ಮಂಗಳವಾರ, ನವೆಂಬರ್ 29, 2022
21 °C

ಇಶಾನ್‌ಗೆ ಚೇತನ್‌ ಆ್ಯಕ್ಷನ್‌ ಕಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜೇಮ್ಸ್‌’ ಚಿತ್ರದ ಬಳಿಕ ನಿರ್ದೇಶಕ ಚೇತನ್‌ ಕುಮಾರ್‌ ಅವರ ಹೊಸ ಚಿತ್ರಕ್ಕೆ ಯಾರು ಹೀರೊ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. 

ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಚಿತ್ರದ ನಾಯಕ ಇಶಾನ್‌, ಚೇತನ್ ಅವರ ಮುಂದಿನ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ತಮ್ಮ ಸ್ಟೈಲ್‌ ಮೂಲಕವೇ ಚಂದನವನದಲ್ಲಿ ಹೆಸರು ಮಾಡಿರುವ ಇಶಾನ್‌, ‘ರೇಮೊ’ ಬಿಡುಗಡೆಗೆ ಕಾಯುತ್ತಿದ್ದಾರೆ.

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರು ನಾಯಕನಾಗಿ ನಟಿಸಿದ್ದ ಕೊನೆಯ ಕಮರ್ಷಿಯಲ್‌ ಸಿನಿಮಾ ‘ಜೇಮ್ಸ್‌’ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿತ್ತು. ‘ಜೇಮ್ಸ್‌’ ಬಿಡುಗಡೆಯನ್ನು ಹಬ್ಬದಂತೆ ಅಭಿಮಾನಿಗಳು ಆಚರಿಸಿದ್ದರು. ಚಿತ್ರವು ಚೇತನ್‌ ಅವರ ನಿರ್ದೇಶನದ ಪಯಣಕ್ಕೂ ದೊಡ್ಡ ತಿರುವು ನೀಡಿತ್ತು. ‘ರೇಮೊ’ ಚಿತ್ರದ ಬಿಡುಗಡೆ ನಂತರ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆ ಹಾಗೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ ಎನ್ನುತ್ತಾರೆ ಚೇತನ್ ಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು