ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸುಬ್ರಹ್ಮಣ್ಯ’ನ ಪ್ರಪಂಚದ ಪರಿಚಯ: ನಟ ರವಿಶಂಕರ್‌ ಪುತ್ರ ಅದ್ವೆ ಸಿನಿಮಾ

Published : 3 ಸೆಪ್ಟೆಂಬರ್ 2024, 18:47 IST
Last Updated : 3 ಸೆಪ್ಟೆಂಬರ್ 2024, 18:47 IST
ಫಾಲೋ ಮಾಡಿ
Comments

ಬಹುಭಾಷಾ ನಟ ರವಿಶಂಕರ್‌ ತಮ್ಮ ಪುತ್ರ ಅದ್ವೆ ಅವರನ್ನು ‘ಸುಬ್ರಹ್ಮಣ್ಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಚಿತ್ರಕ್ಕೆ ರವಿಶಂಕರ್‌ ಅವರೇ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು ಸಿನಿಮಾದ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.   

‘ಸುಬ್ರಹ್ಮಣ್ಯ’ ಸಿನಿಮಾದ ಶೇಕಡ 60 ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸ ಮುಂಬೈನ ಶಾರುಖ್ ಖಾನ್‌ ಒಡೆತನದ ರೆಡ್ ಚಿಲ್ಲೀಸ್ ಸ್ಟುಡಿಯೊದಲ್ಲಿ ನಡೆಯುತ್ತಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಹಲವಾರು ಸ್ಟುಡಿಯೊಗಳಲ್ಲಿ ವಿಎಫ್‌ಎಕ್ಸ್‌ ಮತ್ತು ಸಿಜಿಐ ಕೆಲಸಗಳು ನಡೆಯುತ್ತಿವೆ. 

‘ಸುಬ್ರಹ್ಮಣ್ಯ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು ಎಂದಿದೆ ಚಿತ್ರತಂಡ. ಸೋಷಿಯೋ ಫ್ಯಾಂಟಸಿ ಅಡ್ವೆಂಚರ್‌ ಜಾನರ್‌ನಲ್ಲಿರುವ ಈ ಸಿನಿಮಾವನ್ನು ಎಸ್.ಜಿ. ಮೂವೀ ಮೇಕರ್ಸ್ ಬ್ಯಾನರ್‌ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ನಿರ್ಮಾಣ ಮಾಡಿದ್ದಾರೆ. ‘ಸಲಾರ್’ ಮತ್ತು ‘ಕೆಜಿಎಫ್’ ಸಿನಿಮಾ ಸರಣಿ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿಘ್ನೇಶ್ ರಾಜ್ ಛಾಯಾಚಿತ್ರಗ್ರಹಣ, ವಿಜಯ್ ಎಂ.ಕುಮಾರ್ ಸಂಕಲನ ‘ಸುಬ್ರಹ್ಮಣ್ಯ’ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಸಜ್ಜಾಗುತ್ತಿದೆ. 20 ವರ್ಷಗಳ ಹಿಂದೆ ‘ದುರ್ಗಿ’ ಸಿನಿಮಾದಲ್ಲಿ ಮಾಲಾಶ್ರೀ ಅವರಿಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದ ರವಿಶಂಕರ್‌, ಇದೀಗ ಮಗ ಅದ್ವೆಗಾಗಿ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT