ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರ್ ಮಗಳಪ್ರೇಮ ಪುರಾಣ

ಇರಾ ಖಾನ್
Last Updated 16 ಜೂನ್ 2019, 14:17 IST
ಅಕ್ಷರ ಗಾತ್ರ

ಅಮೀರ್ ಖಾನ್ ಮಗಳು ಇರಾ ಖಾನ್, ಸಂಗೀತ ನಿರ್ದೇಶಕ ಮಿಶಾಲ್ ಕೃಪಲಾನಿ ಜೊತೆಗಿರುವ ಪ್ರೇಮ ಸಂಬಂಧದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾಳೆ. ತಾವಿಬ್ಬರೂ ಉತ್ತಮ ಸ್ನೇಹಿತರೆಂದು ಹೇಳಿ ಕೊಂಡಿರುವ ಇರಾ, ಮಿಶಾಲ್ ಜೊತೆಗೆ ಡೇಟಿಂಗ್‌ನಲ್ಲಿ ಇರುವುದಾಗಿಯೂ ಮುಕ್ತವಾಗಿ ಹೇಳಿಕೊಂಡಿದ್ದಾಳೆ.

ಇರಾಳ ಮಾತುಗಳಿಗೆ ಆಕೆಯ ಇನ್‌ಸ್ಟಾಗ್ರಾಂನಲ್ಲಿ ಚಿತ್ರಗಳೂ ಸಾಕ್ಷಿ ಹೇಳುತ್ತವೆ. ಇರಾ–ಮಿಶಾಲ್ ಇಬ್ಬರೂ ಜೊತೆಯಾಗಿ ತಿರುಗಾಡುತ್ತಿರುವ ಬಗ್ಗೆ ಬಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದ್ದಾರೂ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.

ಇರಾ ಈಚೆಗೆ ಇನ್‌ಸ್ಟಾಗ್ರಾಂನಲ್ಲಿ ಏನಾದ್ರೂ ಕೇಳ್ಬೋದು ಅಭಿಯಾನದಲ್ಲಿ ತನ್ನ ಅಭಿಮಾನಿಗಳು ಕೇಳಿದ ಪ್ರಶ್ನೆಗೆ, ತಾನು ಮಿಶಾಲ್ ಜೊತೆಗೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ಮಿಶಾಲ್ ಜೊತೆಗೆ ಅಪ್ಪಿಕೊಂಡಿರುವ ಚಿತ್ರವನ್ನೂ ಹಂಚಿಕೊಂಡಿದ್ದಾಳೆ.

ಮಿಶಾಲ್ ಇದುವರೆಗೆ ಎಲ್ಲೂ ಇರಾ ಬಗ್ಗೆ ಹೇಳಿಕೊಂಡಿಲ್ಲ. ಮಿಶಾಲ್ ಕುಟುಂಬದ ಬಗ್ಗೆಯೂ ಅಷ್ಟಾಗಿ ಮಾಹಿತಿ ಇಲ್ಲ. ಗೀತ ರಚನೆಕಾರ ಮತ್ತು ಸಂಗೀತ ನಿರ್ದೇಶಕನೂ ಆಗಿರುವ ಮಿಶಾಲ್ ಈಗಾಗಲೇ ಎರಡು ಮ್ಯೂಸಿಕ್ ವಿಡಿಯೊ ಆಲ್ಬಂಗಳನ್ನು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾನೆ.

ಅಮೀರ್–ರೀನಾದತ್ತ ಮಗಳಾಗಿರುವ ಇರಾ ಸಿನಿಮಾ ನಿರ್ಮಾಣದ ಬಗ್ಗೆ ಆಸಕ್ತಿ ಹೊಂದಿದ್ದಾಳೆ. ಈ ಬಗ್ಗೆ ಕಳೆದ ವರ್ಷ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಅಮೀರ್ ಈ ವಿಷಯ ಹಂಚಿಕೊಂಡಿದ್ದರು. ಮಗ ಜುನೈದ್ ಕೂಡಾ ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದಾನೆ. ಮಕ್ಕಳಿಬ್ಬರ ಆಸೆಯನ್ನು ಬೆಂಬಲಿಸುವುದಾಗಿ ಅಮೀರ್ ಹೇಳಿದ್ದರು.

ಇರಾ, ಈಚೆಗಷ್ಟೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೈ ಮೇಲೆ ಹಾಕಿಸಿ ಕೊಂಡಿರುವ ಮೊದಲ ಹಚ್ಚೆ ಕುರಿತು ಬರೆದುಕೊಂಡಿದ್ದಳು. ‘ನಾವು ಮಾಡದಿದ್ದರೆ, ಯಾರು ಮಾಡ್ತಾರೆ?’ ಅನ್ನುವ ಅರ್ಥದ ಈ ಹಚ್ಚೆಗೆ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT