ಬೆಂಗಳೂರು: ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ಕಿರು ಚಲನಚಿತ್ರೋತ್ಸವ ಗುರುವಾರ ಮುಕ್ತಾಯವಾಯಿತು.

ಕಿರುಚಿತ್ರೋತ್ಸವದ ತೀರ್ಪುಗಾರ, ಲವ್ ಮಾಕ್ಟೇಲ್ ಸರಣಿಯ ಸಂಕಲನಕಾರ ಕ್ರೇಜಿ ಮೈಂಡ್ಸ್ ಮಾತನಾಡಿ, ‘ಚಲನಚಿತ್ರದಲ್ಲಿ ಅಸಾಧಾರಣ ಕಥೆಯ ಚಿತ್ರಕಥೆ ಮತ್ತು ಸಂಕಲನದ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.

ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ, ಅದು ಎಂದಿಗೂ ಮಾನವನ ಭಾವನೆಯ ಜಟಿಲತೆಗಳನ್ನು ತೋರಿಸಲು ಸಾಧ್ಯವಿಲ್ಲ. ಸಿನಿಮಾದಲ್ಲಿ ಎಐ ತಂತ್ರಜ್ಞಾನದ ಬಳಕೆ ದಶಕದ ಹಿಂದಿನಿಂದಲೂ ಇದೆ ಎಂದು ಹೇಳಿದರು.

ಫಿಲ್ಮ್ಫೇರ್ ಪ್ರಶಸ್ತಿ ವಿಜೇತ ನವೀನ್ ಶಂಕರ್ ಮಾತನಾಡಿ, ‘ಈ ರೀತಿಯ ಚಲನಚಿತ್ರೋತ್ಸವ ಹೊಸ ಆಲೋಚನೆ ಮತ್ತು ಉತ್ಸಾಹಕ್ಕೆ ಕಾರಣವಾಗುತ್ತದೆ. ಚಿತ್ರ ಮಾಡಲು ಧೈರ್ಯವನ್ನು ತಂದುಕೊಡುತ್ತದೆ. ಕಾಲೇಜು ಆವರಣದಲ್ಲಿ ಚಿತ್ರೋತ್ಸವ ನಡೆಯುತ್ತಿರುವುದರಿಂದ ಅದರ ಪರಿಣಾಮ ಹೆಚ್ಚಿರುತ್ತದೆ. ವಿದ್ಯಾರ್ಥಿಗಳನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿ ಮಾಡುತ್ತದೆ’ ಎಂದರು.

ತೀರ್ಪುಗಾರರ ಸಮಿತಿ ಸದಸ್ಯ ಬಿ.ಎಸ್. ಕೆಂಪರಾಜು, ನವೀನ್ ದ್ವಾರಕನಾಥ್, ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಸಹ ಕುಲಪತಿ ದಿನೇಶ್ ನೀಲಕಾಂತ್, ಶೈಕ್ಷಣಿಕ ವಿಭಾಗದ ಉಪ-ಡೀನ್ ಕಿರಣ್ ಎಸ್., ಪ್ರಾಧ್ಯಾಪಕಿ ಸಂಗೀತಾ ದೇವನಾಥನ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಭಾರ್ಗವಿ ಡಿ. ಹೆಮ್ಮಿಗೆ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-4-1334972566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.