ಬುಧವಾರ, ಜೂನ್ 3, 2020
27 °C

ಮತ್ತೆ ನಟನೆಯತ್ತ ಜೆನಿಲಿಯ ಚಿತ್ತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲಿವುಡ್‌ನ ‘ಸೂಪರ್‌ಸ್ಟಾರ್’ ಮೋಹನ್‌ಲಾಲ್ ಅಭಿನಯದ ‘ಲೂಸಿಫರ್’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಇದರಲ್ಲಿ ‘ಮೆಗಾಸ್ಟಾರ್’ ಚಿರಂಜೀವಿ ನಾಯಕನಾಗಿ ನಟಿಸಲಿದ್ದಾರೆ. ‘ಸಾಹೋ’ ಚಿತ್ರದ ಖ್ಯಾತಿಯ ಸುಜಿತ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮಲಯಾಳದಲ್ಲಿ ‘ಲೂಸಿಫರ್’ ಚಿತ್ರ ನಿರ್ದೇಶಿಸಿದ್ದು, ಪ್ರಥ್ವಿರಾಜ್ ಸುಕುಮಾರನ್.

ಈಗ ಇವೆಲ್ಲ ಹಳೆಯ ವಿಷಯವಾದರೂ ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕ ಸುದ್ದಿಯೊಂದು ಹೊರ ಬಿದ್ದಿದೆ. ಅದೇನೆಂದರೆ ಜೆನಿಲಿಯ ದೇಶಮುಖ್ ಡಿಸೋಜಾ ಮತ್ತೆ ಟಾಲಿವುಡ್‌ಗೆ ಮರಳಲಿದ್ದಾರೆ. ಹೌದು, ‘ಬೊಮ್ಮರಿಲು’ ಖ್ಯಾತಿಯ ಜೆನಿಲಿಯ ‘ಲೂಸಿಫರ್’ ರಿಮೇಕ್‌ನಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ.

ಹಿಂದಿ, ತೆಲುಗು, ತಮಿಳು, ಮರಾಠಿ ಹಾಗೂ ಕನ್ನಡದ ‘ಸತ್ಯ ಇನ್ ಲವ್’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದ ಆಕೆ 2018ರಲ್ಲಿ ‘ಮೌಲಿ’ ಎಂಬ ಮರಾಠಿ ಚಿತ್ರ ನಿರ್ಮಿಸಿ ನಿರ್ಮಾಪಕಿಯಾಗಿಯೂ ಬಡ್ತಿ ಹೊಂದಿದ್ದರು. ಜೊತೆಗೆ, ಇದರಲ್ಲಿ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಆ ನಂತರ ನಟನೆಗೆ ಬ್ರೇಕ್ ಹಾಕಿದ್ದ ಅವರು, ಈಗ ರಿಮೇಕ್ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ದ್ವಿತೀಯ ಇನ್ನಿಂಗ್‌ಗೆ ಸಜ್ಜಾಗುತ್ತಿದ್ದಾರಂತೆ.

‘ಬೊಮ್ಮರಿಲು’, ‘ಢಿ’ ಹಾಗೂ ‘ರೆಡಿ’ ಮುಂತಾದ ಸೂಪರ್ ‌ಹಿಟ್‌ ಸಿನಿಮಾಗಳ ಮೂಲಕ ಜೆನಿಲಿಯ ಟಾಲಿವುಡ್‌ನಲ್ಲಿ ಟಾಪ್‌ ಹೀರೊಯಿನ್‌ಗಳ ಪಟ್ಟಿಯಲ್ಲಿದ್ದರು. ಆಕೆ ತೆಲುಗಿನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಚಿತ್ರ ‘ನಾ ಇಷ್ಟಂ’. 

ಮೂಲಗಳ ಪ್ರಕಾರ ಜೆನಿಲಿಯ, ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳುವುದು ಪಕ್ಕಾ ಆಗಿದೆ. ಎಲ್ಲವೂ ಸರಿಯಾಗಿ ನಡೆದರೆ ಈ ಚಿತ್ರದ ಮೂಲಕ ಜೆನಿಲಿಯ ತೆಲುಗು ಸಿನಿರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ. ಸದ್ಯ ಚಿರಂಜೀವಿ ‘ಆಚಾರ್ಯ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದು ಮುಗಿದ ಕೂಡಲೇ ‘ಲೂಸಿಫರ್’ ರಿಮೇಕ್‌ ಶೂಟಿಂಗ್‌ ಶುರುವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು