ಜಮಖಂಡಿ: ಹಿಪ್ಪರಗಿ ಬ್ಯಾರೇಜ್ನಿಂದ ಚಿಕ್ಕಪಡಸಲಗಿ ಶ್ರಮ ಬಿಂದು ಸಾಗರದವರೆಗೆ ಕೃಷ್ಣಾ ನದಿ ಸಂಪೂರ್ಣ ಬತ್ತಿರುವುದರಿಂದ ಸಾಕಷ್ಟು ನೀರು ಸಿಗದೇ ಜಾನುವಾರುಗಳು ಸಂಕಟ ಪಡುತ್ತಿವೆ. ಕಲುಷಿತ ನೀರು ಕುಡಿದು ಜಾನುವಾರುಗಳ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿದ್ದು ರೈತರು ಗಾಬರಿಯಾಗುವಂತಾಗಿದೆ.

ಕೃಷ್ಣಾ ನದಿಯ ಎಡ ಮತ್ತು ಬಲ ಗ್ರಾಮದಲ್ಲಿ ರೈತರು ಕೃಷಿ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ನೀರಿನ ಕೊರತೆಯಿಂದ ಹೈನುಗಾರಿಕೆ ಮೇಲೆ ಕರಿನೇರಳು ಬಿದ್ದಿದೆ.

ನದಿಯಲ್ಲಿ ನೀರು ಖಾಲಿಯಾಗಿರುವದರಿಂದ ಜಾನುವಾರುಗಳಿಗೆ ರೈತರು ನದಿಯಲ್ಲಿ ಗುಂಡಿಗಳನ್ನು ತೆಗೆದು ಟ್ಯಾಂಕರ್ ಮೂಲಕ ನೀರು ತಂದು ಕುಡಿಸುತ್ತಿದ್ದಾರೆ. ಆದರೆ ನದಿಯಲ್ಲಿ ಗುಂಡಿ ತೆಗೆಯುವುದರಿಂದ ನೀರು ಬಸಿದು ಉಪ್ಪು ನೀರು ಬರುವುದು ಒಂದು ಕಡೆಯಾದರೆ ಸಕ್ಕರೆ ಕಾರ್ಖಾನೆಗಳ ತ್ಯಾಜ್ಯ ಮತ್ತು ಚರಂಡಿ ನೀರು ನದಿಗೆ ಹರಿದು ಬಂದು ಗುಂಡಿಗೆ ಸೇರುತ್ತಿದೆ. ಆ ಗುಂಡಿಯ ನೀರನ್ನು ಜಾನುವಾರುಗಳಿಗೆ ಕುಡಿಸುವುದರಿಂದ ಜಾನುವಾರುಗಳಿಗೆ ಚರ್ಮರೋಗ ಕಂಡು ಬರುತ್ತಿದೆ. ಉಪ್ಪು ನೀರಿನಿಂದ ಭೇದಿ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗುತ್ತಿವೆ.

‘ಬೇಸಿಗೆಯಲ್ಲಿ ಸರಿಯಾದ ನೀರು ಹಾಗೂ ಹಸಿ ಮೇವು ಸಿಗದ ಕಾರಣ ಜಾನುವಾರುಗಳು ಅರ್ಧದಷ್ಟು ಹಾಲು ಉತ್ಪಾದನೆ ಕಡಿಮೆ ಮಾಡಿವೆ. ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಕೂಡಲೇ ಅಧಿಕಾರಿಗಳು ನದಿ ಬಿಟ್ಟು ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಮಹಾರಾಷ್ಟ್ರದಿಂದ ನೀರು ತರುವ ಕಾರ್ಯ ಮಾಡಬೇಕು’ ಎಂದು ರೈತ ಮುಖಂಡ ರಾಜು ನದಾಫ್ ಹೇಳಿದರು.

‘ನದಿ ಪಕ್ಕದ ಅಂದಾಜು 10 ಕಿ.ಮೀವರೆಗೆ ಯಾವುದೇ ಕೊಳವೆ ಬಾವಿ ಅಥವಾ ತೆರೆದ ಬಾವಿ ತೆಗೆದರೆ ಉಪ್ಪು ನೀರು ಬರುತ್ತದೆ. ಇದನ್ನು ಭೂಮಿಗೆ ನೀರು ಬಿಟ್ಟರೆ ಭೂಮಿಯೂ ಸವಳಾಗುತ್ತದೆ. ಜನ ಜಾನುವಾರುಗಳು ಉಪ್ಪು ನೀರನ್ನು ಕುಡಿಯುವುದಿಲ್ಲ. ಆದ್ದರಿಂದ ನದಿ ಪಕ್ಕದ ಗ್ರಾಮಗಳು ನದಿ ನೀರನ್ನು ನಂಬಿ ಜೀವನ ಮಾಡುವಂತಾಗಿದೆ. ಆದರೆ ನದಿ ಖಾಲಿಯಾಗಿ ನಮ್ಮ ಪರಿಸ್ಥಿತಿ ಹೇಳತೀರದಂತಾಗಿದೆ’ ಎಂದು ರೈತ ಕಲ್ಲಪ್ಪ ಬಿರಾದಾರ ಅಳಲು ತೋಡಿಕೊಂಡರು.

ತಾಲ್ಲೂಕಿನಲ್ಲಿ ಪ್ರತಿದಿನ 40 ಸಾವಿರ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ. ರೈತರಿಗೆ ಇದರಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ಹಾನಿಯಾಗುತ್ತಿದೆ ಶೇ 25 ರಷ್ಟು ಹಾಲಿನ ಕೊರತೆ ಕಾಣುತ್ತಿದೆ ಎಂದು ಹಾಲು ತುಂಬುವ ಗೌಳಿಗರೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-19-113021842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.