ಜಾಣೆ ಜಾನು ಕನ್‌ಫ್ಯೂಷನ್ನು!

ಬುಧವಾರ, ಮೇ 22, 2019
29 °C

ಜಾಣೆ ಜಾನು ಕನ್‌ಫ್ಯೂಷನ್ನು!

Published:
Updated:
Prajavani

‘ಧಡಕ್‌’ ಸುಂದರಿ ಜಾಹ್ನವಿ ಕಪೂರ್‌ ಕೈಲಿ ಹೊಸ ಆಫರ್‌ಗಳಿವೆ. ಕರಣ್‌ ಜೋಹರ್‌ ನಿರ್ಮಾಣದ ’ತಖ್ತ್‌’ಗೆ ಒಪ್ಪಿಗೆ ನೀಡಿದ್ದಾಗಿದೆ. ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್‌ ಗುಂಜನ್‌ ಸಕ್ಸೇನಾ ಕುರಿತ ಚಿತ್ರಕ್ಕೆ ಈಗಾಗಲೇ ಸಹಿ ಹಾಕಿಯಾಗಿದೆ.

‘ತಖ್ತ್‌’ನಲ್ಲಿ ‘ಧಡಕ್‌’ಗಿಂತಲೂ ಸಪೂರ ಸುಂದರಿಯಾಗಿ ಕಾಣಿಸಿಕೊಳ್ಳಬೇಕಿದೆ ಜಾನೂ. ಅತ್ತ ಗುಂಜನ್‌ ಪಾತ್ರಕ್ಕೆ ಜೀವ ತುಂಬಬೇಕಾದರೆ ದೇಹ ತೂಕವೂ ಹೆಚ್ಚಬೇಕಾಗಿದೆ. ಅದಕ್ಕಾಗಿ ಈಗಾಗಲೇ ಕೆಲವು ತರಬೇತಿಗಳಲ್ಲಿ ಜಾನೂ ತೊಡಗಿಸಿಕೊಂಡಿದ್ದಾರೆ ಎಂದು ಬಿ ಟೌನ್‌ ಗಲ್ಲಿಯ ವದಂತಿ. ಆದರೆ ಜಾನೂ ಆಪ್ತರ ಪ್ರಕಾರ ಈ ಎರಡೂ ಚಿತ್ರಗಳಿಗೆ ಅಂತಿಮ ಷರಾ ಇನ್ನಷ್ಟೇ ಬರೆಯಬೇಕಿದೆಯಂತೆ. 

ಜಾನೂ ಈಗ ಗೊಂದಲದಲ್ಲಿದ್ದಾಳೆ. ತೂಕ ಹೆಚ್ಚಿಸಿಕೊಂಡರೆ ಕರಣ್‌ ಜೋಹರ್‌ ಪ್ರಾಜೆಕ್ಟ್‌ಗೆ ಟಾಟಾ ಹೇಳಬೇಕಾಗುತ್ತದೆ. ಅದನ್ನು ಒಪ್ಪಿಕೊಂಡು ಇನ್ನಷ್ಟು ತೂಕ ಇಳಿಸಿಕೊಂಡರೆ ಗುಂಜನ್‌ ಸಕ್ಸೇನಾ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗದು! 

ಒಂದು ಮೂಲದ ಪ್ರಕಾರ, ಜಾಣೆ ಜಾನೂ ‘ಕೆಜೊ’ ಸೆಟ್‌ಗೆ ಹೋಗಲಿದ್ದಾರಂತೆ. ಆದರೆ ಪ್ರತಿ ನಿತ್ಯ ಜಿಮ್‌ನಲ್ಲಿ ವಿಶೇಷ ಕಸರತ್ತುಗಳ ಮೊರೆ ಹೋಗಿರುವ ಜಾನೂ ತೂಕ ಹೆಚ್ಚಿಸಿಕೊಳ್ಳಲು ಹೊಸ ವರಸೆಗಳನ್ನೂ ಕಲಿಯುತ್ತಿದ್ದಾರಂತೆ. ಅದ್ದೂರಿ ಚಿತ್ರಗಳ ಸರದಾರ ಕೆಜೊ ಅವರ ಮಹತ್ವಾಕಾಂಕ್ಷೆಯ ‘ತಖ್ತ್‌’ ಬಹುತಾರಾಗಣವನ್ನು ಹೊಂದಿದೆ. ಕರೀನಾ ಕಪೂರ್‌, ರಣವೀರ್‌ ಕಪೂರ್‌, ಅನಿಲ್‌ ಕಪೂರ್‌, ವಿಕಿ ಕೌಶಲ್‌, ಭೂಮಿ ಪೆಡ್ನೇಕರ್‌ ಈಗಾಗಲೇ ಕಾಲ್‌ಶೀಟ್‌ ನೀಡಿಯಾಗಿದೆ. ಇಂತಹ ಅವಕಾಶ ಸಿಗುವುದು ಅಪರೂಪ. ಹಾಗಾಗಿ ವೃತ್ತಿಜೀವನದ ಗ್ರಾಫ್‌ನಲ್ಲಿ ಕೆಜೊ ಅಡ್ಡಾದ ಯಶಸ್ವಿ ಚಿತ್ರ ಮಹತ್ವದ ಪಾತ್ರ ವಹಿಸಲಿದೆ ಎಂಬುದು ಈ ಜಾಣೆಯ ಲೆಕ್ಕಾಚಾರ.

ಗುಂಜನ್‌ ಸಕ್ಸೇನಾ, ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಭಾರತೀಯ ಯೋಧರನ್ನು ಗುಂಡಿನ ದಾಳಿಯ ನಡುವೆಯೂ ಸುರಕ್ಷಿತವಾಗಿ ಏರ್‌ಲಿಫ್ಟ್‌ ಮಾಡಿದ ಸಾಹಸಿ ಪೈಲಟ್‌. ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಯ ಜೊತೆಗೆ ಈ ಸಾಹಸದಿಂದಾಗಿ ಅವರು ಜಗದ್ವಿಖ್ಯಾತಿ ಗಳಿಸಿದ್ದರು. ಗುಂಜನ್‌ ಪಾತ್ರಕ್ಕಾಗಿ ಜಾಹ್ನವಿ ವಿಮಾನ ಚಾಲನೆ ಮತ್ತು ಇತರ ತಾಂತ್ರಿಕ ತರಬೇತಿಗಳಲ್ಲಿ ಕೆಲಸಮಯದಿಂದೀಚೆ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಗುಂಜನ್‌ ಗೆಟಪ್ಪಿನಲ್ಲಿರುವ ಜಾನೂ ಫೋಟೊ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. 

ಜಾನೂ ಚಿಂತೆಗೆ ಇನ್ನೊಂದು ಕಾರಣವಿದೆ. ಯಾವುದೇ ಬಗೆಯ ವರ್ಕ್‌ಔಟ್‌ ಮಾಡಿದರೂ, ಹೊಸ ಪಥ್ಯಗಳೊಂದಿಗೆ ರಾಜಿಯಾದರೂ ತಮ್ಮಿಷ್ಟದ ಗ್ರಿಲ್ಡ್‌ ಫಿಶ್‌ ತಟ್ಟೆಯಲ್ಲಿರಲೇಬೇಕು. ಇನ್ನೂ ಒಂದಿಷ್ಟು ತಿನ್ನಬೇಕು ಎನಿಸಿದರೂ ಅವರು ಬಯಸುವುದು ಗ್ರಿಲ್ಡ್‌ ಮೀನನ್ನೇ. ಸ್ವಲ್ಪ ಜಾಸ್ತಿ ತಿಂದರೆ ಮರುದಿನ ಮನೆಯ ಬಳಿ ಜಾಗಿಂಗ್‌, ಈಜು, ಯೋಗ ಮತ್ತು ಜಂಪಿಂಗ್‌ ಒಂದು ಸುತ್ತು ಜಾಸ್ತಿಯೇ ಮಾಡುತ್ತಾರೆ ಈ ಸುಂದರಿ.

ಫಿಟ್‌ನೆಸ್‌ ಬಗ್ಗೆ ಸದಾ ಕಟ್ಟೆಚ್ಚರ ವಹಿಸುವ ಜಾಹ್ನವಿ, ಪಾತ್ರಕ್ಕಾಗಿ ಯಾವುದೇ ಬಗೆಯ ರೂಪಾಂತರ ಮಾಡಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಏಕಕಾಲಕ್ಕೆ ತೂಕ ಹೆಚ್ಚಿಸಿಕೊಳ್ಳುವ ಇಲ್ಲವೇ ಇಳಿಸಿಕೊಳ್ಳುವ ಗೊಂದಲ ದೇಹದ ಆರೋಗ್ಯಕ್ಕೂ ಸೂಕ್ತವಲ್ಲ ಎಂಬುದು ಜಾಣೆ ಜಾನೂ ಲೆಕ್ಕಾಚಾರ. ಒಟ್ಟಿನಲ್ಲಿ, ಜಾನೂ ಅಂತಿಮವಾಗಿ ಯಾವ ಚಿತ್ರಕ್ಕಾಗಿ ಆ್ಯಕ್ಷನ್‌ ಕಟ್‌ ಹೇಳಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !