ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘನಾ ತಂದೆ ತಾಯಿಯನ್ನು ನೀವೆ ಒಪ್ಪಿಸಬೇಕು ಎಂದಿದ್ದ ಚಿರು: ಜಗ್ಗೇಶ್‌ ನೆನಪು

Last Updated 8 ಜೂನ್ 2020, 3:32 IST
ಅಕ್ಷರ ಗಾತ್ರ

ಬೆಂಗಳೂರು: ಇಹಲೋಕ ತ್ಯಜಿಸಿರುವ ಕನ್ನಡದ ಖ್ಯಾತ ಯುವ ನಟ ಚಿರಂಜೀವಿ ಸರ್ಜಾ ಅವರ ಕುರಿತ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಿರಿಯ ನಟ ಜಗ್ಗೇಶ್‌ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ಚಿರು ಮತ್ತು ನಟಿ ಮೇಘನಾ ಅವರು ಮದುವೆಯಾಗಲು ತೀರ್ಮಾನಿಸಿ, ಮದುವೆಗೆಮೇಘನಾ ಅವರ ತಂದೆ ತಾಯಿಯನ್ನು ಒಪ್ಪಿಸುವ ಜವಾಬ್ದಾರಿಯನ್ನು ಚಿರು ತಮಗೆ ವಹಿಸಿದ್ದಾಗಿಯೂ ಜಗ್ಗೇಶ್‌ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಜಗ್ಗೇಶ್‌ ಪೋಸ್ಟ್‌ನಲ್ಲಿ ಏನಿದೆ? ಓದಿ

11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ಪ್ಲೀಸ್‌ ಮಾಮ Forget ಅಂದ.

ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಎಂದು ಚಿರು ಹೇಳಿದ. ಸುಂದರ್ ರಾಜ್‌ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಣಾಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅಮ್ಮಣ್ಣಾಯ ಅವರು‘ಜಗ್ಗೇಶ್... ಅಷ್ಟಮಕುಜ ದೋಷ ಇದೆ. ಅದಕ್ಕೆ ಕೆಲ ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರೆಯಿರಿ’ ಎಂದರು. ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು.

ನಟ ಗಣೇಶನ ಜೊತೆ ಒಂದು ಅತಿಥಿ ಪಾತ್ರ ನಿಗದಿಯಾಗಿತ್ತು.ಆ ಚಿತ್ರೀಕರಣ ಮೇಘನಾ ಮನೆ ಮುಂದೆಯೇ ನಡೆಯಿತು. ಚಿತ್ರೀಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು, ಅವರ ಮದುವೆಯ ವಿಷಯ ಮಾತಾಡಿದೆ. ಮದುವೆ ನಿಗದಿಯಾಯಿತು.ಮೇಘನಾ ಹಾಗೂ ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು. ದೇವರ ದಯೆಯಿಂದ ಮದುವೆಯು ಮುಗಿಯಿತು.

ನಂತರ ಚಿರು ಅನೇಕ ಬಾರಿ ಕರೆಮಾಡಿ ‘ಮಾಮ ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ’ ಎಂದು ಕರೆಯುತ್ತಿದ್ದ. ನನ್ನದು ವಿಚಿತ್ರ ಜನ್ಮ. ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ. ಯಾಕೋ ಇಂದು (ಭಾನುವಾರ) ನಾನು ಮತ್ತು ಪರಿಮಳ ಚಿರು ಬಗ್ಗೆ ಮಾತಾಡುತ್ತಾ ‘ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ ಗ್ಯಾಪ್‌? ಇಷ್ಟೊತ್ತಿಗೆ ಸಿಹಿಸುದ್ದಿಬೇಕಿತ್ತು’ ಎಂದು ಚರ್ಚಿಸಿದೆವು. ನಂತರ ಮಧ್ಯಾಹ್ನ ಊಟ ಮಾಡಿ ಮಲಗಿದೆ.

ಚಾಲಕ ಪದ್ದು ಕರೆಮಾಡಿ, ‘ಬಾಸ್‌ ಟೀವಿನೋಡಿದ್ರಾ..? ಚಿರು ಹೋಗಿಬಿಟ್ಟಾ,’ ಎಂದ. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ. ಇಷ್ಟೇನಾ ಬದುಕು? ಇದಕ್ಕಾ ನಮ್ಮ ಹೋರಾಟ.? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ? ಎಂಥ ದೌರ್ಭಾಗ್ಯ? ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು. ಆ ಸಾಲಿಗೆ ಚಿರು ಸೇರಿಬಿಟ್ಟನೆ?

ಹುಟ್ಟಿಗೆ ಸಾವು ಖಚಿತ. ಆದರೆ ಇಷ್ಟು ಬೇಗವೇ? ಓ ದೇವರೆ ಈ ಸಾವು ನ್ಯಾಯವೆ?

ಹೀಗೆಂದು ಜಗ್ಗೇಶ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು.! ಸಿಟ್ಟಿನಿಂದ ಯಾರು ಅಂದೆ..? ನಾನು ಮಾಮ ಚಿರು ಅಂದ.! ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ.! ನಕ್ಕು Pls ಮಾಮ Forget.! ಅಂದ. ವಿಷಯ ನಾನು ಮೇಘನ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು.! ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಅಂದ.! ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ #ಪ್ರಕಾಶಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ.. ಆಗ ಅವರು ಹೇಳಿದ್ದು "ಜಗ್ಗೇಶ್, ಅಷ್ಟಮಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ.. ಅದಮಾಡಿ ಮುಂದುವರೆಯಿರಿ" ಎಂದರು.. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ.. ಮದುವೆ ನಿಶ್ಚಯ ಆಯಿತು.. ಗಣೇಶನ ಜೊತೆ ಒಂದು Guest Roll ಭಟ್ರ Combo ಮಾಡಿದೆ.. ಆ ಚಿತ್ರಿಕರಣ ಮೇಘನ ಮನೆ ಮುಂದೆಯೇ ಇತ್ತು.! ಚಿತ್ರಿಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು ಅವರ ಮದುವೆಯ ವಿಷಯ ಮಾತಾಡಿ fix ಆಗಿ ಮೇಘನ ಹಾಗು ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು.. ದೇವರ ದಯೆಯಿಂದ ಮದುವೆಯು ಮುಗಿಯಿತು.. ನಂತರ ಚಿರು ಅನೇಕ ಬಾರಿ ಕರೆಮಾಡಿ "ಮಾಮ Pls ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ" ಎಂದು ಕರೆಯುತ್ತಿದ್ದ.! ನನ್ನದು ವಿಚಿತ್ರ ಜನ್ಮ, ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ.. ಯಾಕೋ ಇಂದು ನಾನು ಪರಿಮಳ ಚಿರು ಬಗ್ಗೆ ಮಾತಾಡುತ್ತಾ "ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ Gap.? ಇಷ್ಟೊತ್ತಿಗೆ Good News ಬೇಕಿತ್ತು" ಎಂದು ಮಾತಾಡಿಕೊಂಡೆವು.! ಮಧ್ಯಾಹ್ನ ಊಟ ಮಾಡಿ ಮಲಗಿದೆ.. ಚಾಲಕ ಪದ್ದು ಕರೆಮಾಡಿ, Boss TV ನೋಡಿದ್ರಾ..? ಚಿರು ಹೋಗಿಬಿಟ್ಟಾ ಎಂದ.. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ.. ಇಷ್ಟೇನಾ ಬದುಕು.? ಇದಕ್ಕಾ ನಮ್ಮ ಹೋರಾಟ..? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ.? ಎಂಥ ದೌರ್ಭಾಗ್ಯ..! ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು.. ಆ ಸಾಲಿಗೆ ಚಿರು ಸೇರಿಬಿಟ್ಟನೆ..! 😢 ಹುಟ್ಟಿಗೆ ಸಾವು ಖಚಿತ.. ಆದರೆ ಇಷ್ಟು ಬೇಗವೇ.!? ಓ ದೇವರೆ ಈ ಸಾವು ನ್ಯಾಯವೆ.!? 😢 ದುಃಖದಿಂದ ವಿದಾಯ ಕಲಾಬಂಧುವಿಗೆ.. ಓಂಶಾಂತಿ!

A post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh) on

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT