ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್‌ ಯಶ್‌ ಯಾರು ಗೊತ್ತೇ?

ಅನ್ಮೋಲ್‌ನ ಖಡಕ್‌ ಡೈಲಾಗ್‌ಗೆ ಪ್ರೇಕ್ಷಕರು ಫಿದಾ
Last Updated 21 ಡಿಸೆಂಬರ್ 2018, 10:43 IST
ಅಕ್ಷರ ಗಾತ್ರ

ಬೆಂಗಳೂರು:‘ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ ಬರೀ ಒಂದು ಯುದ್ಧ ಗೆಲ್ಲಬಹುದು. ಆದ್ರೆ... ನೀನು ಮುಂದೆ ನಿಂತಿದ್ದೀಯಾ ಅಂತಾ ಸಾವಿರಾರು ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚಾನೇ ಗೆಲ್ಲಬಹುದು...’

–ಇದು ಕೆಜಿಎಫ್‌ ಚಿತ್ರದಲ್ಲಿ ಜೂನಿಯರ್ ಯಶ್‌ಗೆ ಅವರ ಅಮ್ಮ ಹೇಳುವ ಹಿತನುಡಿ. ಈ ಮಾತು ಹೇಳುವ ಮೊದಲು ಆಕೆಗೆ ತಾನು ಸಾಯುವ ಮುನ್ಸೂಚನೆ ಗೊತ್ತಿರುವುದು. ಒಂದೆಡೆ ಮಗ, ಅವನ ಭವಿಷ್ಯ ನೆನಪಿಸಿಕೊಂಡು ಕಣ್ಣೀರಿಡುತ್ತಾಳೆ.

ಚಿತ್ರದಲ್ಲಿ ಜೂನಿಯರ್‌ ಯಶ್‌ ಆಗಿ ಮಿಂಚಿರುವುದು ಮಾಸ್ಟರ್‌ ಅನ್ಮೋಲ್. ಖಡಕ್‌ ಡೈಲಾಗ್‌ಗಳ ಮೂಲಕ ಬಾಲನಟ ಆನ್ಮೋಲ್ ಮೊದಲಾರ್ಧದಲ್ಲಿ ಬಹುಬೇಗ ಪ್ರೇಕ್ಷಕರ ಮನಸೆಳೆಯುತ್ತಾನೆ.

ಅಂದಹಾಗೆ ಯಶ್‌ಅಮ್ಮನಾಗಿ ನಟಿಸಿರುವುದು ನಟಿ ಅರ್ಚನಾ ಜೋಯಿಸ್. ‘ಮಹಾದೇವಿ’ ಧಾರಾವಾಹಿಯಲ್ಲಿ ಅವರು ತ್ರಿಪುರ ಸುಂದರಿ ದೇವಿಯ ಪಾತ್ರ ಮಾಡಿದ್ದರು. ‘ದುರ್ಗಾ’ ಧಾರಾವಾಹಿಯಲ್ಲಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ನೀಲಿ’ ಧಾರಾವಾಹಿಯಲ್ಲೂ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಅರ್ಚನಾ ರಾಷ್ಟ್ರೀಯಮಟ್ಟದ ಭರತನಾಟ್ಯ ಕಲಾವಿದೆಯೂ ಹೌದು.

ಕೆಜಿಎಫ್‌ ಸಿನಿಮಾದಲ್ಲಿ ಯಶ್‌ ತಾಯಿಯಾಗಿ ಅವರ ನಟನೆ ಪ್ರೇಕ್ಷಕರ ಮನ ಸೆಳೆಯುತ್ತದೆ. ಅವರು ಮೂಲತಃ ಕೋಲಾರದವರು. ರಾಕಿ ಬಾಯ್‌ ಹುಟ್ಟುವುದು ಕೆಜಿಎಫ್‌ನಲ್ಲಿಯೇ. ಅರ್ಚನಾ ವಿದ್ಯಾಭ್ಯಾಸ ಪೂರೈಸಿರುವುದು ಮಾತ್ರ ಬೆಂಗಳೂರಿನಲ್ಲಿ. ನೃತ್ಯ, ಸಂಗೀತದ ಮಧ್ಯೆ ಬಿಡುವು ಸಿಕ್ಕರೆ ಪುಸ್ತಕ ಓದುವುದು ಅವರ ಹವ್ಯಾಸವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT