ಪ್ರತಿರೂಪಿ ಜೂಲಿಯಾ ವೈರಲ್ ಆದ ಅನುಷ್ಕಾ!

7

ಪ್ರತಿರೂಪಿ ಜೂಲಿಯಾ ವೈರಲ್ ಆದ ಅನುಷ್ಕಾ!

Published:
Updated:
Prajavani

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರೊಂದಿಗಿನ ಡೇಟಿಂಗ್‌, ಮದುವೆ, ಮೊದಲ ಮಧುಚಂದ್ರ, ಎರಡನೇ ಮಧುಚಂದ್ರ ಎಂದೆಲ್ಲಾ ಸುದ್ದಿಯಾಗುತ್ತಿದ್ದ ಬಿ ಟೌನ್‌ ಸುಂದರಿ ಅನುಷ್ಕಾ ಶರ್ಮಾ ಮೊನ್ನೆ ಮತ್ತೊಮ್ಮೆ ವೈರಲ್‌ ಆಗಿಬಿಟ್ಟರು.

ವಿದೇಶಿಗರಂತೆ ಬಿಳಿ ಕೂದಲಿನ ಫೋಟೊ, ಪಾಪ್‌ ಸಂಗೀತ ಹಾಡುತ್ತಿರುವ ವಿಡಿಯೊ, ಪತಿಗೆ ‘ಸೋಡಾ ಚೀಟಿ’ ಕೊಟ್ಟು ಹಾಲಿವುಡ್‌ಗೆ ಹಾರಿದರು ಎಂಬ ಟಿಪ್ಪಣಿಗಳು...

ಇಷ್ಟೆಲ್ಲಾ ಆಗುತ್ತಿದ್ದರೆ ಅನುಷ್ಕಾ ಮಾತ್ರ ಬೇರೆಯೇ ಕಾರಣಕ್ಕೆ ಬೆಚ್ಚಿಬಿದ್ದಿದ್ದರು. ಜೂಲಿಯಾ ಮೈಕೆಲ್ಸ್‌ ಎಂಬ ಜಗದ್ವಿಖ್ಯಾತ ಪಾಪ್‌ ಗಾಯಕಿ ಟ್ವಿಟರ್‌ನಲ್ಲಿ ಹಾಕಿದ ಆ ಫೋಟೊ ಅದಕ್ಕೆ ಕಾರಣ.

‘ಹಾಯ್‌ ಅನುಷ್ಕಾ! ನೋಡು ನಾವಿಬ್ಬರೂ ಒಂದೇ ಥರ ಇದ್ದೇವೆ’ ಎಂಬ ಒಂದು ಸಾಲಿನ ಟ್ವೀಟ್‌ ತೆರೆದ ಅನುಷ್ಕಾ ತಮ್ಮನ್ನೇ ನಂಬಲಾರದ ಸ್ಥಿತಿಯಲ್ಲಿದ್ದರು. 

‘ಓ ಮೈ ಗಾಡ್‌! ನೀನು ನನ್ನಂತೆಯೇ ಇದ್ದೀಯಲ್ಲೇ ಮಾರಾಯ್ತಿ’ ಎಂದು ಪ್ರತಿಕ್ರಿಯಿಸಿದರು ಅನುಷ್ಕಾ. ಸ್ವಲ್ಪ ಸುಧಾರಿಸಿಕೊಂಡ ಬಳಿಕ, ‘ಹೌದು! ಒಬ್ಬರಂತೆ ಏಳು ಮಂದಿ ಇರ್ತಾರೆ. ನೀನು ಸಿಕ್ಕಿದ್ದಾಯ್ತು. ಇನ್ನುಳಿದ ಐವರು ಎಲ್ಲಿದ್ದಾರಪ್ಪಾ? ಜೀವಮಾನವಿಡೀ ಅವರಿಗಾಗಿ ಕಾಯುತ್ತೇನೆ’ ಎಂದು ಬರೆದರು.

ಹೀಗೆ, ಇಬ್ಬರು ಘಟಾನುಘಟಿ ಪ್ರತಿರೂಪಿಗಳು ಸಾಮಾಜಿಕ ಮಾಧ್ಯಮದಲ್ಲಿ ‘ಒಂದಾದ’ ಕೆಲವೇ ಕ್ಷಣದಲ್ಲಿ ಅನುಷ್ಕಾ ವೈರಲ್‌ ಆಗಿಬಿಟ್ಟಿದ್ದರು. 

‘ಪತಿಗೆ ಕೈಕೊಟ್ಟು ಅಮೆರಿಕದಲ್ಲಿ ಹಾಲಿವುಡ್‌ಗೆ ಹೆಜ್ಜೆ ಹಾಕಿದರು’, ‘ಬಾಲಿವುಡ್‌ ಕ್ವೀನ್‌ ಯಾರ ತೆಕ್ಕೆಗೆ ಹೋದರು?’ ‘ಅನುಷ್ಕಾ ಶರ್ಮಾ ವಿರಾಟ್‌ಗೆ ಕೈಕೊಟ್ಟೇ ಬಿಟ್ಟರು’... ಇಂತಹ ನೂರಾರು ಟೀಕೆ, ವಿಶ್ಲೇಷಣೆಗಳ ಸುರಿಮಳೆಯೇ ಅನುಷ್ಕಾ ಮೇಲೆ ಸುರಿಯಲಾರಂಭಿಸಿದವು. ನ್ಯೂಜಿಲೆಂಡ್‌ನಲ್ಲಿ ವಿಹರಿಸುತ್ತಿದ್ದ ದಂಪತಿಗೆ ಇವೆಲ್ಲವೂ ಶಾಕ್‌ ಕೊಟ್ಟಿದೆಯಂತೆ.

ಟೀಕೆ ಟಿಪ್ಪಣಿಗಳ ಕತೆ ಹಾಗಿರಲಿ. ಅನುಷ್ಕಾಳ ಅವಳಿಯಂತೆ ಕಾಣುವ ಈ ಜೂಲಿಯಾ ಮೈಕಲ್ಸ್‌ ಯಾರು ಎಂದು ನಿಮಗೂ ಕುತೂಹಲವಿರಬಹುದು.

ಅಮೆರಿಕದ ಅಯೋವಾ ನಗರದ ನಿವಾಸಿ ಜೂಲಿಯಾ ಪಾಪ್‌ ಗಾಯಕಿ ಮಾತ್ರವಲ್ಲ ಹೆಸರಾಂತ ಸಂಗೀತ ರಚನೆಕಾರ್ತಿಯೂ ಹೌದು. ಜೂಲಿಯಾ ಕ್ಯಾರಿನ್‌ ಕೆವಾಸೊಸ್‌ ಎಂಬುದು ಅವರ ಮೂಲ ಹೆಸರು. ಆದರೆ ಪಾಪ್‌ ಜಗತ್ತಿನಲ್ಲಿ ಜೂಲಿಯಾ ಮೈಕೆಲ್ಸ್‌ ಎಂದೇ ಪರಿಚಿತರು. ಹುಟ್ಟಿದ್ದು 1993ರ ನವೆಂಬರ್‌ 13. ಅಂದರೆ ಈಗ 25ರ ಹರೆಯ.

ಸೆಲೆನಾ ಗೊಮೆಜ್‌, ಡೆಮಿ ಲೊವಾಟೊ, ಫಿಫ್ತ್‌ ಹಾರ್ಮೊನಿ, ಶಾನ್‌ ಮೆಂಡಿಸ್‌, ಬ್ರಿಟ್ನಿ ಸ್ಪಿಯರ್ಸ್‌, ಜಸ್ಟಿನ್‌ ಬೀಬರ್‌, ಹೈಲೀ ಸ್ಟೀನ್‌ಫೆಲ್ಡ್‌ ಮತ್ತು ಗ್ವೆನ್‌ ಸ್ಟಿಫಾನಿ ಅವರು ತಮ್ಮ ಆಲ್ಬಂಗಳಿಗೆ ಜೂಲಿಯಾ ಹಾಡುಗಳು ಮತ್ತು ಟ್ರ್ಯಾಕ್‌ಗಳನ್ನು ಬಳಸಿದ್ದಾರೆ.

2017ರಲ್ಲಿ ತಮ್ಮದೇ ಮೂಸಿಕ್‌ ಆಲ್ಬಂ ‘ಇಶ್ಯೂಸ್‌’ ಬಿಡುಗಡೆ ಮಾಡಿದ್ದಾರೆ ಜೂಲಿಯಾ. ಆದರೆ ಹಲವಾರು ಆಲ್ಬಂಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಬಹುಬೇಡಿಕೆಯ ಗಾಯಕಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !