ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆರ್ಸಿ’ ಟ್ರೈಲರ್‌: ಶಾಹಿದ್‌ ನಟನೆಗೆ ಅಭಿಮಾನಿಗಳು ಫಿದಾ

Last Updated 23 ನವೆಂಬರ್ 2021, 13:24 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್ ಕಥಾ ಹಂದರವುಳ್ಳ ತೆಲುಗಿನ ‘ಜೆರ್ಸಿ’ ಸಿನಿಮಾ 2019 ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಬಾಲಿವುಡ್‌ಗೆ ರಿಮೇಕ್‌ ಆಗಿದ್ದು ಬರುವ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಬಾಲಿವುಡ್‌ನಲ್ಲಿ ಇದೇ ಸಿನಿಮಾ ‘ಜೆರ್ಸಿ’ ಹೆಸರಿನಲ್ಲೇ ರಿಮೇಕ್ ಆಗಿದ್ದು, ನಟ ಶಾಹಿದ್ ಕಪೂರ್ ಅವರು ತೆಲುಗಿನ ನಾನಿ ಮಾಡಿದ್ದ ಪಾತ್ರ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್‌ ಮಂಗಳವಾರ ಸಂಜೆ ಬಿಡುಗಡೆಯಾಗಿದ್ದು ಶಾಹಿದ್‌ ಅಭಿಮಾನಿಗಳು ಫಿದಾ ಆಗಿದ್ದಾರೆ.

ಟ್ರೈಲರ್‌ ಬಿಡುಗಡೆಯಾಗಿ ಒಂದೇ ಗಂಟೆಯಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದು ವಿಶೇಷ.

‘ನಾನಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಅಭಿಮಾನಿಯೊಬ್ಬರು ಕೇಳಿದ್ದಕ್ಕೆ ಶಾಹಿದ್ ಕಪೂರ್, ‘ಹಿಂದಿಯಲ್ಲಿ ಜೆರ್ಸಿ ಸಿನಿಮಾ ಮಾಡಲು ನನಗೆ ನಾನಿಯೇ ಪ್ರೇರಣೆ. ಆ ಪಾತ್ರ ನೋಡಿ ನನ್ನ ಕಣ್ಣುಗಳು ತೇವಗೊಂಡಿದ್ದವು. ಅವರೊಬ್ಬ ಅದ್ಭುತ ಪ್ರತಿಭಾವಂತ ಕಲಾವಿದ‘ ಎಂದು ಶಾಹಿದ್‌ ಈ ಹಿಂದೆ ಹೇಳಿದ್ದರು.

ಶಾಹಿದ್ ಕಪೂರ್, ಮೃಣಾಲ್ ಠಾಕೂರ್, ಪಂಕಜ್ ಕಪೂರ್ ಅವರು ಹಿಂದಿಯ ಜೆರ್ಸಿಯಲ್ಲಿ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಇದು 2021 ಡಿಸೆಂಬರ್ 21 ಕ್ಕೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT