ಣು ಇರುವಾಗ ಯಾಕೆ ಅವಳು ಹಿಂದಿರಬೇಕು? ಅವಳ ಬೆಳವಣಿಗೆಯು ಸಮಾಜದ ಒಳಿತಿಗೆ ಪೂರಕವಾದದ್ದು.

–ವಸಿಷ್ಠ ಸಿಂಹ, ನಟ

ಹೆಣ್ಣು, ಗಂಡಿಗೆ ಸಮಾನ ಅಲ್ಲ; ಗಂಡಿಗಿಂತ ಯಾವತ್ತೂ ಮೇಲೆಯೇ. ಅವನಿಗಿಂತ ಹೆಚ್ಚೇ ಕೆಲಸ ಮಾಡುತ್ತಾಳೆ. ಅಹಂ ತುಂಬಿದ ಗಂಡಿನಿಂದಾಗಿ ಆಕೆ ಶತಮಾನಗಳಿಂದ ಶೋಷಣೆಗೊಳಗಾಗಿ ನೋವು ಸಹಿಸಿಕೊಂಡಿದ್ದಾಳೆ. ಆ ಸಹಿಸುವಿಕೆಯೇ ಆಕೆಗಿಂದು ದೊಡ್ಡ ಶಕ್ತಿ. ಮುಂದೊಂದು ದಿನ ಹೆಣ್ಣು, ಗಂಡನ್ನೂ ಮೀರಿ ಬೆಳೆಯುತ್ತಾಳೆ.

–ವಾಸುಕಿ ವೈಭವ್, ಸಂಗೀತ ನಿರ್ದೇಶಕ

ಕೆಲ ಕ್ಷೇತ್ರಗಳಲ್ಲಿ ಪುರುಷರಿಗಿಂತ ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿದ್ದಾರೆ. ಸೇನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಈಗಿನ ಕಾಲದ ಹೆಣ್ಣು ಬುದ್ಧಿವಂತೆ ಮಾತ್ರವಲ್ಲ, ಅವಳಿಗೆ ತನ್ನ ಹಕ್ಕುಗಳ ಅರಿವೂ ಇದೆ. ಇದು ಒಳ್ಳೆಯ ಬೆಳವಣಿಗೆ.

–ಧರ್ಮೇಂದರ್ ಕುಮಾರ್ ಮೀನಾ, ಡಿಸಿಪಿ, ಬೆಂಗಳೂರು ಉತ್ತರ ವಿಭಾಗ

 ಪ್ರತಿಯೊಬ್ಬರ ಬದುಕು ರೂಪಿಸುವಲ್ಲಿ ಮಹಿಳೆ ವಿಭಿನ್ನ ರೂಪದಲ್ಲಿ ನೆರವಾಗುತ್ತಾಳೆ. ತಾಯಿ, ಅಕ್ಕ–ತಂಗಿ, ಪತ್ನಿ ಮುಂತಾದ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮಹಿಳೆ ಕಠಿಣ ಪ್ರಯತ್ನದ ಮೂಲಕ ತಮ್ಮವರ ಉನ್ನತಿಗಾಗಿ ನೆರವಾಗುತ್ತಾಳೆ. ನಾನು ವೃತ್ತಿ ಬದುಕಿನಲ್ಲಿ ಸಾಧನೆ ಮಾಡಲು ತಂದೆಯಂತೆಯೇ ತಾಯಿಯೂ ಪ್ರೇರಣೆಯಾಗಿದ್ದಾರೆ. ತಂದೆಯ ಶ್ರಮ ಮತ್ತು ತಾಯಿಯ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ.

-ಶ್ರೀಹರಿ ನಟರಾಜ್, ಅಂತರರಾಷ್ಟ್ರೀಯ ಈಜುಪಟು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು