ಸೋಮವಾರಪೇಟೆ: ‘ಸೃಷ್ಟಿ ಸಿನಿಮಾಸ್ ಪ್ರೋಡಕ್ಷನ್ ವತಿಯಿಂದ ಕಾದಂಬರಿ ಆಧಾರಿತ ಚಿತ್ರ ‘ಜೇನುಬೇಲಿ’ ಸಿನಿಮಾದ ಮುಹೂರ್ತ ಏ.6ರಂದು ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 10.30ಕ್ಕೆ ನೆರವೇರಲಿದೆ’ ಎಂದು ಚಿತ್ರ ನಿರ್ದೇಶಕಿ ರೂಪ ಮೋಹನ್ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಡಾ.ಮಂತರ್ ಗೌಡ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ’ ಎಂದರು.

‘ಜೇನು ಕುರುಬರ ಜೀವನ ಚರಿತ್ರೆ ಆಧಾರಿತ ಮತ್ತು ಅವರ ನೋವು ನಲಿವುಗಳ ಕಥೆಯ ಕಲಾತ್ಮಕ ಸಿನಿಮಾ ಇದಾಗಿದ್ದು, ಕೊಡಗಿನಲ್ಲಿ ಚಿತ್ರಿಕರಿಸಲಾಗುವುದು’ ಎಂದು ತಿಳಿಸಿದರು.

‘ಗಿರಿಜನರ ಬಗೆಗಿನ ಪೂರ್ಣ ಪ್ರಮಾಣದ ಎರಡು ಗಂಟೆಯ ಚಿತ್ರವಾಗಿದೆ. ಗಿರಿಜನರ ಹಾಡಿಗಳಲ್ಲಿ ಅವಶ್ಯಕವಿರುವಷ್ಟು ಚಿತ್ರೀಕರಣ ಮಾಡಲಾಗುವುದು. ಚಿತ್ರದಲ್ಲಿ ಮೂರು ಹಾಡುಗಳಿರುತ್ತವೆ. ಒಂದು ಹಾಡಿಗೆ ಗಿರಿಜನರು ನುಡಿಸುವ ಸಂಗೀತ ಅಳವಡಿಸಿಕೊಳ್ಳಲಾಗುತ್ತದೆ’ ಎಂದರು.

ಗಿರಿಜನರು ಹಲವು ತಲೆಮಾರುಗಳಿಂದ ಪ್ರಕೃತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಹೆಚ್ಚಿನವರು ಆಧುನಿಕತೆಯಿಂದ ದೂರ ಇದ್ದು, ಸೌಲಭ್ಯ ವಂಚಿತರಾಗಿದ್ದಾರೆ. ಇವರಿಗೂ ಎಲ್ಲರಂತೆ ಬದುಕುವ ಹಕ್ಕಿದ್ದು, ಶಿಕ್ಷಣ ಸಿಗಬೇಕಿದೆ. ಈ ನಿಟ್ಟಿನಲ್ಲಿ ಅವರ ಬದುಕು, ಅರೋಗ್ಯ, ಶಿಕ್ಷಣ, ಆಹಾರ ಪದ್ಧತಿ, ಸಂಪ್ರದಾಯಗಳು, ನೃತ್ಯ, ಹಬ್ಬ ಹರಿದಿನದಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗುವುದು ಎಂದು ತಿಳಿಸಿದರು.

ಕಥೆ ಮತ್ತು ಚಿತ್ರಕಥೆ ಜೆ.ಎಂ.ಪ್ರಹ್ಲಾದ್, ಸಹಾಯಕ ನಿರ್ದೇಶನ ಶರತ್ ಬಿಳಿನೆಲೆ, ಛಾಯಗ್ರಾಹಣ ಸಂದೀಪ್ ಹೊನ್ನಾಳಿ, ಅದ್ವಿಕ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದರು.

ಕಲಾವಿದರಾದ ಶಶಿಕಿರಣ್, ಐಶ್ಚರ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-856843133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.