ಚೆನ್ನೈ: ನಟ,-ರಾಜಕಾರಣಿ ಕಮಲ್ ಹಾಸನ್ ಅವರು ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರನ್ನು ಭೇಟಿ ಮಾಡಿ ತಮಿಳು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಆರು ಬೇಡಿಕೆಗಳನ್ನು ಒಳಗೊಂಡ ಜ್ಞಾಪನಾ ಪತ್ರವನ್ನು ಸಲ್ಲಿಸಿದ್ದಾರೆ. ಅದರಲ್ಲಿ ಸರ್ಕಾರಿ ಸ್ವಾಮ್ಯದ ಒಟಿಟಿ ವೇದಿಕೆ ಆರಂಭಿಸಬೇಕು ಎಂಬ ಬೇಡಿಕೆಯೂ ಸೇರಿದೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುುವ ಕಮಲ್ ಹಾಸನ್, ತಡರಾತ್ರಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗೆ ಸಲ್ಲಿಸಿದ ಬೇಡಿಕೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

‘ತಮಿಳು ಪ್ರೇಕ್ಷಕರು ಕೈಗೆಟುಕುವ ಮತ್ತು ಸಬ್ಸಿಡಿ ದರಗಳಲ್ಲಿ ತಮಿಳು ಸಿನಿಮಾ, ಸ್ವತಂತ್ರ ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಬಹುದಾದ ಸರ್ಕಾರಿ ಸ್ವಾಮ್ಯದ ಒಟಿಟಿ ವೇದಿಕೆಯನ್ನು ಆರಂಭಿಸಬೇಕೆಂದು ನಾನು ತಮಿಳುನಾಡು ಸರ್ಕಾರಕ್ಕೆ ವಿನಂತಿ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಹೆಚ್ಚುತ್ತಿರುವ ನಿರ್ಮಾಣ, ವಿತರಣೆ ಮತ್ತು ಥಿಯೇಟರ್ ನಿರ್ವಹಣಾ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು, ಶೇ 4ರಷ್ಟು ಮನರಂಜನಾ ತೆರಿಗೆಯನ್ನು ರದ್ದುಗೊಳಿಸುವಂತೆ ವಿನಂತಿಸಿದ್ದೇನೆ. ಇದು ತಮಿಳು ಚಲನಚಿತ್ರೋದ್ಯಮಕ್ಕೆ ಬಹಳಷ್ಟು ಸಹಾಯವಾಗಲಿದೆ’ ಎಂದು ಅವರು ತಮ್ಮ ಎರಡನೇ ಬೇಡಿಕೆಯ ಬಗ್ಗೆ ವಿವರಿಸಿದ್ದಾರೆ.

ಇದೇವೇಳೆ, ಬಲಿಷ್ಠ ಪೈರಸಿ ವಿರೋಧಿ ತಂಡವನ್ನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಕಮಲ್, ಪೈರಸಿಯು ಕಲಾವಿದರು, ತಂತ್ರಜ್ಞರು, ನಿರ್ಮಾಪಕರ ಕಠಿಣ ಪರಿಶ್ರಮ ಮತ್ತು ಹೂಡಿಕೆಯನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ.

ತಮಿಳುನಾಡು ಪೊಲೀಸ್ ಸೈಬರ್ ಅಪರಾಧ ವಿಭಾಗದಲ್ಲಿ ಮೀಸಲಾದ ಪೈರಸಿ ವಿರೋಧಿ ಘಟಕವನ್ನು ರಚಿಸಲು ಮತ್ತು ಪೈರೇಟೆಡ್ ಕಂಟೆಂಟ್ ಅನ್ನು ನೈಜ ಸಮಯದಲ್ಲಿ ತೆಗೆದುಹಾಕಬಹುದಾದ ವ್ಯವಸ್ಥೆ ರೂಪಿಸುವಂತೆ ಮನವಿ ಮಾಡಿದ್ದಾರೆ.

ಅಲ್ಲದೇ, ರಾಜ್ಯದಾದ್ಯಂತದ ಎಲ್ಲ ಥಿಯೇಟರ್ಗಳಲ್ಲಿ ದಿನಕ್ಕೆ ಐದು ಪ್ರದರ್ಶನ ನೀಡಲು ಅನುಮತಿ ನೀಡುವಂತೆ ಅವರು ಟಿವಿಕೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದು ಥಿಯೇಟರ್ ಆದಾಯವನ್ನು ಸುಧಾರಿಸುತ್ತದೆ ಮತ್ತು ಚಲನಚಿತ್ರ ಪ್ರದರ್ಶನ ಕ್ಷೇತ್ರದ ಚೇತರಿಕೆಗೆ ಬೆಂಬಲ ನೀಡುತ್ತದೆ ಎಂದು ಅವರು ವಿವರಿಸಿದ್ದಾರೆ.

ಥಿಯೇಟರ್ಗಳನ್ನು ರಕ್ಷಿಸಲು, ತಮಿಳುನಾಡಿನಲ್ಲಿ ಬಿಡುಗಡೆಯಾಗುವ ಎಲ್ಲ ಚಿತ್ರಗಳಿಗೆ ಎಂಟು ವಾರಗಳ ಒಟಿಟಿಗೆ ಬಿಡುಗಡೆ ನಿಯಮ ಜಾರಿಗೆ ತರಬೇಕು ಇದು ಥಿಯೇಟರ್ ಮಾಲೀಕರು ಮತ್ತು ವಿತರಕರನ್ನು ಕಾಯುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.