ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಸೀರೆಯಲ್ಲಿ ಹಾಯ್ ಎಂದಳು ಜಾಹ್ನವಿ: ಅತಿಲೋಕ ಸುಂದರಿ ಎಂದ ಅಪ್ಪ ಬೋನಿ ಕಪೂರ್

ಅಕ್ಷರ ಗಾತ್ರ

ಬೆಂಗಳೂರು: ಸದ್ಯ ಹದಿ ಹರೆಯದ ಹುಡುಗರ ನಿದ್ದೆ ಕದ್ದಿರುವ ಚೆಲುವೆ ಎಂದರೆ ಅದು ಬಾಲಿವುಡ್ ಬೇಬಿ, ನಟಿ ಜಾಹ್ನವಿ ಕಪೂರ್. ದಢಕ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿರುವ ಈ 24 ರ ಬೆಡಗಿ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವ ಜಾಹ್ನವಿ ಬಹುತೇಕ ಬಿಡುವಿನ ವೇಳೆ ಪ್ರವಾಸ, ಮೋಜು–ಮಸ್ತಿಯಲ್ಲೇ ತೊಡಗಿರುತ್ತಾರೆ. ಆಗಾಗ ತಮ್ಮ ಸುಂದರ ಫೋಟೊಗಳನ್ನು ಸಾಮಾಜಿಕ ಜಾಲಾತಣಗಳಲ್ಲಿ ಜಾಹ್ನವಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಇದೀಗ ಹಸಿರು ಸೀರೆಯಲ್ಲಿ ಕಂಗೊಳಿಸಿರುವ ಜಾಹ್ನವಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜಾಹ್ನವಿಯ ಫೋಟೊಗಳನ್ನು ಮೆಚ್ಚಿಕೊಂಡಿರುವ ಸ್ವತಃತಂದೆ ಬೋನಿ ಕಪೂರ್ ಅವರು ‘ಅತಿ ಸುಂದರ’ ಎಂದು ಕಮೆಂಟ್ ಮಾಡಿದ್ದಾರೆ.

ಅಭಿಮಾನಿಗಳು ‘ಜಾಹ್ನವಿ ನೀವು ಸಾರಿಯಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತೀರಾ’ ಎಂದು ಉದ್ಘಾರ ತೆಗೆದಿದ್ದಾರೆ. ಲಕ್ಷಾಂತರ ಜನ ಈ ಫೋಟೊಗಳನ್ನು ಇಷ್ಟಪಟ್ಟಿದ್ದಾರೆ.

ಪ್ರಸ್ತುತ ಜಾಹ್ನವಿ ಅಭಿನಯದ ‘ಭೇದಿಯಾ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ‘ಗುಡ್‌ ಲಕ್ ಜೆರ್ರೀ’, ‘ದೊಸ್ತಾನಾ 2’ ಹಾಗೂ‘ಮಿ’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT