ಶುಕ್ರವಾರ, ಜನವರಿ 27, 2023
26 °C

ಹಣ ಅಕ್ರಮ ವರ್ಗಾವಣೆ: ಗುರುವಾರವೂ ಇ.ಡಿ ವಿಚಾರಣೆಗೆ ಹಾಜರಾದ ಜಾಕ್ವೆಲಿನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ (ಇ.ಡಿ) ಗುರುವಾರವೂ  ವಿಚಾರಣೆಗೆ ಹಾಜರಾದರು. 

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್‌ ಅವರ ವಿಚಾರಣೆಯನ್ನು ಇ.ಡಿ ಮುಂದುವರಿಸಿದೆ. 

ಬುಧವಾರ ಇ.ಡಿ ವಿಚಾರಣೆಗೆ ಹಾಜರಾಗಿದ್ದ ಜಾಕ್ವೆಲಿನ್‌ ಅವರನ್ನು ಸತತ 6 ಗಂಟೆಗಳ ಕಾಲ ಪ್ರಶ್ನೆ ಮಾಡಲಾಗಿತ್ತು. 

₹200 ಕೋಟಿ ಹಣ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್‌ ಹೆಸರು ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಅವರನ್ನು ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ.

ಹೊರದೇಶಗಳಿಗೆ ತೆರಳದಂತೆ ಜಾಕ್ವೆಲಿನ್‌ ಮೇಲೆ ಲುಕ್‌ ಔಟ್‌ ನೋಟಿಸ್‌ ಸಹ ಜಾರಿಯಾಗಿದೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು