ಮಂಗಳವಾರ, ಆಗಸ್ಟ್ 20, 2019
25 °C

ಜವಾನಿ ಜಾನೇಮನ್ ಲಂಡನ್‌ನಲ್ಲಿ ಚಿತ್ರೀಕರಣ

Published:
Updated:
Prajavani

ಜವಾನಿ ಜಾನೇಮನ್‌ ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಲಂಡನ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಅಲ್ಲಿ ಕೆಲ ವಾರಗಳಿಂದ ಬೀಡು ಬಿಟ್ಟಿದೆ. 

ಬಹಳ ವರ್ಷಗಳ ನಂತರ ಸೈಫ್‌ ಆಲಿಖಾನ್‌ ಹಾಗೂ ತಬು ಒಟ್ಟಿಗೆ ನಟಿಸುತ್ತಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿರುವ ಪೂಜಾ ಬೇಡಿ ಪುತ್ರಿ, ನಟಿ ಆಲಿಯಾ ಆಗಲೇ ಸ್ಟಾರ್‌ ಪಟ್ಟಕ್ಕೇರಿದ್ದಾರೆ. 

ಹೊಸ ಕಲಾವಿದರ ತಂಡ ಹಾಗೂ ಆಸಕ್ತಿಕರ ಚಿತ್ರಕತೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಮೂರು ನಿರ್ಮಾಣ ಸಂಸ್ಥೆಗಳು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಮತ್ತೊಂದು ಕಾರಣ. ಜಾಕಿ ಭಗ್ನಾನಿ ಅವರ ಪೂಜಾ ಎಂಟರ್‌ಟೇನ್‌ಮೆಂಟ್‌, ಸೈಫ್‌ ಆಲಿ ಖಾನ್‌ ಅವರ ಬ್ಲಾಕ್‌ ನೈಟ್‌ ಫಿಲ್ಮ್ಸ್‌ಹಾಗೂ ನರ್ತನ್‌ ಲೈಟ್ಸ್‌ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ.

ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ನಿತಿನ್‌ ಆರ್‌. ಕಕ್ಕರ್‌. 

ಜವಾನಿ ಜಾನೇಮನ್‌ ಚಿತ್ರವು ತಾಜಾ, ಉತ್ಸಾಹಭರಿತ ಕತೆಯನ್ನೊಳಗೊಂಡಿದ್ದು, ಅಪ್ಪ– ಮಗಳ ವಯಸ್ಸಿನ ವ್ಯತ್ಯಾಸದ ಕತೆಯನ್ನೊಳಗೊಂಡಿದೆ. ಈ ಚಿತ್ರದಲ್ಲಿ ತಮಾಷೆ, ಹಾಸ್ಯ, ಭಾವನಾತ್ಮಕ ನಂಟು, ಹಾಗೂ ಕೆಲ ಹೃದಯಸ್ಪರ್ಶಿ ದೃಶ್ಯಗಳು ಇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. 

ತಾಜಾ ಕತೆ, ಹೊಸ ಕಲಾವಿದರನ್ನೊಳಗೊಂಡ ಹೊಸ ತಂಡವೇ ಈ ಚಿತ್ರದಲ್ಲಿದೆ. ‘ಈ ಚಿತ್ರ ನಿಮ್ಮನ್ನು ನಗಿಸುತ್ತದೆ, ಅಳಿಸುತ್ತದೆ. ಕುಟುಂಬ ಸದಸ್ಯರ ಜೊತೆ ನೀವು ಈ ಸಿನಿಮಾವನ್ನು ನೋಡಿ ಆನಂದಿಸಬಹುದು’ ಎಂದು ಜಾಕಿ ಭಗ್ನಾನಿ ಹೇಳಿದ್ದಾರೆ. 

‘ಈ ಚಿತ್ರದ ಕತೆಯನ್ನು ಕೇಳಿದ ಕೂಡಲೇ ನಟಿಸಲು ಒಪ್ಪಿಕೊಂಡೆ. ಇಂತಹ ಒಂದು ಪಾತ್ರಕ್ಕಾಗಿಯೇ ಕಾಯುತ್ತಿದ್ದೆ’ ಎಂದು ನಟಿ ತಬು ಹೇಳಿದ್ದಾರೆ. 

ಈ ಚಿತ್ರ ನವೆಂಬರ್‌ 29ರಂದು ಬಿಡುಗಡೆಯಾಗಲಿದೆ.

Post Comments (+)