ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೀಕರಣ ಮುಗಿಸಿದ ‘ಕನಕಂ ಕಾಮಿನಿ ಕಲಹಂʼ

Last Updated 16 ಡಿಸೆಂಬರ್ 2020, 13:45 IST
ಅಕ್ಷರ ಗಾತ್ರ

ಮಲೆಯಾಳಂನ ‘ಕನಕಂ ಕಾಮಿನಿ ಕಲಹಂʼ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ರತೀಶ್‌ ಬಾಲಕೃಷ್ಣನ್ ಪೊದುವಾಳ್‌ ಅವರ‌ ನಿರ್ದೇಶನದ ಚಿತ್ರವಿದು.ಪಾಲಿ ಜೂನಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಕೌಟುಂಬಿಕ ಕಥಾವಸ್ತುವನ್ನೊಳಗೊಂಡ ಹಾಸ್ಯ ಪ್ರಧಾನ ಚಿತ್ರ ಇದು.

ರತೀಶ್‌ ಬಾಲಕೃಷ್ಣನ್‌ ಅವರು ಆಂಡ್ರಾಯ್ಡ್‌ ಕುಂಜಪ್ಪನ್‌ ಚಿತ್ರದ ಮೂಲಕ ಖ್ಯಾತರಾದವರು. ‘ಕನಕಂ...’ ಚಿತ್ರದಲ್ಲಿ ಕೌಟುಂಬಿಕ ಹಾಸ್ಯ, ವಿಡಂಬನೆ ಒಳಗೊಂಡಿದೆ.ಇದು ಜನಸಾಮಾನ್ಯರ ಜೀವನದ ಕುರಿತಾದ ಚಿತ್ರ. ಈ ಚಿತ್ರವು ಒಂದು ಕುತೂಹಲಕಾರಿ ಘಟನೆಯನ್ನು ಆಧರಿಸಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಗಂಡ ಹೆಂಡತಿ ಹೋಟೆಲ್‌ ಕೊಠಡಿಯೊಂದರಲ್ಲಿ ವಾಸ್ತವ್ಯ ಹೂಡಿದಾಗ ನಡೆಯುವ ಕಥೆ ಇದು. ವಿನಯ್‌ ಫೋರ್ಟ್‌,ರಾಜೇಶ್ ಮಾಧವನ್, ಜಾಫರ್ ಇಡುಕಿ, ಸುಧೀರ್ ಪರವೂರ್ ಮತ್ತು ಜಾಯ್ ಮ್ಯಾಥ್ಯೂ ತಾರಾಗಣದಲ್ಲಿದ್ದಾರೆ.

ಚಿತ್ರೀಕರಣ ಮುಕ್ತಾಯಗೊಂಡ ಖುಷಿಯಲ್ಲಿ ನಟರಾದನಿವಿನ್ ಪೌಲಿ ಮತ್ತು ಗ್ರೇಸ್ ಆಂಟನಿ ಚಿತ್ರೀಕರಣದ ವೇಳೆ ತೆಗೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಆಂಡ್ರಾಯ್ಡ್‌ ಕುಂಜಪ್ಪನ್‌ ವರ್ಷನ್‌ 5.25ʼ ಚಿತ್ರಕ್ಕೆ ನಟ ಸೂರಜ್‌ ವೆಂಜರಮೂಡು ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಬಳಿಕ ಇದು ತೆಲುಗಿನಲ್ಲೂ ಬಿಡುಗಡೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT