ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್‌ 20ನೇ ಸಿನಿಮಾ ಹೆಸರೇನು?

Last Updated 21 ಜೂನ್ 2020, 8:46 IST
ಅಕ್ಷರ ಗಾತ್ರ

ಆ್ಯಕ್ಷನ್‌ ಥ್ರಿಲ್ಲರ್‌ ಕತೆಯಾಧಾರಿತ‘ಸಾಹೋ’ ಸಿನಿಮಾದ ನಂತರ ನಟ ಪ್ರಭಾಸ್‌ ತಮ್ಮ 20ನೇ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದೊಂದು ರೋಮ್ಯಾಂಟಿಕ್‌ ಕಥೆಯಾಧಾರಿತ ಸಿನಿಮಾವಾಗಿದ್ದು, ‘ಸಾಹೊ’ ಬಿಡುಗಡೆಯಾದ ಬೆನ್ನಲ್ಲೇ ಪ್ರಭಾಸ್, ಈ ಚಿತ್ರದ ಬಗ್ಗೆಯೂಹೇಳಿದ್ದರು.

‌ಈ ಚಿತ್ರದಲ್ಲಿ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ಶೇ 55ರಷ್ಟು ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.ಕೊರೊನಾ–ಲಾಕ್‌ಡೌನ್‌ ಪೂರ್ಣ ತೆರವಾದ ಕೂಡಲೇಉಳಿದ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸುವು ಚಿತ್ರತಂಡ ಹೇಳಿಕೊಂಡಿದೆ. ಈಗಾಗಲೇ ಸಿನಿಮಾದ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರತಂಡ ಹಂಚಿಕೊಂಡಿದೆ.

ಈ ಹೊಸ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಆದರೆ, ‘ರಾಧೆ ಶ್ಯಾಮ್‘ ಅಂತ ಶೀರ್ಷಿಕೆ ಇಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಜುಲೈ 22 ರಂದು ಈ ಸಿನಿಮಾದ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಲಿದೆಯಂತೆ.

ಚಿತ್ರದ ಟೈಟಲ್‌ನ್ನು ಪ್ರಭಾಸ್‌ ಅವರೇ ಬಹಿರಂಗಪಡಿಸಲಿದ್ದಾರಂತೆ. ಹಾಗೆಯೇ, ಯಾವಾಗ ಚಿತ್ರ ಬಿಡುಗಡೆಯಾಗಬಹುದು ಎಂಬುದನ್ನೂ ಅವರೇ ಹೇಳಲಿದ್ದಾರೆ. ಮುಂದಿನ ವರ್ಷದ ಮಾರ್ಚ್‌ ನಂತರ ಈ ಚಿತ್ರ ಬಿಡುಗಡೆಯಾಗಲಿದೆ ಎಂದೂ ವರದಿಗಳು ತಿಳಿಸಿವೆ.

ಈ ಮೊದಲು ಪ್ರಭಾಸ್‌ 20ನೇ ಸಿನಿಮಾದ ಹೆಸರು‌ ‘ಜಾನ್‌’ ಎಂದು ಸುದ್ದಿ ಹರಿದಾಡಿತ್ತು. ಆದರೆ ಈಗ ಚಿತ್ರದ ನಿರ್ದೇಶಕರು ಈ ಚಿತ್ರದ ಟೈಟಲ್‌ನ್ನು ‘ರಾಧೆಶ್ಯಾಮ್’‌ ಹಾಗೂ ‘ಓಹ್‌ ಡಿಯರ್’‌ ಎಂದು ರಿಜಿಸ್ಟ್ರರ್‌ ಮಾಡಿಸಿದ್ದಾರೆ ಎಂದು ಸುದ್ದಿಗಳು ಕೇಳಿಬಂದಿವೆ.

ಆದರೆ ಇದರಲ್ಲಿ ಅಂತಿಮ ಟೈಟಲ್‌ ಯಾವುದು ಎಂಬುದುರ ಬಗ್ಗೆ ಚಿತ್ರತಂಡ ಎಲ್ಲೂ ಬಾಯ್ಬಿಟ್ಟಿಲ್ಲ. ಆದರೆ ಪ್ರಭಾಸ್‌ ಅಭಿಮಾನಿಗಳು ಈ ಚಿತ್ರದ ಟೈಟಲ್‌ನ್ನು ‘ರಾಧೆಶ್ಯಾಮ್‌’ ಎಂದು ಇಡುವಂತೆ ಒತ್ತಾಯಿಸುತ್ತಿದ್ದಾರಂತೆ.

‘ಸಾಹೋ’ ನಂತರ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದ ಪ್ರಭಾಸ್‌, ಕಠಿಣ ಡಯೆಟ್‌, ವ್ಯಾಯಾಮ ಹಾಗೂ ವರ್ಕೌಟ್‌ ಮಾಡಿ ತೂಕ ಕಳೆದುಕೊಂಡಿದ್ದರು.

ಈ ಚಿತ್ರವನ್ನು ರಾಧಾಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಟಿ– ಸಿರೀಸ್‌, ಯುವಿ ಕ್ರಿಯೇಶನ್ಸ್‌ ಹಾಗೂ ಗೋಪಿ ಕೃಷ್ಣ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಚಿತ್ರವೂ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT