ಶನಿವಾರ, ಜುಲೈ 24, 2021
22 °C

ಶಿವಣ್ಣನನ್ನು ದೊಡ್ಡ ನೋಟಿನ ಸಾಹುಕಾರ ಎನ್ನುತ್ತಿದ್ದರು ರಾಜಣ್ಣ: ಜಗ್ಗೇಶ್‌ ನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್‌ಕುಮಾರ್‌ ಅವರನ್ನು ಮೇರು ನಟ ರಾಜ್‌ಕುಮಾರ್‌ ಅವರು ದೊಡ್ಡ ನೋಟಿನ ಸಾಹುಕಾರ ಎಂದು ಕರೆಯುತ್ತಿದ್ದರು ಎಂದು ಜಗ್ಗೇಶ್‌ ನೆನಪು ಹಂಚಿಕೊಂಡಿದ್ದಾರೆ.

ನಟ ಶಿವರಾಜ್‌ಕುಮಾರ್‌ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿ ಟ್ವೀಟ್‌ ಮಾಡುವ ವೇಳೆ ಜಗ್ಗೇಶ್‌ ಈ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.

ಏನು ಹೇಳಿದ್ದಾರೆ ಟ್ವೀಟ್‌ನಲ್ಲಿ

ನಟ ಶಿವರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ಶುಭ ಕೋರಿ ಜಗ್ಗೇಶ್‌ ಮೊದಲಿಗೆ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ಗೆ ಕಮೆಂಟ್‌ ಮಾಡಿದ್ದ ಜಗ್ಗೇಶ್‌ ಅಭಿಮಾನಿಯೊಬ್ಬರು , ‘ಸರ್ ಶಿವಣ್ಣನವರು ನಿಮಗಿಂತ ವಯಸ್ಸಲ್ಲಿ ದೊಡ್ಡವರು ಅಲ್ವಾ?’ ಎಂದು ಕಮೆಂಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದನ್ನು ರೀಟ್ವೀಟ್‌ ಮಾಡಿರುವ ಜಗ್ಗೇಶ ‘ನನ್ನ ಬದುಕಲ್ಲಿ ನಾನು ಕಂಡ ಶ್ರೇಷ್ಠಮನುಜ ರಾಜಕುಮಾರ್‌ ಅವರು ಶಿವರಾಜ್‌ಕುಮಾರ್‌ ಅವರನ್ನು ದೊಡ್ಡ ನೋಟಿನ ಸಾಹುಕಾರ ಎಂದು ಕರೆಯುತ್ತಿದ್ದರು. ಶಿವಣ್ಣ ಹುಟ್ಟಿದ ದಿನ ರಾಜ್‌ಕುಮಾರ್ ಅವರಿಗೆ ನಿರ್ಮಾಪಕರು 6 ಸಾವಿರವನ್ನು ಮುಂಗಡವಾಗಿ ನೀಡಿದ್ದರಂತೆ,’ ಎಂದು ಕುತೂಹಲಕಾರಿ ಸಂಗತಿಯೊಂದನ್ನೂ ಅವರೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು