‘ಇಷ್ಕ್‌ ವಿಶ್ಕ್‌’ ಹೊಸ ಕಂತಿನಲ್ಲೂ ಶಾಹೀದ್‌?

ಸೋಮವಾರ, ಏಪ್ರಿಲ್ 22, 2019
29 °C

‘ಇಷ್ಕ್‌ ವಿಶ್ಕ್‌’ ಹೊಸ ಕಂತಿನಲ್ಲೂ ಶಾಹೀದ್‌?

Published:
Updated:
Prajavani

ಹಾಲುಗೆನ್ನೆಯ ಯುವಕನಾಗಿ ಬಾಲಿವುಡ್‌ಗೆ ಅಂಬೆಗಾಲಿಟ್ಟ ಶಾಹೀದ್ ಕಪೂರ್‌ ನಟನೆಯ ಮೊದಲ ಚಿತ್ರದ ಸೀಕ್ವೆಲ್‌ ತೆರೆಗೆ ಬರುವುದು ಖಚಿತವಾಗಿದೆ. ಹೌದು, ನಿರ್ದೇಶಕರ ಲೆಕ್ಕಾಚಾರ ನಿಜವಾದರೆ ‘ಇಷ್ಕ್‌ ವಿಶ್ಕ್‌’ನ ಎರಡನೇ ಆವೃತ್ತಿಯನ್ನು ನೋಡಬಹುದು.

ಶಾಹೀದ್‌ ಬಾಲಿವುಡ್‌ಗೆ ಪರಿಚಯಗೊಂಡದ್ದು 2003ರ ‘ಇಷ್ಕ್‌ ವಿಶ್ಕ್‌’ ಚಿತ್ರದ ಮೂಲಕ. ಒಂದಲ್ಲ ಎರಡಲ್ಲ ಬರೋಬ್ಬರಿ 100 ಸಿನಿಮಾಗಳಲ್ಲಿ ಅವಕಾಶಕ್ಕಾಗಿ ನಿರ್ದೇಶಕರು, ನಿರ್ಮಾಪಕರನ್ನು ಎಡತಾಕಿ ಬೇಸತ್ತಿದ್ದ ಹೊತ್ತಿಗೆ ಶಾಹೀದ್‌ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದು ‘ಇಷ್ಕ್‌ ವಿಶ್ಕ್‌’ನ ಆಫರ್‌.

ರೊಮ್ಯಾಂಟಿಕ್‌ ಕಾಮಿಡಿ ‘ಇಷ್ಕ್‌ ವಿಶ್ಕ್‌’ ತೆರೆ ಕಾಣುತ್ತಲೇ ಭಾರಿ ಯಶಸ್ಸು ಕಂಡಿತ್ತು. ಅಲ್ಲದೆ, ರಾತ್ರಿ ಬೆಳಗಾಗುವುದರೊಳಗೆ ಶಾಹೀದ್‌ಗೆ ತಾರಾ ಮೌಲ್ಯ ತಂದುಕೊಟ್ಟಿತ್ತು. ಚಾಕೊಲೇಟ್‌ ಹೀರೊ ಶಾಹೀದ್‌ಗೆ ಎಲ್ಲವೂ ಕನಸಿನಂತೆ ಭಾಸವಾಗಿತ್ತು. ಕೆನ್‌ ಘೋಷ್‌ ನಿರ್ದೇಶನದ ಈ ಚಿತ್ರದಲ್ಲಿ ಅಮೃತಾ ರಾವ್‌ ಮತ್ತು ಶೆಹನಾಜ್‌ ಟ್ರೆಸರಿ ನಾಯಕನಟಿಯರಾಗಿ ನಟಿಸಿದ್ದರು. 

ಎರಡನೇ ಆವೃತ್ತಿಯೂ ತರುಣರ ಪ್ರೀತಿ ಪ್ರೇಮ ಪ್ರಣಯವನ್ನು ಹೇಳಲಿದ್ದು, ಚಿತ್ರಕತೆ ಸಿದ್ಧವಾಗುತ್ತಿದೆ. ಈ ಆವೃತ್ತಿಯನ್ನು ಯಾರು ನಿರ್ದೇಶಿಸಬೇಕು ಮತ್ತು ತಾರಾಗಣದಲ್ಲಿ ಯಾರಿರಬೇಕು ಎಂಬಿತ್ಯಾದಿ ಸಂಗತಿಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಶಾಹಿದ್‌ ಸ್ಥಾನವನ್ನು ಅವರೇ ತುಂಬುತ್ತಾರೋ, ಹೊಸ ಮುಖವನ್ನು ತರುತ್ತಾರೋ ಎಂಬುದು  ಎಲ್ಲರ ಕುತೂಹಲದ ಕೇಂದ್ರವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !