ಸೋಮವಾರ, ಫೆಬ್ರವರಿ 24, 2020
19 °C

ಅಪ್ಪು ಹುಟ್ಟುಹಬ್ಬದ ಬಳಿಕ ‘ಜೇಮ್ಸ್‌’ ಶೂಟಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಿರ್ದೇಶಕ ಚೇತನ್‌ಕುಮಾರ್‌ ಮತ್ತು ನಟ ಪುನೀತ್‌ರಾಜ್‌ಕುಮಾರ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗಲಿರುವ ‘ಜೇಮ್ಸ್‌’ ನಿರೀಕ್ಷೆ ಹೆಚ್ಚಿಸಿರುವ ಚಿತ್ರ. ಈಗಾಗಲೇ, ಇದರ ಮುಹೂರ್ತವೂ ನೆರವೇರಿದೆ. ಆದರೆ, ಚಿತ್ರತಂಡ ಯಾವಾಗ ಶೂಟಿಂಗ್‌ ಆರಂಭಿಸುತ್ತದೆ ಎಂಬ ಕುತೂಹಲ ಅಪ್ಪು ಅವರ ಅಭಿಮಾನಿಗಳದ್ದು. ಇದಕ್ಕೆ ನಿರ್ದೇಶಕರೇ ಉತ್ತರ ನೀಡಿದ್ದಾರೆ.

ಪ್ರಸ್ತುತ ಹೊಂಬಾಳೆ ಫಿಲ್ಮ್ಸ್‌ನಡಿ ನಿರ್ಮಾಣವಾಗುತ್ತಿರುವ ‘ಯುವರತ್ನ’ ಚಿತ್ರದಲ್ಲಿ ಪುನೀತ್‌ ನಟಿಸುತ್ತಿದ್ದಾರೆ. ಇದರ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ‘ಜೇಮ್ಸ್‌’ನ ಅಬ್ಬರ ಶುರುವಾಗುವುದು ಇದು ಮುಗಿದ ಬಳಿಕವಷ್ಟೇ. ಮಾರ್ಚ್‌ 17ರಂದು ಪುನೀತ್‌ ಅವರ ಹುಟ್ಟುಹಬ್ಬ. ಆ ನಂತರವೇ ‘ಜೇಮ್ಸ್‌’ ಚಿತ್ರೀಕರಣಕ್ಕೆ ನಿರ್ದೇಶಕರು ನಿರ್ಧರಿಸಿದ್ದಾರಂತೆ.

‘ಜೇಮ್ಸ್‌ನಲ್ಲಿ ಅಪ್ಪು ಅವರ ಹೇರ್‌ಸ್ಟೈಲ್‌ ಸಂಪೂರ್ಣ ಬದಲಾಗಲಿದೆ. ಈ ಬಗ್ಗೆ ಮುಂಬೈ ಮತ್ತು ಹೈದರಾಬಾದ್‌ನ ನುರಿತ ಕೇಶವಿನ್ಯಾಸಕರ ಜೊತೆಗೆ ಚರ್ಚಿಸಿದ್ದೇವೆ.  ಬೆಂಗಳೂರಿನಲ್ಲಿಯೇ ಮೊದಲ ಹಂತದ ಶೂಟಿಂಗ್ ನಡೆಸಲು ತೀರ್ಮಾನಿಸಲಾಗಿದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ಚೇತನ್‌ಕುಮಾರ್.

‘ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಶೂಟಿಂಗ್‌ ನಡೆಸಲು ಯೋಜನೆ ರೂಪಿಸಿದ್ದೇವೆ. ವಿದೇಶದಲ್ಲಿಯೂ ಚಿತ್ರೀಕರಣ ನಡೆಸಲಾಗುವುದು. ಇನ್ನೂ ಚಿತ್ರದ ನಾಯಕಿಯ ಆಯ್ಕೆ ಅಂತಿಮಗೊಂಡಿಲ್ಲ. ಇದೊಂದು ಪಕ್ಕಾ ಮನರಂಜನಾ ಚಿತ್ರ. ಪುನೀತ್‌ ಅವರ ಇಮೇಜ್‌ ಇಟ್ಟುಕೊಂಡೇ ಕಥೆ ಹೆಣೆಯಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ಛಾಯಾಗ್ರಹಣ ಶ್ರೀಶ ಕೂದುವಳ್ಳಿ ಅವರದು. ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ.

ಈ ಚಿತ್ರದ ಬಳಿಕ ‘ಒಂದಲ್ಲಾ ಎರಡಲ್ಲಾ’ ಚಿತ್ರದ ಖ್ಯಾತಿಯ ಡಿ. ಸತ್ಯಪ್ರಕಾಶ್‌ ಅವರ ಹೊಸ ಚಿತ್ರದಲ್ಲಿ ಪುನೀತ್‌ ನಟಿಸಲಿದ್ದಾರೆ.

ಸತ್ಯಪ್ರಕಾಶ್‌ ಅವರೇ ಸ್ಕ್ರಿಪ್ಟ್‌ ಕೂಡ ಸಿದ್ಧಪಡಿಸುತ್ತಿದ್ದಾರೆ. ಪಿ.ಆರ್‌.ಕೆ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು