ಚೆನ್ನೈ: ನಟ, ರಾಜಕಾರಣಿಯಾಗಿರುವ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಸಿನಿಮಾದ ದೃಶ್ಯಗಳ ಸೋರಿಕೆಯ ಆರೋಪದ ಮೇಲೆ ಸಹಾಯಕ ವಿಡಿಯೊ ಎಡಿಟರ್ ಸೇರಿ ಮೂವರನ್ನು ತಮಿಳುನಾಡಿನ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅಪರಾಧ ವಿಭಾಗದ ಪ್ರಕಾರ, ಜನ ನಾಯಗನ್ ಸಿನಿಮಾದ ದೃಶ್ಯಗಳ ಸೋರಿಕೆಗೆ ಸಂಬಂಧಿಸಿದಂತೆ, ತಾಂತ್ರಿಕ ವಿಶ್ಲೇಷಣೆ ಮತ್ತು ಡಿಜಿಟಲ್ ಪುರಾವೆಗಳ ನಿಖರ ಪರೀಕ್ಷೆಯ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಬಂಧಿತರೆ ನಿಜವಾದ ಆರೋಪಿಗಳೆಂದು ತಿಳಿದುಬಂದ ಬಳಿಕ ಏಪ್ರಿಲ್ 15ರಂದು ಬಂಧಿಸಲಾಗಿದೆ.

ಜನನಾಯಗನ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ವಿಡಿಯೊ ಎಡಿಟರ್ ಮತ್ತೊಂದು ಸಿನಿಮಾಗೆ ಕೆಲಸ ಮಾಡುತ್ತಿದ್ದರು. ಅವರು ಎಡಿಟಿಂಗ್ ಸ್ಟುಡಿಯೋದಲ್ಲಿ ಅನಧಿಕೃತವಾಗಿ ಸಿನಿಮಾದ ವಿಡಿಯೊವನ್ನು ಕದ್ದಿದ್ದಾರೆ. ಬಳಿಕ ಅದನ್ನು ಚಲನಚಿತ್ರ ರೂಪಕ್ಕೆ ಸಂಕಲನ ಮಾಡಿ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಬಂಧನದಲ್ಲಿ ಇಡಲಾಗಿದೆ. ಜೊತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ನಕಲಿ ವಿಷಯವನ್ನು ಡೌನ್ಲೋಡ್ ಮಾಡುವುದು, ಸ್ಟ್ರೀಮಿಂಗ್ ಮಾಡುವುದು ಅಥವಾ ಫಾರ್ವರ್ಡ್ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಡಿಜಿಟಲ್ ಪೈರಸಿಯಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಾಗುತ್ತದೆ ಎಂದು ಅಪರಾಧ ವಿಭಾಗವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.