ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಸಿಬ್ಬಂದಿ ಪಾಸ್‌ಪೋರ್ಟ್‌ ವಶಕ್ಕೆ ಪಡೆಯುವುದಿಲ್ಲ ಎಂದ ಸೌದಿ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸೌದಿ ಅರೇಬಿಯಾಕ್ಕೆ ಬಂದಿಳಿಯುವ ಭಾರತೀಯ ವಿಮಾನಗಳ ಸಿಬ್ಬಂದಿಯ ಪಾಸ್‌ಪೋರ್ಟ್‌ಗಳನ್ನು ಇನ್ನು ಮುಂದೆ ತನ್ನ ವಶದಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ ಎಂದು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಸಿಬ್ಬಂದಿಗೆ ಬಾರ್‌ಕೋಡ್‌ ನೀಡುವುದಾಗಿ ಸೌದಿ ಅರೇಬಿಯಾ ಸರ್ಕಾರ ತಿಳಿಸಿದೆ. ಈ ಕ್ರಮದಿಂದ ಸೌದಿ ಅರೇಬಿಯಾಕ್ಕೆ ಸಂಚರಿಸುವ ಏರ್‌ ಇಂಡಿಯಾ ಮತ್ತು ಜೆಟ್‌ ಏರ್‌ವೇಸ್‌ ವಿಮಾನಗಳ ಸಿಬ್ಬಂದಿಗೆ ಅನುಕೂಲವಾಗಲಿದೆ.

ಈ ಮೊದಲಿನ ನಿಯಮಗಳ ಪ್ರಕಾರ, ಅಲ್ಲಿಗೆ ಬಂದಿಳಿಯುವ ಭಾರತೀಯ ವಿಮಾನಗಳ ಸಿಬ್ಬಂದಿಯ ಪಾಸ್‌ಪೋರ್ಟ್‌ಗಳನ್ನು ಅಲ್ಲಿನ ಸರ್ಕಾರ ತನ್ನ ವಶದಲ್ಲಿಟ್ಟುಕೊಂಡು, ಅವುಗಳ ನಕಲು ಪ್ರತಿಯನ್ನು ಸಿಬ್ಬಂದಿಗೆ ನೀಡುತ್ತಿತ್ತು. ವಿಮಾನ ಭಾರತಕ್ಕೆ ಹಿಂದಿರುಗುವ ವೇಳೆ ಮೂಲ ಪಾಸ್‌ಪೋರ್ಟ್‌ ಹಿಂದಿರುಗಿಸುತ್ತಿತ್ತು. ಇದರಿಂದ ಅಲ್ಲಿ ಕೆಲ ಸಮಯ ಉಳಿಯುತ್ತಿದ್ದ ಸಿಬ್ಬಂದಿ, ಹೊರಗೆ ಹೋದಾಗ ತೊಂದರೆಯಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT