ಬುಧವಾರ, ನವೆಂಬರ್ 25, 2020
19 °C

'ಜಬ್‌ ವಿ ಮೆಟ್‌‌' ಖ್ಯಾತಿಯ ನಟ ಆಸೀಫ್‌ ಬಸ್ರಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಧರ್ಮಶಾಲ (ಹಿಮಾಚಲ ಪ್ರದೇಶ): 'ಜಬ್‌ ವಿ ಮೆಟ್‌‌', 'ಕಾಯ್‌ ಪೊ ಚೆ' ಮತ್ತು 'ಪಾತಾಳ್‌ ಲೋಕ್‌' ಸೇರಿದಂತೆ ಹಲವು ಚಿತ್ರ ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಪ್ರಖ್ಯಾತರಾಗಿದ್ದ ಆಸೀಫ್‌ ಬಸ್ರಾ (53) ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಆಸೀಫ್‌ ಬಸ್ರಾ ಇಂದು 12 ರಿಂದ 12.30 ರ ಸುಮಾರಿನಲ್ಲಿ ನೇಣಿಗೆ ಶರಣಾಗಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಇದು ಆತ್ಮಹತ್ಯೆ ಪ್ರಕರಣ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ,' ಎಂದು ಕಾಂಗ್ರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಮುಕ್ತ್ ರಂಜನ್ ಸುದ್ದಿಗಾರರಿಗೆ ತಿಳಿಸಿದರು.

ಬಸ್ರಾ ಸುಮಾರು ಐದಾರು ವರ್ಷಗಳ ಹಿಂದೆ ಧರ್ಮಶಾಲಾದ ಮೆಕ್ಲಿಯೋಡ್ ಗಂಜ್‌ನಲ್ಲಿ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ ಅನ್ನು ಭೋಗ್ಯಕ್ಕೆ ಪಡೆದಿದ್ದರು. ಅಲ್ಲಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲಿಯೇ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ನಟ ಮನೋಜ್‌ ಬಾಜಪೇಯಿ, 'ಇದು ತುಂಬಾ ಆಘಾತಕಾರಿ. ಲಾಕ್‌ಡೌನ್‌ಗೆ ಸ್ವಲ್ಪ ಮೊದಲು ಅವರೊಂದಿಗೆ ನಾನು ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಓ ದೇವರೇ,' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ನಿರ್ದೇಶಕ ಹನ್ಸಾಲ್ ಮೆಹ್ತಾ ಕೂಡ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಆಸಿಫ್ ಬಾಸ್ರಾ ಸಾವು ನಿಜಕ್ಕೂ ದುಃಖಕರ ಎಂದು ಹೇಳಿದ್ದಾರೆ.

ಎರಡು ದಶಕಗಳ ವೃತ್ತಿಜೀವನದಲ್ಲಿ ಬಸ್ರಾ ಅವರು 'ಬ್ಲ್ಯಾಕ್ ಫ್ರೈಡೇ', 'ಪಾರ್ಜಾನಿಯಾ' ಮತ್ತು ಔಟ್‌ಸೋರ್ಸ್ಡ್ಸ್‌' ಸೇರಿದಂತೆ ಜನ ಮೆಚ್ಚುಗೆ ಪಡೆದ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು.

ಮಿಲನ್ ಲುಥ್ರಿಯಾ ಅವರ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ (2010)' ನಲ್ಲಿ ಇಮ್ರಾನ್ ಹಶ್ಮಿಯ ತಂದೆ ಪಾತ್ರಧಾರಿಯಾಗಿ ನಟಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು