ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲಿ ಕುಹಿ’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

Last Updated 29 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಖ್ಯಾತ ನಟಿ ಶಬಾನಾ ಆಜ್ಮಿ ನಟನೆಯ ‘ಕಾಲಿ ಕುಹಿ’ ಸಿನಿಮಾ ಇಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ. ಟೆರ‍್ರಿ ಸಮುಂದ್ರ ನಿರ್ದೇಶನದ ಈ ಸಿನಿಮಾದಲ್ಲಿ ರಿವಾ ಅರೋರಾ, ಸತ್ಯದೀಪ್ ಮಿಶ್ರಾ, ಸಂಜೀದಾ ಶೇಖ್ ಮೊದಲಾದವರು ನಟಿಸಿದ್ದಾರೆ. ಹೆಣ್ಣುಶಿಶುಗಳ ಹತ್ಯೆಯ ಕಥೆಯನ್ನು ಆಧರಿಸಿದ ಈ ಸಿನಿಮಾವೂ ಹಾರರ್‌–ಥ್ರಿಲ್ಲರ್‌ ಕಥೆಯನ್ನು ಹೊಂದಿದೆ.

ಟ್ರೈಲರ್ ಮೂಲಕ ಕುತೂಹಲ ಹುಟ್ಟಿಸಿರುವ ಸಿನಿಮಾ ಶಿವಾಂಗಿ ಎಂಬ 10 ವರ್ಷದ ಹುಡುಗಿಯ ಕತೆಯಾಗಿದೆ. ಆ ಹುಡುಗಿ ತನ್ನ ಕುಟುಂಬ ಹಾಗೂ ಹಳ್ಳಿಯ ಜನರನ್ನು ಭೂತಗಳಿಂದ ಹೇಗೆ ರಕ್ಷಣೆ ಮಾಡುತ್ತಾಳೆ ಎಂಬ ಕಥೆಯನ್ನು ಹೊಂದಿದೆ ಈ ಸಿನಿಮಾ.

‘ಇಡೀ ಜಗತ್ತಿನಲ್ಲಿ ಎಲ್ಲಾ ಕಡೆಯೂ ಹೆಣ್ಣು ಶಿಶುವಿನ ಹತ್ಯೆ ನಡೆಯುತ್ತಿದೆ. ನಮ್ಮ ಕಣ್ಣ ಮುಂದೆ ಅಥವಾ ಯಾರಿಗೂ ಗೊತ್ತಾಗದ ಹಾಗೆ ಪಟ್ಟಣಗಳಲ್ಲೂ ನಡೆಯುತ್ತಿದೆ. ಆದರೆ ಆ ವಿಷಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆಯುತ್ತಿಲ್ಲ. ಕೇವಲ ಹೆಣ್ಣು ಎನ್ನುವ ಕಾರಣಕ್ಕೆ ಆ ಮಗು ಬದುಕುವ ಹಕ್ಕನ್ನು ಚಿವುಟಿ ಹಾಕಲಾಗುತ್ತಿದೆ. ನಿಜಕ್ಕೂ ಇದು ಅನ್ಯಾಯ. ನಾನು ಈ ಸಿನಿಮಾವನ್ನು ಪ್ರಚಾರಕ್ಕಾಗಿ ಅಥವಾ ಹೆಸರು ಸಂಪಾ‌ದಿಸುವ ಸಲುವಾಗಿ ಒಪ್ಪಿಕೊಂಡಿಲ್ಲ. ಇಂತಹ ಚಿತ್ರಗಳ ಮೂಲಕ ಸಮಾನತೆಯನ್ನು ಸಾರಬೇಕು. ಸಮಾಜದಲ್ಲಿ ಗಂಡು–ಹೆಣ್ಣು ಇಬ್ಬರೂ ಸಮಾನರು ಎಂಬುದನ್ನು ತೋರಿಸಬೇಕು’ ಎಂದಿದ್ದಾರೆ ಶಬಾನಾ ಆಜ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT