ಬಿಗ್‌ಬಾಸ್ ವಿಜೇತ, ರಾಕ್‌ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ ಹೊಸ ಸಿನಿಮಾ ಇಂದು(ಆ.23) ಸೆಟ್ಟೇರುತ್ತಿದ್ದು, ಚಿತ್ರದ ನಾಯಕಿಯನ್ನು ಚಿತ್ರತಂಡ ಪರಿಚಯಿಸಿದೆ.
ನ್ಯೂಸ್ ಆ್ಯಂಕರ್ ಆಗಿ ಸುದ್ದಿ ಮನೆಯಲ್ಲಿ ಸದ್ದು ಮಾಡಿದ್ದ, ಬಳಿಕ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕಿರುತೆರೆಗೆ ಪ್ರವೇಶಿಸಿದ್ದ ಜಾಹ್ನವಿ ಈಗ ‘ಅಧಿಪತ್ರ’ ಸಿನಿಮಾದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿಗೆ ಜೋಡಿಯಾಗಲಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಲಿದ್ದಾರೆ ಜಾಹ್ನವಿ. ಸದ್ಯ ‘ಮಜಾ ಕೆಫೆ’ ಎಂಬ ಶೋ ನಡೆಸಿಕೊಡುತ್ತಿರುವ ಜಾಹ್ನವಿ ಚಂದನವನದಲ್ಲೂ ಸಕ್ರಿಯರಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.
ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ಚಯನ್ ಶೆಟ್ಟಿ ‘ಅಧಿಪತ್ರ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ.ಆರ್. ಸಿನಿಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ತಯಾರಾಗುತ್ತಿರುವ ‘ಅಧಿಪತ್ರ’ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.