ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ಜನ್ಮವಿದ್ದರೆ ಶಿವಣ್ಣ ನನಗೆ ಅಣ್ಣನಾಗಿ ಬರಲಿ ಎಂದ ಜಗ್ಗೇಶ್‌

Last Updated 12 ಜುಲೈ 2020, 6:56 IST
ಅಕ್ಷರ ಗಾತ್ರ

ಬೆಂಗಳೂರು: ಇಂದು ನಟ ಶಿವರಾಜ್‌ ಕುಮಾರ್‌ ಅವರ ಜನ್ಮದಿನ. ಶಿವಣ್ಣನ ಜನ್ಮದಿನಕ್ಕೆ ಶುಭ ಕೋರಿರುವ ನಟ ಜಗ್ಗೇಶ್‌, ಇನ್ನೊಂದು ಜನ್ಮವಿದ್ದರೆ ಶಿವರಾಜ್‌ಕುಮಾರ್‌ ಅವರು ನನಗೆ ಅಣ್ಣನಾಗಿ ಬರಲಿ ಎಂದು ಕೋರಿದ್ದಾರೆ.

ಶಿವರಾಜ್‌ಕುಮಾರ್‌ ಅವರ ಜನ್ಮದಿನಕ್ಕೆ ಟ್ವೀಟ್‌ ಮಾಡಿ ಶುಭ ಕೋರಿರುವ ಜಗ್ಗೇಶ್‌, ‘ನಲ್ಮೆಯ ಸಹೋದರ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡಿಗರ ರಂಜಿಸುತ್ತಾ ನೂರ್ಕಾಲ ಸುಖವಾಗಿ ಬಾಳಿ,’ ಎಂದು ಜಗ್ಗೇಶ್‌ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ನಂತರ ಜಗ್ಗೇಶ್‌ ಅಭಿಮಾನಿಯೊಬ್ಬರು, ‘ಸರ್ ಶಿವಣ್ಣನವರು ನಿಮಗಿಂತ ವಯಸ್ಸಲ್ಲಿ ದೊಡ್ಡವರು ಅಲ್ವಾ?’ ಎಂದು ಕಮೆಂಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಯ ಈ ಕಮೆಂಟ್‌ ಅನ್ನು ರೀಟ್ವೀಟ್‌ ಮಾಡಿರುವ ಜಗ್ಗೇಶ್‌, ‘ಶಿವಣ್ಣ 12/7/62, ನಾನು 17/3/63. ನನಗಿಂತ 8 ತಿಂಗಳು ಶಿವಣ್ಣ ಹಿರಿಯರು. ನನಗೆ ಇನ್ನೊಂದು ಜನ್ಮ ಇದ್ದರೆ ಶಿವಣ್ಣನೆ ನನಗೆ ಅಣ್ಣನಾಗಿ ಬರಲಿ,’ ಎಂದು ಜಗ್ಗೇಶ್‌ ಹೇಳಿದ್ದಾರೆ.

ದೊಡ್ಡ ನೋಟಿನ ಸಾಹುಕಾರ

‘ನನ್ನ ಬದುಕಲ್ಲಿ ನಾನು ಕಂಡ ಶ್ರೇಷ್ಠಮನುಜ ರಾಜಕುಮಾರ್‌ ಅವರು ಶಿವರಾಜ್‌ಕುಮಾರ್‌ ಅವರನ್ನು ದೊಡ್ಡ ನೋಟಿನ ಸಾಹುಕಾರ ಎಂದು ಕರೆಯುತ್ತಿದ್ದರು. ಶಿವಣ್ಣ ಹುಟ್ಟಿದ ದಿನ ರಾಜ್‌ಕುಮಾರ್ ಅವರಿಗೆ ನಿರ್ಮಾಪಕರು 6 ಸಾವಿರವನ್ನು ಮುಂಗಡವಾಗಿ ನೀಡಿದ್ದರಂತೆ,’ ಎಂದು ಕುತೂಹಲಕಾರಿ ಸಂಗತಿಯೊಂದನ್ನೂ ಅವರೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT