‘ಇಂಡಿಯನ್‌ 2’ ನಲ್ಲಿ ಕಮಲ್‌, ದೇವಗನ್‌?

7
ಬಾಲಿವುಡ್‌

‘ಇಂಡಿಯನ್‌ 2’ ನಲ್ಲಿ ಕಮಲ್‌, ದೇವಗನ್‌?

Published:
Updated:

ಕಮಲಹಾಸನ್‌ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವಿಶ್ವರೂಪಂ’ ತೆರೆ ಕಾಣಲು ಕೆಲವೇ ದಿನ ಬಾಕಿ ಇದೆ. ಅಷ್ಟರಲ್ಲೇ ಅವರು ಶಂಕರ್‌ ನಿರ್ದೇಶನದ ‘ಇಂಡಿಯನ್‌ 2’ ಚಿತ್ರದ ಪಾತ್ರದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಅಜಯ್‌ ದೇವಗನ್‌ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿರುವುದು ಚಿತ್ರದ ತಾರಾ ವರ್ಚಸ್ಸನ್ನು ಹೆಚ್ಚಿಸಲಿದೆ. ‘ಅಜಯ್‌ ದೇವಗನ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದೇನೆ ಎಂದು ಶಂಕರ್‌ ಹೇಳಿದ್ರಿಂದ ನಾನು ಥ್ರಿಲ್‌ ಆಗಿದ್ದೇನೆ’ ಎಂದು ಕಮಲ್‌ ಹೇಳಿಕೊಂಡಿದ್ದಾರೆ.

ಇಂಡಿಯನ್‌ 2’ ರಾಜಕೀಯ ಥ್ರಿಲ್‌ ವಸ್ತುವನ್ನೊಳಗೊಂಡ ಸಿನಿಮಾ ಎನ್ನಲಾಗುತ್ತಿದೆ. ಚಿತ್ರ ನ-ಭೂತೋ ಎಂಬಂತೆ ಮೂಡಿಬರಬೇಕು ಎಂಬ ದೃಷ್ಟಿಯಿಂದ ಚಿತ್ರಕತೆ ಬರೆಯುವ ಹೊಣೆಯನ್ನು ಮೂವರಿಗೆ ವಹಿಸಲಾಗಿದೆ. ಜಯಮೋಹನ್‌, ಕಬೀಲನ್‌ ವೈರಮುತ್ತು ಮತ್ತು ಲಕ್ಷ್ಮೀ ಸರವಣ್‌ ಕುಮಾರ್‌ ಚಿತ್ರಕತೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಕಮಲಹಾಸನ್‌, ತಮಿಳಿನ ‘ಬಿಗ್‌ಬಾಸ್‌’ ರಿಯಾಲಿಟಿ ಶೋದ ಚಿತ್ರೀಕರಣ ಮುಗಿಸಬೇಕಾಗಿದೆ. ‘ಬಿಗ್‌ಬಾಸ್‌’ ಮುಗಿದ ಬಳಿಕವೇ ‘ಇಂಡಿಯನ್‌ 2’ ಸೆಟ್ಟೇರಿದರೆ ಉತ್ತಮ ಎಂಬುದು ಶಂಕರ್‌ ಲೆಕ್ಕಾಚಾರ.

ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತೆರೆಕಾಣಲಿರುವ ‘ಇಂಡಿಯನ್‌ 2’ ನಾಯಕಿಯಾಗಿ ನಯನತಾರಾ ಅವರು ಸಹಿ ಹಾಕಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಚಿತ್ರ ಈ ವರ್ಷಾಂತ್ಯದೊಳಗೆ ತೆರೆಗೆ ಬರುವ ನಿರೀಕ್ಷೆಯಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !