ಬುಧವಾರ, ಸೆಪ್ಟೆಂಬರ್ 23, 2020
23 °C

ಇಶಾನ್‌ಗೆ ಸುವರ್ಣ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ದಡಕ್‌’ ಸಿನಿಮಾ ಮೂಲಕ ಬಾಲಿವುಡ್‌ ಅಂಗಳದಲ್ಲಿ ಗುರುತಿಸಿಕೊಂಡಿರುವ ಇಶಾನ್‌ ಖಟ್ಟರ್‌ ಈಗ ‘ಭಾರತ್‌’ ಖ್ಯಾತಿಯ ಅಲಿ ಅಬ್ಬಾಸ್‌ ಜಾಫರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಲ್ಮಾನ್‌ ಖಾನ್‌ ಹಾಗೂ ಕತ್ರಿನಾ ಕೈಫ್‌ ನಟನೆಯ ಭಾರತ್‌ ಸಿನಿಮಾದ ಬಳಿಕ ಅಲಿ ಅಬ್ಬಾಸ್‌ ಹೊಸ ಸಿನಿಮಾವೊಂದನ್ನು ನಿರ್ಮಿಸಲಿದ್ದಾರೆ. ಚಿತ್ರಕತೆ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಅವರೊಂದಿಗಿನ ಸಿನಿಮಾವೊಂದರಿಂದ ಇಶಾನ್‌ ಹೊರಬಂದಿದ್ದರು. ಸಲ್ಮಾನ್‌ ರಶ್ದಿಯ ‘ಮಿಡ್‌ನೈಟ್ಸ್‌ ಚಿಲ್ಡ್ರನ್‌’ ಕಾದಂಬರಿಯನ್ನು ಸಿನಿಮಾಕ್ಕೆ ತರಲು ಅವರು ಪ್ರಯತ್ನ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಇಶಾನ್‌ ನಟಿಸಲಿದ್ದಾರೆ ಎಂದೂ ಪ್ರಕಟಿಸಲಾಗಿತ್ತು. ಆದರೆ ಅವರ ಮಧ್ಯೆ ಕೆಲವೊಂದು ಭಿನ್ನಾಭಿಪ್ರಾಯ ಬಂದ ಕಾರಣ ಈ ಸಿನಿಮಾ ಸೆಟ್ಟೇರಲಿಲ್ಲ.

ಇಶಾನ್‌ ಹಾಗೂ ಅಲಿ ಸಿನಿಮಾ ಕುರಿತು ಸಾಕಷ್ಟು ಚರ್ಚೆ ಮಾಡಿದ್ದಾರೆ ಅಂತೆ. ಇದು ಪಕ್ಕಾ ಪ್ರೇಮ ಕತೆ. ಸ್ಕ್ರಿಪ್ಟಿಂಗ್ ಮುಗಿಸಿರುವ ಅವರು ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದಾರೆ ಅಂತೆ. ಕತೆಗೆ ಹೊಂದಿಕೆಯಾಗುವ ಹೊಸ ಮುಖವನ್ನು ಅವರು ಹುಡುಕುತ್ತಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಸಲ್ಮಾನ್‌ ಸಿನಿಮಾದಲ್ಲಿ ಕೆಲಸ ಮಾಡಿದ ಮೇಲೆ ಒಂದು ಬ್ರೇಕ್‌ ಬೇಕಾಗುತ್ತದೆ. ಅವರು ನಟಿಸುವ ಸಿನಿಮಾಕ್ಕೆ ತುಂಬಾ ಸಿದ್ದತೆ ಬೇಕು. ಸದ್ಯಕ್ಕೆ ಡೆಹ್ರಾಡೂನ್‌ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಮುಂದಿನ ಸಿನಿಮಾದ ತಯಾರಿಯೂ ಇಲ್ಲಿಂದಲೇ ನಡೆಸುತ್ತಿದ್ದೇನೆ’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಅಲಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು