ನಟ ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಪ್ರಶಾಂತ್ ನೀಲ್ 'ಡ್ರ್ಯಾಗನ್' ಚಿತ್ರದ 4 ನಿಮಿಷ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಿದ್ದಾರೆ.

ಮೈತ್ರಿ ಮೂವೀಸ್ ಮೇಕರ್ ಯೂಟ್ಯೂಬ್ ಚಾನಲ್ನಲ್ಲಿ ಈ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. 1967ರ ಸಮಯದಲ್ಲಿ ಅಫೀಮುಗಾಗಿ ನಡೆಯುವ ಕಥೆಯನ್ನು ಪ್ರಶಾಂತ್ ನೀಲ್ ಅವರು ಡಾರ್ಕ್ ಥೀಮ್ ಮೂಲಕ ಪರಿಚಯಿಸಿದ್ದಾರೆ.

‘ಬ್ರಿಟಿಷರು ಭಾರತಕ್ಕೆ ಬಂದಾಗ ಕೇವಲ ಮಸಾಲೆ ಪದಾರ್ಥಗಳನ್ನು ದೋಚುವುದು ಮಾತ್ರ ಅವರ ಉದ್ದೇಶವಾಗಿರುವುದಿಲ್ಲ. ಬದಲಾಗಿ ಹೆರಾಯಿನ್ ತಯಾರಿಸುವ ಅಫೀಮು ಗಿಡಗಳ ವ್ಯವಹಾರ ಅವರ ಮುಖ್ಯ ಗುರಿಯಾಗಿರುತ್ತದೆ. ನಂತರ ದಿನಗಳಲ್ಲಿ ಆ ವ್ಯವಹಾರವನ್ನು ಬೇರೆ ಬೇರೆ ಸಂಸ್ಥೆಗಳು ವಹಿಸಿಕೊಳ್ಳುತ್ತವೆ. ಆ ವೇಳೆ 'ಅಫ್ಘಾನ್ ಟ್ರೇಡಿಂಗ್ ಕಂಪನಿ' ಮತ್ತು 'ಗೋಲ್ಡನ್ ಟ್ರಯಾಂಗಲ್' ನಡುವೆ ಅಫೀಮು ಯುದ್ಧ ನಡೆಯುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ.

ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರು ಮಾಫಿಯಾ ಜಗತ್ತಿನ ಕಮಾಂಡರ್-ಇನ್-ಚೀಫ್ ಆಗಿ ‘ಲೂಗರ್' ಅಲಿಯಾಸ್ 'ಡ್ರ್ಯಾಗನ್' ಪಾತ್ರದಲ್ಲಿ ನಟಿಸಿದ್ದಾರೆ. ಮಾದಕ ದ್ರವ್ಯ ನಿಗ್ರಹ ದಳದ ಮುಖ್ಯಸ್ಥ ರಘುವೀರ್ ರಾಥೋಡ್ ಪಾತ್ರದಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.