ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲಿ ಚಲನಚಿತ್ರೋತ್ಸವ ಆರಂಭ

Last Updated 12 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಭವನ್ಸ್‌ ಫಿಲಂ ಸೊಸೈಟಿ ಆಯೋಜಿಸಿರುವ ಇಸ್ರೇಲಿ ಚಲನಚಿತ್ರೋತ್ಸವವು ಇಲ್ಲಿನ ಭಾರತೀಯ ವಿದ್ಯಾ ಭವನದಲ್ಲಿ ಶುಕ್ರವಾರ ಆರಂಭವಾಯಿತು. ಇದೇ ಭಾನುವಾರದವರೆಗೆ (ಮಾ.14) ಸಿನಿಮೋತ್ಸವ ಮುಂದುವರಿಯಲಿದೆ.

ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಭವನದ ಖಿಂಚ ಸಭಾಂಗಣದಲ್ಲಿ ನಡೆಯುತ್ತಿರುವ ಈ ಚಲನಚಿತ್ರೋತ್ಸವವನ್ನು ಇಸ್ರೇಲ್‌ನ ಭಾರತದ ರಾಯಭಾರಿ ಜೋನಾಥನ್‌ ಝಡ್ಕಾ ಉದ್ಘಾಟಿಸಿದರು.

‘ಇಸ್ರೇಲ್‌ನ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಸಿನಿಮಾಗಳು ಉತ್ಸವದಲ್ಲಿ ಪ್ರದರ್ಶನ ಕಾಣುತ್ತಿವೆ. ಈ ಅವಕಾಶವನ್ನು ಸಿನಿಪ್ರಿಯರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಝಡ್ಕಾ ಹೇಳಿದರು.

ಹಿರಿಯ ನಟ ಎಚ್.ಜಿ. ದತ್ತಾತ್ರೇಯ, ‘ಫಿಲ್ಮ್‌ ಸೊಸೈಟಿಗಳು ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮವಾಗಿ ಚಲನಚಿತ್ರೋತ್ಸವಗಳನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹ. ಸದಭಿರುಚಿಯ ಚಿತ್ರಗಳು ಸಿನಿ ಪ್ರಿಯರನ್ನು ರಂಜಿಸಲಿವೆ’ ಎಂದರು.

‘ಡೆಸ್ಪರಾಡೊ ಸ್ಕ್ವೇರ್‌’ ಚಿತ್ರ ಪ್ರದರ್ಶನದೊಂದಿಗೆ ಚಿತ್ರೋತ್ಸವ ಪ್ರಾರಂಭವಾಯಿತು. ಮಧ್ಯಾಹ್ನ 3ಕ್ಕೆ ‘ಕ್ಯಾಂಪ್‌ ಫೈರ್‌’ ಸಿನಿಮಾ ಪ್ರದರ್ಶಿಸಲಾಯಿತು.

ಭಾರತೀಯ ವಿದ್ಯಾಭವನದ ಮುಖ್ಯಸ್ಥ ಕೆ.ಜಿ. ರಾಘವನ್ ಹಾಗೂ ನಿರ್ದೇಶಕ ಎಚ್.ಎನ್. ಸುರೇಶ್‌ ಹಾಜರಿದ್ದರು.

ಶನಿವಾರ ಬೆಳಿಗ್ಗೆ 11.30ಕ್ಕೆ ‘ಹಾಲ್ಫನ್‌ ಹಿಲ್‌ ಡಸ್‌ನಾಟ್ ಆನ್ಸರ್’, ಮಧ್ಯಾಹ್ನ 3ಕ್ಕೆ ‘ಹೊಗಿಗಾ ಬಿ ಸ್ನೋಕರ್‌’ ಮತ್ತು ಭಾನುವಾರ 11.30ಕ್ಕೆ ‘ಕೊಲಂಬಿಯನ್‌ ಲವ್‌’ ಮತ್ತು 3ಕ್ಕೆ ‘ಅಲೆಕ್ಸಾ ಇನ್‌ ಲವ್‌ಸಿಕ್‌’ ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT