ಬಾಲಿವುಡ್ ನಟಿ ಕಂಗನಾ ರನೌತ್ ಅವರು ಗೌಪ್ಯವಾಗಿ ವಿವಾಹವಾಗಿದ್ದಾರೆ ಎಂದು ಹೇಳಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಎಲ್ಲಾ ಊಹೆಗಳಿಗೆ ಕಂಗನಾ ರನೌತ್ ಅವರು ತೆರೆ ಎಳೆದಿದ್ದಾರೆ.

ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ‘ಕಂಗನಾ ರನೌತ್ ರಹಸ್ಯವಾಗಿ ಮದುವೆಯಾಗಿದ್ದಾರೆಯೇ?’ ಎಂಬ ಸ್ಟೋರಿಯನ್ನು ಹಂಚಿಕೊಂಡ ಕಂಗನಾ, ‘ ನಗರದ ಸುತ್ತಮುತ್ತ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಆ ಸಿನಿಮಾದಲ್ಲಿ ಪಾತ್ರವೊಂದನ್ನು ನಿರ್ವಹಿಸಲು ಹೋಗುವಾಗ ಯಾರೋ ವಿಡಿಯೊವನ್ನು ಸೆರೆ ಹಿಡಿದಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಏನಿದು ಘಟನೆ

ಕಂಗನಾ ರನೌತ್ ಕೊರಳಿನಲ್ಲಿ ಮಂಗಳ ಸೂತ್ರವಿರುವ ಹಾಗೂ ಕೈಯಲ್ಲಿ ಬಳೆ ಹಾಕಿಕೊಂಡು ಮದುವೆಯಾದ ವಧುವಿನಂತೆ ಕಾಣಿಸಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ನಟಿ ಯಾರಿಗೂ ತಿಳಿಯದಂತೆ ವಿವಾಹವಾಗಿರಬಹುದೆಂಬ ಸಂದೇಹವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಆದರೆ ಈ ವಿಡಿಯೊದಲ್ಲಿರುವಂತೆ ನಿಜ ಜೀವನದಲ್ಲಿ ಕಂಗನಾ ಮದುವೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

‘ಈ ಒಂದು ವಿಡಿಯೊ ದೇಶದ ತುಂಬಾ ಹರಿದಾಡುತ್ತಿದೆ. ನನಗೆ ಸಾಕಷ್ಟು ಕರೆಗಳೂ ಬಂದಿವೆ. ಮಹಿಳೆಯೊಬ್ಬಳು ವಧುವಿನ ವೇಷದಲ್ಲಿ ಕಾಣಿಸಿಕೊಳ್ಳುವುದು ಒಂದು ವಿಷಯವೇ?, ನಾನು ಎಂದಿಗೂ ಗೌಪ್ಯವಾಗಿ ವಿವಾಹವಾಗುವುದಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ’, ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಚಿರಾಗ್ ಪಾಸ್ವಾನ್ ಜೊತೆಗೆ ಕಂಗನಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಷಯಗಳು ಕೇಳಿಬಂದಿದ್ದವು. ಈ ಕುರಿತು ಮಾತನಾಡಿರುವ ನಟಿ, ‘ಚಿರಾಗ್ ಸ್ನೇಹಿತ ಮಾತ್ರ. ಅವರು ಮತ್ತು ನನ್ನ ನಡುವೆ ಯಾವುದೇ ರೀತಿಯ ಪ್ರೀತಿ –ಪ್ರೇಮವಿಲ್ಲ. ನಾವಿಬ್ಬರೂ 10 ವರ್ಷದಿಂದಲೂ ಗೆಳೆಯರಾಗಿದ್ದೇವೆ’ ಎಂದು ಎಎನ್ಐನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಕಂಗನಾ ಮತ್ತು ಚಿರಾಗ್ ‘ಮಿಲೇ ನಾ ಮಿಲೇ ಹಮ್’ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಕಂಗನಾ ಕೊನೆಯದಾಗಿ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸಿ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.