ಕನ್ನಡದ ಹಿರಿಯ ನಟ ಜಗ್ಗೇಶ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ. ಅದರಲ್ಲೂ ರಾಘವೇಂದ್ರಸ್ವಾಮಿ ಅಂದರೆ ಇನ್ನಿಲ್ಲದ ಪ್ರೀತಿ. ‘ರಣಧೀರ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರವಿಚಂದ್ರನ್ ಅವರು ದೇವರಿಗೆ ಪೂಜೆ ಸಲ್ಲಿಸಲು ಧನ ಸಹಾಯ ಮಾಡಿದ ಪ್ರಸಂಗವೊಂದನ್ನು ಜಗ್ಗೇಶ್ ಅವರು ಮೆಲುಕು ಹಾಕಿದ್ದಾರೆ.

ನಟ ಜಗ್ಗೇಶ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾನು1986ರಲ್ಲಿ ಮೊದಲು ಮನೆ ಮಾಡಿದಾಗ ದೇವರ ಮನೆ ಇರಲಿಲ್ಲ. ಬಾಲ್ಯದಿಂದ ಅಮ್ಮನಿಂದ ಕಲಿತ ದೇವರ ಪೂಜೆ ಮುಂದುವರಿಸಲು ಮಲ್ಲೇಶ್ವರ 8ನೇ ಕ್ರಾಸ್ ನಲ್ಲಿ ₹40 ಕೊಟ್ಟು ಗಣಪ ಹಾಗೂ ರಾಯರ ಮಣ್ಣಿನ ವಿಗ್ರಹವನ್ನು ಕೊಂಡುಬಂದೆ. ಆದರೆ ಜಾಗದ ಅಭಾವದಿಂದ ಅಡುಗೆ ಮನೆಯ ಮೂಲೆಯಲ್ಲಿ ಮಣೆಯ ಮೇಲೆ ಅವುಗಳನ್ನು ಸ್ಥಾಪಿಸಿ ನನ್ನ ಪೂಜೆ ಆರಂಭಿಸಿ ಇಂದಿಗೆ 40 ವರ್ಷವಾಯಿತು‘

‘ಈ ವಿಗ್ರಹಗಳ ಮುಂದೆ ಅದೆಷ್ಟು ಕಣ್ಣೀರು ಹರಿಸಿ, ನಾನು ನನ್ನ ಕಾಲ ಮೇಲೆ ನಿಲ್ಲಲು ಬೇಡಿಕೊಂಡಿದ್ದೆ. ನನಗಾಗುತ್ತಿದ್ದ ಅದೆಷ್ಟು ಅವಮಾನಗಳನ್ನು ಈ ವಿಗ್ರಹಗಳಿಗೆ ಅರ್ಪಿಸುತ್ತಿದ್ದೆ. ನನಗೆ ದೇವರ ಮೇಲಿನ ನಂಬಿಕೆ ಅದೆಷ್ಟು ಗಾಢವಾಗಿತ್ತೆಂದರೆ, ನಾನು ಮಾಡಿದ ಉಪವಾಸ, ವ್ರತಗಳು, ಪೂಜೆ, ಏಕಾಂತ ಸೇವೆ ಈಗ ನೆನೆದರೂ ರೋಮಾಂಚನವಾಗುತ್ತದೆ‘ ಎಂದಿದ್ದಾರೆ.

‘40 ವರ್ಷದಿಂದ ಈ ಗಣಪನಿಗೆ ಗಣೇಶವ್ರತ ತಪ್ಪದೇ ಇಂದಿಗೂ ಮಾಡುವೆ. ಅದರಲ್ಲಿ ವಿಶೇಷ ವರ್ಷ ಎಂದರೆ 1987ರ ಚತುರ್ಥಿಯ ದಿನ. ಸಂಜೆ 'ರಣಧೀರ' ಚಿತ್ರೀಕರಣ ಮುಗಿದಮೇಲೆ ಬಂದು ಪೂಜೆ ಮಾಡುವ ಎಂದು ಹೋದೆ, ನೋಡಿದರೆ ಕ್ಲೈಮ್ಯಾಕ್ಸ್ ಚಿತ್ರೀಕರಣ ರಾತ್ರಿ 2 ಗಂಟೆಯಾದರೂ ಮುಗಿಯುತ್ತಿಲ್ಲ. ಏನು ಮಾಡುವುದು ದೇವರೇ ಎಂದು ಮನಸ್ಸಿನಲ್ಲೇ ಕೊರಗುತ್ತಿದ್ದೆ. ರಾತ್ರಿ 2.40ಕ್ಕೆ ಶೂಟಿಂಗ್ ಏನೂ ಮುಗಿಯಿತು. ಆದರೆ, ಕೈಯಲ್ಲಿ ಬಿಡಿಗಾಸು ಇರಲಿಲ್ಲ‘
.‘ಸ್ವಾತಂತ್ರ್ಯವಾಗಿರಿಸುವ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳಿ’ ರಶ್ಮಿಕಾ ಮಂದಣ್ಣ.
‘ಧೈರ್ಯಮಾಡಿ ರವಿಚಂದ್ರನ್ ಅವರಿಗೆ 'ಸಾರ್' ಎಂದೆ. ಆಗಲೇ ಧಣಿದಿದ್ದ ಅವರು 'ಏನೋ..? ಎಂದರು ‘ಸಾರ್.. ಪೂಜೆಗೆ ಕಾಸಿಲ್ಲಾ.. ₹200 ಕೊಡಿ' ಎಂದೆ. ಆಗ ರವಿ ಸಾರ್, ಅವರ ಮ್ಯಾನೇಜರ್ ಬಾಬು ಅವರನ್ನು ಕರೆದು ‘ಬಾಬು ಇವನಿಗೆ ₹500 ಕೊಡು‘ ಎಂದರು. ಆ ಕ್ಷಣಕ್ಕೆ ನನ್ನ ಸಂತೋಷ ಹೇಳತೀರದು (ನಮ್ಮ ರವಿಚಂದ್ರನ್ ಹೃದಯವಂತ, ಹಾಗಾಗಿ ಇಂದು ನಾನು ಎಷ್ಟೇ ಬೆಳದಿದ್ದರು ಅವರ ಮೇಲೆ ವಿಶೇಷ ಗೌರವ. ಇದೇ ಕಾರಣಕ್ಕೆ ನಾನು ನನ್ನ ‘ಭಂಡ ನನ್ನ ಗಂಡ‘ ಚಿತ್ರದ ಹಾಡಿನಲ್ಲಿ ‘ಹತ್ತಿದ್ದ ಏಣಿನಾ ಒದಿಬ್ಯಾಡ‘ ಎಂಬ ಸಾಲು ಬರೆಸಿದ್ದೆ. I always love you sir ❤️) ಅಂದು ಅಲ್ಲಿಂದ ಬೈಕ್ ಹತ್ತಿ ಮಲ್ಲೇಶ್ವರ ಮಾರುಕಟ್ಟೆಗೆ ಬಂದು ಹೂವು ಹಣ್ಣು ಖರೀದಿಸಿ, ಬೆಳಗಿನ ಜಾವ 5 ಗಂಟೆಗೆ ಪೂಜೆ ಮಾಡಿ ಮುಗಿಸಿ ಮಲಗಿದೆ‘ ಎಂದು ಆ ದಿನಗಳ ನೆನಪು ಮೆಲುಕು ಹಾಕಿದ್ದಾರೆ.

‘ಇಂದಿಗೂ ನನ್ನ ಭಕ್ತಿ ಕುಂದಿಲ್ಲಾ. ಮುಂದುವರಿದು ಯಾವುದೇ ಆಲಯವಾಗಲಿ ಕಸಗುಡಿಸಿ ಸೇವೆ ಮಾಡುವೆ. ಕಾರಣ ನನ್ನಲ್ಲಿ ಅಹಂಕಾರ ಹತ್ತಿರ ಸುಳಿಯಬಾರದು ಎಂದು. ಒಂದಂತು ಸತ್ಯ, ದೇವರ ಸೇವೆ ಯಾವುದೇ ರೂಪವಾಗಲಿ ಮನುಷ್ಯರು ಮಾಡಲೇಬೇಕು, ಕಾರಣ ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಕಷ್ಟಕ್ಕೆ ಮನುಷ್ಯ ರೂಪದಲ್ಲಿ ದೇವರು ಬಂದು ನಮ್ಮನ್ನ ಕಾಪಾಡುತ್ತಾನೆ ಎಂಬುವುದು ನನ್ನ ನಂಬಿಕೆ‘ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.