ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಲರ್‌ ನೋಡಿ: ಅಮಿತಾಭ್‌ ನಟನೆಯ 'ಝುಂಡ್' ಚಿತ್ರ ಮಾರ್ಚ್‌ 4ರಂದು ತೆರೆಗೆ

Last Updated 23 ಫೆಬ್ರುವರಿ 2022, 12:34 IST
ಅಕ್ಷರ ಗಾತ್ರ

​ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್ ಅವರ ಬಹು ನಿರೀಕ್ಷಿತ 'ಝುಂಡ್' ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ಬಹು ನಿರೀಕ್ಷೆಯ ಈ ಸಿನಿಮಾ ಮಾರ್ಚ್‌ 4ರಂದು ಬಿಡುಗಡೆಯಾಗುತ್ತಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಟ್ರೈಲರ್‌ ಬಗ್ಗೆ ಮೆಚ್ಚುಗೆಯ ಕಾಮೆಂಟ್‌ಹಾಕುತ್ತಿದ್ದಾರೆ.

ಈ ಚಿತ್ರವು ಸ್ಲಂ ಮಕ್ಕಳು ಫುಟ್‌ಬಾಲ್‌ ಕಲಿಯುವ ಕಥಾ ಹಂದರವನ್ನು ಹೊಂದಿದೆ. ಬಡ ಮಕ್ಕಳಿಗೆ ಫುಟ್ಬಾಲ್​​ ತಂಡ ಕಟ್ಟಲು ನೆರವು ನೀಡುವ ಪಾತ್ರದಲ್ಲಿ ಅಮಿತಾಭ್‌ ನಟಿಸಿದ್ದಾರೆ.

ಈ ಸಿನಿಮಾ ಕೋವಿಡ್​ ಕಾರಣದಿಂದ ಅನೇಕ ಬಾರಿ ಮುಂದೂಡಲಾಗಿತ್ತು. ಇದೀಗಮಾರ್ಚ್ 4 ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ.

ಮರಾಠಿಯ 'ಸೈರಾಟ್' ಸಿನಿಮಾದ ನಿರ್ದೇಶಕ ನಾಗರಾಜ್ ಮಂಜುಳೆ ಅವರು 'ಝುಂಡ್' ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT