ತೆಲುಗಿನ ಜೂನಿಯರ್ ಎನ್ಟಿಆರ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾ 2027ರ ಜೂನ್ 11ರಂದು ತೆರೆಕಾಣಲಿದೆ. ಬುಧವಾರ (ಮೇ 20) ಜೂನಿಯರ್ ಎನ್ಟಿಆರ್ ಜನ್ಮದಿನದಂದು ‘ಡ್ರ್ಯಾಗನ್’ ಜಗತ್ತಿನ ಖಳನಾಯಕರ ಪರಿಚಯವನ್ನು ಒಂದು ವಿಡಿಯೊ ತುಣುಕಿನ ಮೂಲಕ ಮಾಡಲಾಗಿದೆ.

ಸಿನಿಮಾದ ಕಥೆಯು ‘ಹೆರಾಯಿನ್’ ಮಾದಕವಸ್ತುವಿನ ವಹಿವಾಟು ನಡೆಸುವ ಅಫ್ಗಾನ್ ಟ್ರೇಡಿಂಗ್ ಕಂಪನಿಯ ಸುತ್ತ ಹೆಣೆಯಲಾಗಿದೆ. ಜೂನಿಯರ್ ಎನ್ಟಿಆರ್ ಈ ಕಂಪನಿಯ ಮುಖ್ಯ ಹಂತಕ ‘ಲ್ಯೂಗರ್’ ಆಗಿ ಕಾಣಿಸಿಕೊಂಡಿದ್ದಾರೆ. ನೀಲ್ ಅವರ ಹಿಂದಿನ ಸಿನಿಮಾಗಳಂತೆ ಈ ಸಿನಿಮಾದಲ್ಲೂ ಸಾಲು ಸಾಲು ಪಾತ್ರಗಳು ಕಥೆಯೊಳಗಿವೆ. ‘ಅಫ್ಗಾನ್ ಟ್ರೇಡಿಂಗ್ ಕಂಪನಿ’ಯ ಮುಖ್ಯಸ್ಥ ‘ದಾದಾ ಸರ್ಕಾರ್’ ಆಗಿ ಅಶುತೋಷ್ ರಾಣಾ, ‘ಜಲೀಲ್ ರಹಮಾನ್’ ಎಂಬ ಪಾತ್ರದಲ್ಲಿ ಬಿಜು ಮೆನನ್, ‘ರಘುವೀರ್ ರಾಥೋಡ್’ ಪಾತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ. ಖುಷ್ಬು ಸುಂದರ್, ಗುರು ಸೋಮಸುಂದರಂ, ರಾಜೀವ್ ಕನಕಾಲ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಜೂನಿಯರ್ ಎನ್ಟಿಆರ್ಗೆ ಜೋಡಿಯಾಗಿ ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಂತಾರ’ ಖ್ಯಾತಿಯ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಸಿನಿಮಾವನ್ನು ಬಿಗ್ ಬಜೆಟ್ನಲ್ಲಿ ನಿರ್ಮಿಸುತ್ತಿದೆ. ಈ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾಗೆ ನೀಲ್ ಅವರೇ ಚಿತ್ರಕಥೆ ಬರೆದಿದ್ದಾರೆ. ‘ಕೆ.ಜಿ.ಎಫ್’, ‘ಸಲಾರ್’ ಖ್ಯಾತಿಯ ಭುವನ್ ಗೌಡ ಛಾಯಾಚಿತ್ರಗ್ರಹಣ ಮಾಡುತ್ತಿದ್ದು, ರವಿ ಬಸ್ರೂರ್ ಸಂಗೀತವಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಹೊಂಬಾಳೆ ಫಿಲ್ಮ್ಸ್ಗೆ ‘ಕೆಜಿಎಫ್’ ಮತ್ತು ‘ಸಲಾರ್’ನಂತಹ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಜೂ.ಎನ್ಟಿಆರ್ಗೆ ಹೊಂಬಾಳೆ ಫಿಲ್ಮ್ಸ್ ಜನ್ಮದಿನದ ಶುಭಕೋರಿದ್ದು, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಜೂ.ಎನ್ಟಿಆರ್ ಸಿನಿಮಾ ಮಾಡಲಿದ್ದಾರೆಯೇ ಎನ್ನುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಇತ್ತೀಚೆಗೆ ತೆಲುಗಿನ ದೊಡ್ಡ ಚಿತ್ರಗಳ ವಿದೇಶಿ ಹಾಗೂ ಕರ್ನಾಟಕದ ವಿತರಣಾ ಹಕ್ಕುಗಳನ್ನು ಪಡೆಯುತ್ತಿದೆ. ‘ಡ್ರ್ಯಾಗನ್’ ಚಿತ್ರದ ಬಿಡುಗಡೆ ಮತ್ತು ವಿತರಣೆಯ ಜವಾಬ್ದಾರಿಯನ್ನು ಹೊಂಬಾಳೆ ವಹಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-51-145120057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.