ಸೋಮವಾರ, ಸೆಪ್ಟೆಂಬರ್ 27, 2021
27 °C

ಇನ್‌ಸ್ಟಾಗ್ರಾಮ್‌ ಖಾತೆಯ ಬೆನ್ನು ಬಿದ್ದಿರುವ ಚೀನಾ ಹ್ಯಾಕರ್‌ಗಳು: ಕಂಗನಾ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಹ್ಯಾಕ್‌ ಮಾಡಲು ಚೀನಾ ಮೂಲದ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಬಾಲಿವುಡ್‌ ನಟಿ ಕಂಗನಾ ರನೋಟ್‌ ಆರೋಪಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಬುಧವಾರ ಬರೆದುಕೊಂಡಿರುವ ಅವರು, 'ಇನ್‌ಸ್ಟಾಗ್ರಾಮ್‌ ಖಾತೆಗೆ ಲಾಗ್‌ ಇನ್‌ ಆಗಲು ಕಷ್ಟವಾಗುತ್ತಿದೆ. ಚೀನಾ ಮೂಲದ ವ್ಯಕ್ತಿಗಳು ನನ್ನ ಖಾತೆಯನ್ನು ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಅತೀ ದೊಡ್ಡ ಅಂತಾರಾಷ್ಟ್ರೀಯ ಪಿತೂರಿ' ಎಂದು ತಿಳಿಸಿದ್ದಾರೆ.

'ಕಳೆದ ರಾತ್ರಿ ಚೀನಾದಲ್ಲಿರುವ ಅಪರಿಚಿತ ವ್ಯಕ್ತಿಗಳು ನನ್ನ ಖಾತೆಯನ್ನು ಹ್ಯಾಕ್ ಮಾಡಲು ಯತ್ನಿಸಿದಾಗ ಇನ್‌ಸ್ಟಾಗ್ರಾಮ್ ಅಲರ್ಟ್ ಸಿಕ್ಕಿತು. ಆ ಅಲರ್ಟ್‌ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಇಂದು ಬೆಳಿಗ್ಗೆ ತಾಲಿಬಾನಿಗಳ ಬಗೆಗಿನ ನನ್ನ ಎಲ್ಲಾ ಪೋಸ್ಟ್‌ಗಳು ಕಣ್ಮರೆಯಾಗಿವೆ. ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಯಿತು. ಇನ್‌ಸ್ಟಾಗ್ರಾಮ್‌ಗೆ ಕರೆ ಮಾಡಿದ ನಂತರ ನಾನು ಮತ್ತೆ ಲಾಗ್‌ ಇನ್‌ ಆಗಲು ಅವಕಾಶ ದೊರಕಿತು' ಎಂದು ಕಂಗನಾ ಹೇಳಿದ್ದಾರೆ.

ಸದಾ ಒಂದಿಲ್ಲೊಂದು ಪೋಸ್ಟ್‌ ಮೂಲಕ ಸುದ್ದಿ ಹಾಗೂ ವಿವಾದದಲ್ಲಿರುವ ಕಂಗನಾ ಅವರ ಟ್ವಿಟರ್‌ ಖಾತೆಯನ್ನು ಮೇನಲ್ಲಿ ಸ್ಥಗಿತಗೊಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು