ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗ ರೋಹಿತ್‌ ಶರ್ಮಾ ಮೇಲೆ ಕ್ರಷ್ ಆಗಿತ್ತು: ಕಾಜಲ್ ಅಗರ್‌ವಾಲ್‌

Last Updated 1 ಮೇ 2019, 16:30 IST
ಅಕ್ಷರ ಗಾತ್ರ

‘ಹಿಟ್‌ಮ್ಯಾನ್’ ಎಂದೇ ಖ್ಯಾತರಾದಭಾರತ ಕ್ರಿಕೆಟ್ ತಂಡದ ಉಪ ನಾಯಕ ‘ರೋಹಿತ್‌ ಶರ್ಮಾ ಅವರ ಮೇಲೆ ಕ್ರಷ್‌ ಆಗಿತ್ತು’ ಎಂದು ಟಾಲಿವುಡ್‌ ಮತ್ತು ಕಾಲಿವುಡ್‌ನ ಖ್ಯಾತ ನಟಿ ಕಾಜಲ್‌ ಅಗರ್‌ವಾಲ್ ತಮ್ಮ ಅಂತರಂಗವನ್ನು ಬಿಚ್ಚಿಟ್ಟಿದ್ದಾರೆ.

ಈಚೆಗಷ್ಟೇ ಸಂದರ್ಶನವೊಂದರಲ್ಲಿ ‘ನಿಮಗೆ ಯಾವ ಕ್ರೀಡಾಪಟು ಇಷ್ಟ’ ಎನ್ನುವ ಪ್ರಶ್ನೆಗೆ ತಮ್ಮೊಳಗಿನ ಗುಟ್ಟನ್ನು ರಟ್ಟು ಮಾಡಿದ್ದಾರೆ.

‘ರೋಹಿತ್ ಶರ್ಮಾ ಅವರ ಮೇಲೆ ಒಮ್ಮೆ ಕ್ರಷ್‌ ಆಗಿತ್ತು. ಮೈದಾನದಲ್ಲಿ ಅವರ ಆಟದ ಧಾಟಿಯನ್ನು ಕಂಡು ಸಂಭ್ರಮಿಸುತ್ತಿದ್ದೆ. ಅವರ ಆಟದ ವೈಖರಿ, ಬ್ಯಾಟಿಂಗ್ ಕೌಶಲವೆಂದರೆ ನನಗೆ ಇಷ್ಟ’ ಎಂದು ಹೇಳಿದ್ದಾರೆ.

ತಮ್ಮ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ರೋಹಿತ್ ಶರ್ಮಾ ಈಚೆಗಷ್ಟೇ(ಏಪ್ರಿಲ್ 30) 32ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಸುಮಾರು 10 ವರ್ಷಗಳಿಂದ ಬೇಡಿಕೆ ನಟಿಯಾಗಿ ಮಿಂಚುತ್ತಿರುವ ಕಾಜಲ್‌, ಪ್ರಸ್ತುತ ಕಮಲ್‌ಹಾಸನ್ ನಟನೆಯ ಬಹು ನಿರೀಕ್ಷಿತ ಇಂಡಿಯನ್‌–2 ಚಿತ್ರದ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಇದಲ್ಲದೇ, ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ‘ಪ್ಯಾರಿಸ್ ಪ್ಯಾರಿಸ್’ ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಅವರ ನಟನೆಯ ಟಾಲಿವುಡ್‌ನ ‘ಸೀತಾ’ ಶೀಘ್ರದಲ್ಲೇ ತೆರೆಕಾಣಲಿದ್ದು, ಬೆಲ್ಲಂಕೊಂಡ ಶ್ರೀನಿವಾಸ್‌ ಈ ಚಿತ್ರದ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT