ಸೋಮವಾರ, ಸೆಪ್ಟೆಂಬರ್ 20, 2021
27 °C
ತೆಲುಗಿನ ಸೂಪರ್ ಹಿಟ್ ಸಿನಿಮಾ ’ಅರ್ಜುನ್ ರೆಡ್ಡಿ’ ಹಿಂದಿಯಲ್ಲಿ ‘ಕಬೀರ್ ಸಿಂಗ್’

‘ಅರ್ಜುನ್ ರೆಡ್ಡಿ’ ಪೋಷಾಕಿನಲ್ಲಿ ಶಾಹೀದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಾಹೀದ್ ಕಪೂರ್ ಈಗ ಕಬೀರ್ ರಾಜವೀರ್ ಸಿಂಗ್. ಹೌದು, ಏನೂ ಅರಿಯದ ವಿದ್ಯಾರ್ಥಿಯಾಗಿ, ಪ್ರೀತಿ ಮಾಡುವ ಚೋರನಾಗಿ, ಬಳಿಕ ಅಮಲೇರಿಸಿಕೊಂಡ ವ್ಯಕ್ತಿಯಾಗಿ ವಿವಿಧ ಶೇಡ್‌ಗಳಲ್ಲಿ ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡಲು ಶಾಹೀದ್ ಸಜ್ಜಾಗಿದ್ದಾರೆ.

ಅಂದಹಾಗೆ ‘ಕಬೀರ್ ಸಿಂಗ್’ ಸಿನಿಮಾ ತೆಲುಗಿನ ಅರ್ಜುನ್‌ರೆಡ್ಡಿ ಚಿತ್ರದ ಹಿಂದಿ ರಿಮೇಕ್. ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ ಅವರನ್ನು ನಿರ್ದೇಶನ ಮಾಡಿದ್ದ ಸಂದೀಪ್ ವಂಗಾ ಅವರೇ ಹಿಂದಿಯಲ್ಲೂ ಚಿತ್ರವನ್ನು ಹೊರ ತರುತ್ತಿದ್ದಾರೆ. ವಿಜಯ್ ಪಾತ್ರ ಶಾಹೀದ್‌ ಮಾಡುತ್ತಿದ್ದಾರೆ. 

ಶಾಹೀದ್ ಪಾತ್ರದ ವಿವಿಧ ಮಜಲುಗಳು ಟ್ರೇಲರ್‌ನಲ್ಲಿ ಅನಾವರಣ ಗೊಂಡಿವೆ. ಕಿಯಾರಾ ಅಡ್ವಾಣಿ ಜೊತೆಗಿನ ಪ್ರೀತಿ, ಅದು ತಂದ ಬದಲಾವಣೆ, ಸಿಟ್ಟು, ಅಮಲಿನ ಜೀವನವನ್ನು ಒಪ್ಪವಾಗಿ ತೆರೆದಿಟ್ಟಿದ್ದಾರೆ ಅವರು. 

ವಿಕ್ಷಿಪ್ತ ಮನಸ್ಥಿತಿಯ ಪಾತ್ರ ಮಾಡುವಾಗ ಎದುರಿಸಿದ ಸವಾಲುಗಳನ್ನು ಶಾಹೀದ್ ಅವರೇ ಬಿಚ್ಚಿಟ್ಟಿದ್ದಾರೆ. ‘ಭಾವತೀವ್ರತೆಯಿಂದ ಬಳಲುವ ಪಾತ್ರ ಅದಾಗಿತ್ತು. ‘ಉಡ್ತಾ ಪಂಜಾಬ್‌’ನಲ್ಲೂ ಇದೇ ಮನಸ್ಥಿತಿ ಇತ್ತು. ಪ್ಯಾಕಪ್ ಮಾಡಿ ಮನೆಗೆ ಬರುವಾಗ ಪಾತ್ರದಿಂದ ಆಚೆ ಬರಬೇಕಿತ್ತು. ಇಲ್ಲದಿದ್ದರೆ ಅದು ನಕಾರಾತ್ಮಕ ಭಾವವನ್ನು ನನ್ನಲ್ಲಿ ಹುಟ್ಟಿಸುತ್ತಿತ್ತು’ ಎಂದು ಶಾಹೀದ್ ಹೇಳಿಕೊಂಡಿದ್ದಾರೆ. ಜೂನ್ 21ಕ್ಕೆ ಚಿತ್ರ ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.