‘ಕನ್ನಡದಲ್ಲಿ ನಟಿಸುವಾಸೆ’

7

‘ಕನ್ನಡದಲ್ಲಿ ನಟಿಸುವಾಸೆ’

Published:
Updated:

* ಕರ್ನಾಟಕಕ್ಕೆ ಭೇಟಿ ನೀಡಿದ್ದು ಹೇಗನ್ನಿಸಿತು?
ಖುಷಿಯಾಯಿತು. ನನಗೆ ಇಷ್ಟವಾಗುವ ಕೆಲವೇ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಈ ನಗರಕ್ಕೆ ಭೇಟಿ ನೀಡುವ ಅವಕಾಶ ದೊರೆತರೆ, ತಪ್ಪದೇ ಬರುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ವಾತಾವರಣ ನನಗೆ ತುಂಬಾ ಇಷ್ಟ. ಇನ್ನೂ ಖುಷಿಯ ವಿಷಯ ಎಂದರೆ, ನಾನು ಇಲ್ಲಿನ ಮಳಿಗೆ ಉದ್ಘಾಟನೆಗೆ ಬಂದಾಗ, ನನಗೆ ಸ್ವಾಗತ ಕೋರುವಂತೆ ಮಳೆ ಸುರಿಯುತ್ತಿತ್ತು. ಇದು ಸಂತಸವನ್ನು ಇನ್ನಷ್ಟು ಹೆಚ್ಚಿಸಿತು.

* ಇಲ್ಲಿನ ನಿಮ್ಮ ಅಭಿಮಾನಿಗಳ ಬಗ್ಗೆ ಹೇಳಿ...
ನಾನು ಈ ವರೆಗೆ ನೇರವಾಗಿ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಆದರೂ ನನ್ನ ಮೇಲಿನ ಅಭಿಮಾನದಿಂದ ಇಷ್ಟೊಂದು ಜನ ಬಂದಿದ್ದಾರೆ. ಕನ್ನಡಿಗರ ಔದಾರ್ಯಕ್ಕೆ ನಾನು ಋಣಿಯಾಗಿರುತ್ತೇನೆ. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ನನ್ನನ್ನು ನೋಡಲು ಕಾದು ಕುಳಿತಿರುವ ಅವರ ಅಭಿಮಾನ, ನೋಡಿದರೆ ಏನೂ ಹೇಳಬೇಕು ಎಂಬುದೇ ತೋಚುತ್ತಿಲ್ಲ. ಅವರ ಅಭಿಮಾನಕ್ಕೆ ಅನಂತ ಧನ್ಯವಾದಗಳು.

* ‘ಚಂದನವನ’ದ ಬಗ್ಗೆ ಏನು ಹೇಳುತ್ತೀರಿ?
ದೇಶದ ಅತ್ಯುತ್ತಮ ಚಿತ್ರರಂಗಗಳಲ್ಲಿ ಕನ್ನಡ ಚಿತ್ರರಂಗವೂ ಒಂದು. ದೇಶಕ್ಕೆ ಅಪರೂಪದ ನಟರನ್ನು ಈ ನೆಲ ಪರಿಚಯಿಸಿದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ನಟರೂ ಈ ಚಿತ್ರರಂಗದಿಂದ ಬಂದಿದ್ದಾರೆ. ಚಂದನವನದ ಬಗ್ಗೆ ಸದಾ ಗೌರವವಿದೆ.

* ಆದರೆ, ನೀವು ಈ ವರೆಗೆ ನೇರವಾಗಿ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಿಲ್ಲ?
ಇದು ಬೇಸರದ ವಿಷಯವೇ. ಆದರೆ, ಕನ್ನಡದಲ್ಲಿ ನಟಿಸಬೇಕೆಂಬ ಆಸೆ ನನ್ನಲ್ಲಿ ತುಡಿಯುತ್ತಿದೆ. ಇಷ್ಟವಾದ ಪಾತ್ರ ದೊರೆತರೆ ಖಂಡಿತಾ ‘ಚಂದವನ’ದಲ್ಲಿ ಬಣ್ಣ ಹಚ್ಚುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಕನ್ನಡದ ಚಿತ್ರ ಬರಬಹುದು. ನೋಡೋಣ.

* ನಿರ್ದಿಷ್ಟವಾಗಿ ಇಂತಹವರೇ ನಿರ್ದೇಶನದಲ್ಲೇ ನಟಿಸಬೇಕೆಂಬ ಆಸೆ ಇದೆಯೆ?
ಹಾಗೆಲ್ಲಾ ಏನಿಲ್ಲ. ಕನ್ನಡದಲ್ಲೂ ಹಲವು ಪ್ರತಿಭಾವಂತ ನಿರ್ದೇಶಕರಿದ್ದಾರೆ. ಉತ್ತಮ ಕಥೆಯೊಂದಿಗೆ ಯಾರಾದರೂ ಸಂಪರ್ಕಿಸಿದರೆ ಖಂಡಿತಾ ನಟಿಸುತ್ತೇನೆ. ನಿರ್ದಿಷ್ಟವಾಗಿ ಇಂತಹ ನಿರ್ದೇಶಕರ ಚಿತ್ರದ ಮೂಲಕವೇ ಚಂದನವನ ಪ್ರವೇಶಿಸಬೇಕು ಎಂಬ ಆಸೆಯಂತೂ ಇಲ್ಲ.

* ಕನ್ನಡದ ಚಿತ್ರಗಳನ್ನು ನೋಡುತ್ತೀರಾ?
ಖಂಡಿತಾ ನೋಡುತ್ತೇನೆ. ಎಲ್ಲ ಭಾಷೆಗಳ ಚಿತ್ರಗಳನ್ನು ನೋಡಬೇಕೆಂದು ಇಷ್ಟ ಪಡುತ್ತೇನೆ. ಆದರೆ ನೋಡುವುದಕ್ಕೆ ಸಮಯ ಸಿಗುವುದಿಲ್ಲ ಎಂಬುದೇ ಬೇಸರ.

* ‘ಚಂದನವನ’ದಲ್ಲಿ ನಿಮ್ಮಿಷ್ಟದ ನಿರ್ದೇಶಕ ಯಾರು?
ನಿರ್ದಿಷ್ಟವಾಗಿ ಒಬ್ಬರ ಹೆಸರನ್ನೇ ಹೇಳುವುದಕ್ಕೆ ಆಗುವುದಿಲ್ಲ. ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರಿದ್ದಾರೆ. ಕನ್ನಡದ ನಿರ್ದೇಶಕರು ಬೇರೆ ಭಾಷೆಗಳಲ್ಲೂ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಇಷ್ಟವಾಗುವ ನಿರ್ದೇಶಕರು ಹಲವರಿದ್ದಾರೆ.

* ನಿಮಗಿಷ್ಟವಾಗುವ ಕನ್ನಡದ ನಟ ಯಾರು?
ಇದು ಸಮಸ್ಯಾತ್ಮಕ ಪ್ರಶ್ನೆ. ಒಬ್ಬರ ಹೆಸರೇ ಹೇಗೆ ಹೇಳಲಿ. ಕನ್ನಡದ ಹಲವು ನಟರ ನಟನೆ ನನಗೆ ಇಷ್ಟ. ಸ್ನೇಹಿತರೂ ಇದ್ದಾರೆ. ಒಬ್ಬರ ಹೆಸರನ್ನೇ ಹೇಳಲಾಗುವುದಿಲ್ಲ.

* ಕನ್ನಡದ ಯಾವ ನಟನೊಂದಿಗೆ ಬೆಳ್ಳಿತೆರೆ ಹಂಚಿಕೊಳ್ಳಲು ಇಷ್ಟಪಡುತ್ತೀರಿ?
ಇಂತಹ ಆಸೆ ಕೂಡ ನನ್ನ ಮನದಲ್ಲಿ ಇಲ್ಲ. ಕಥೆ ಚೆನ್ನಾಗಿರಬೇಕು. ಪಾತ್ರ ನನಗೆ ಇಷ್ಟವಾಗಬೇಕು ಅಷ್ಟೇ. ಉತ್ತಮ ಚಿತ್ರದಲ್ಲಿ ನಟಿಸಬೇಕು ಎಂಬುದಷ್ಟೇ ನನ್ನ ಗುರಿ.

* ನೀವು ಈವರೆಗೂ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸಿಲ್ಲ. ಅಂತಹ ಚಿತ್ರವನ್ನು ನಿರೀಕ್ಷಿಸಬಹುದೇ?

ಕನ್ನಡದಲ್ಲಾ?

* ಯಾವ ಭಾಷೆಯಲ್ಲಾದರೂ ಸರಿ...

ಅಂತಹ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ನನಗೂ ಇದೆ. ಆದರೆ ಈ ವರೆಗೂ ಅಂತಹ ಪಾತ್ರ ಸಿಕ್ಕಿಲ್ಲ. ಸಿಕ್ಕರೆ ಖಂಡಿತಾ ನಟಿಸುತ್ತೇನೆ. 

* ನಿಮ್ಮ ಮುಂದಿನ ಚಿತ್ರ ಯಾವುದು?
ತಮಿಳು, ತೆಲುಗಿನಲ್ಲಿ ಹಲವು ಚಿತ್ರಗಳಿವೆ. ಕನ್ನಡದ ಚಿತ್ರವೂ ಬರಬಹುದು!

ಬರಹ ಇಷ್ಟವಾಯಿತೆ?

 • 7

  Happy
 • 4

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !