ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಬ್ಬನಿ ತಬ್ಬಿದ ಇಳೆಯಲಿ ‘ರಾಧೆ’

Published 14 ಆಗಸ್ಟ್ 2024, 2:28 IST
Last Updated 14 ಆಗಸ್ಟ್ 2024, 2:28 IST
ಅಕ್ಷರ ಗಾತ್ರ

ರಕ್ಷಿತ್‌ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಚಿತ್ರದ ನಾಲ್ಕನೇ ಹಾಡು ‘ರಾಧೆ’ ರಿಲೀಸ್‌ ಆಗಿದೆ. 

ಈ ಹಾಡಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ‘ಕಡಲನು ಕಾಣ ಹೊರಟಿರೋ..’ ಹಾಡು ಹಾಡಿದ್ದ ಶ್ರೀಲಕ್ಷ್ಮಿ ಬೆಳ್ಮಣ್ ಧ್ವನಿಯಾಗಿದ್ದಾರೆ. ‘ದಿ ವೆಡ್ಡಿಂಗ್‌ ಸಾಂಗ್‌’ ಎಂದೇ ಈ ಹಾಡನ್ನು ಚಿತ್ರತಂಡ ಕರೆದಿದ್ದು, ಮದುವೆ ರೀಲ್ಸ್‌ಗಳಲ್ಲಿ ಇದರ ಬಳಕೆ ಹೆಚ್ಚಾಗಲಿದೆ. ಚಂದ್ರಜಿತ್ ಬೆಳ್ಳಿಯಪ್ಪ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಮ್ಯೂಸಿಕಲ್‌ ಲವ್‌ ಸ್ಟೋರಿ ಟ್ರ್ಯಾಕ್‌ನಲ್ಲಿದೆ.

ಸಿನಿಮಾದಲ್ಲಿ ಪಂಚತಂತ್ರ ಖ್ಯಾತಿಯ ವಿಹಾನ್‌ ಹಾಗೂ ‘ನಮ್ಮನೆ ಯುವರಾಣಿ’ ಖ್ಯಾತಿಯ ಅಂಕಿತಾ ಅಮರ್‌ ಹಾಗೂ ಮಯೂರಿ ನಟರಾಜ್ ನಟಿಸಿದ್ದಾರೆ. ‘ರಾಧೆ’ ಹಾಡಿನಲ್ಲಿ ಮಯೂರಿ ನಟರಾಜ್‌ ಹೆಜ್ಜೆ ಹಾಕಿದ್ದಾರೆ. ಗಗನ್ ಬಡೇರಿಯಾ ಅವರು ಸಂಗೀತ ಸಂಯೋಜಿಸಿರುವ ಈ ಗೀತೆಯ ಸಾಹಿತ್ಯವನ್ನು ಚಂದ್ರಜಿತ್‌ ಅವರೇ ಬರೆದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮೊದಲ ವಾರದಲ್ಲಿ ಸಿನಿಮಾ ರಿಲೀಸ್‌ಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT