ಶನಿವಾರ, ಜನವರಿ 23, 2021
21 °C

ಅಬ್ಬಬ್ಬಾ.. ₹39 ಕೋಟಿ ಕೊಟ್ಟು ಅಪಾರ್ಟ್‌ಮೆಂಟ್ ಖರೀದಿಸಿದ ಜಾಹ್ನವಿ ಕಪೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಸೆಲೆಬ್ರಿಟಿಗಳ ಮಕ್ಕಳೆ ಹಾಗೆ ದುಬಾರಿ ಜೀವನ ಶೈಲಿ ಮೂಲಕ ಆಗಾಗ್ಗೆ ಸುದ್ದಿ ಮಾಡುತ್ತಿರುತ್ತಾರೆ. ಹೋದಲ್ಲಿ ಬಂದಲ್ಲಿ ತನ್ನ ವೆರೈಟಿ ಉಡುಪು ಮತ್ತು ಸೌಂದರ್ಯದ ಮೂಲಕ ಸುದ್ದಿ ಮಾಡುತ್ತಿದ್ದ ದಿವಂಗತ ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇದೀಗ, ದುಬಾರಿ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.

ಮುಂಬೈನ ಪ್ರತಿಷ್ಠಿತ ಜುಹು ವಿಲೆ ಪಾರ್ಲೆ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗೆ ₹39 ಕೋಟಿ ಕೊಟ್ಟು ಖರೀದಿಸಿದ್ದಾರೆ ಎಂದು ಸ್ಕ್ವೇರ್ ಫೀಟ್ ಇಂಡಿಯಾ ವರದಿ ಮಾಡಿದೆ.

ತಂದೆ ಬೋನಿ ಕಪೂರ್ ಮತ್ತು ಸಹೋದರಿ ಖುಷಿ ಕಪೂರ್ ಜೊತೆ ಮುಂಬೈನ ಲೋಖಂಡ್ವಾಲಾದಲ್ಲಿ ವಾಸವಿರುವ ಜಾಹ್ನವಿ ಈಗ ಹೊಸ ಮನೆ ಖರೀದಿಸಿ ಅಲ್ಲಿಗೆ ಶಿಫ್ಟ್ ಆಗುವ ಯೋಜನೆಯಲ್ಲಿದ್ದಾರೆ. ಅಂದಹಾಗೆ, ಜಾಹ್ನವಿ ಖರೀದಿಸಿರುವ ಐಶಾರಾಮಿ ಅಪಾರ್ಟ್‌ಮೆಂಟ್ ಜುಹು ಪ್ರದೇಶದ ಆರ್ಯ ಕಟ್ಟಡದಲ್ಲಿ ಮೂರು ಮಹಡಿಗಳಲ್ಲಿ (14, 15 ಮತ್ತು 16 ನೇ) ವ್ಯಾಪಿಸಿದೆ. ಡಿಸೆಂಬರ್ 7 ರಂದೇ ನಟಿ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಡಿಸೆಂಬರ್ 10 ರಂದು ನೋಂದಣಿ ಪ್ರಕ್ರಿಯೆ ಮುಗಿಸಿದ್ದಾರೆ ಎಂದು ವರದಿಯಾಗಿದೆ.  

ಇದೇ ಪ್ರದೇಶದಲ್ಲಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅನಿಲ್ ಕಪೂರ್, ಹೃತಿಕ್ ರೋಶನ್ ಸೇರಿದಂತೆ ಖ್ಯಾತ ಬಾಲಿವುಡ್ ತಾರೆಯರ ಮನೆಗಳಿವೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು