ಭಾನುವಾರ, ಆಗಸ್ಟ್ 14, 2022
26 °C
ಮನಾಲಿಯಿಂದ ಮುಂಬೈಗೆ ವಾಪಸ್

ಕೋವಿಡ್‌ನಿಂದ ಚೇತರಿಸಿಕೊಂಡ ಬೆನ್ನಲ್ಲೇ ಭರ್ಜರಿ ಕುದುರೆ ಸವಾರಿ ಮಾಡಿದ ಕಂಗನಾ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸದಾ ಸುದ್ದಿಯಲ್ಲಿರುವ ಬಾಲಿವುಡ್ ಚೆಲುವೆ ಕಂಗನಾ ರನೌತ್ ಅವರು ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿ ದೀರ್ಘಾವಧಿಯ ವಿಶ್ರಾಂತಿಯಲ್ಲಿದ್ದರು.

ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿರುವ ಅವರು ಮನಾಲಿಯಿಂದ ಮುಂಬೈಗೆ ಬಂದಿಳಿದಿದ್ದು, ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ಧಾರೆ. ಇದೀಗ ಕಂಗನಾ ಭರ್ಜರಿಯಾಗಿ ಕುದುರೆ ಸವಾರಿ ಮಾಡುವ ಮೂಲಕ ಹೊಸ ಚೈತನ್ಯವನ್ನು ಕಂಡುಕೊಂಡಿದ್ದಾರೆ.

ಮುಂಬೈನಲ್ಲಿ ಮಳೆ ಸುರಿಯುವುದಕ್ಕೆ ಶನಿವಾರ ಕೊಂಚ ವಿರಾಮ ಸಿಕ್ಕಿತ್ತು. ಇದೇ ವೇಳೆ ಕುದುರೆ ಸವಾರಿ ನಡೆಸಿದ ಕಂಗನಾ, ಇನ್ಸ್ಟಾಗ್ರಾಮ್‌ ಹಾಗೂ ಕೂ ನಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದಾರೆ.

‘ತಲೈವಿ ಚಿತ್ರಕ್ಕಾಗಿ ಸಾಕಷ್ಟು ತೂಕ ಹೆಚ್ಚಿಸಿಕೊಂಡೆ. ಬಹಳ ದಿನಗಳ ನಂತರ ಕುದುರೆ ಸವಾರಿ ಮಾಡಿದೆ. ಮೂಕಪ್ರಾಣಿಗಳೊಂದಿಗೆ ನಮ್ಮ ಮನದಾಳವನ್ನು ಹಂಚಿಕೊಳ್ಳುವುದಕ್ಕೆ ಇದೊಂದು ಅದ್ಭುತ ಉದಾಹರಣೆ. ಕುದುರೆ ಸವಾರಿಯಿಂದ ನನಗೆ ತುಂಬಾ ಖುಷಿಯಾಯಿತು‘ ಎಂದು ಬರೆದುಕೊಂಡಿದ್ದಾರೆ.

 

ಅಲ್ಲದೇ ಕಂಗನಾ, ಲಾಕ್‌ಡೌನ್ ಇರುವುದರಿಂದ ಮನೆಯಲ್ಲಿ ಖಾಲಿ ಕುಳಿತಿಲ್ಲ. ಸಸಿಗಳನ್ನು ನೆಡುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದು ಮಾಡುತ್ತಿದ್ದಾರೆ.

ಕಂಗನಾ ನಟಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಕಥೆಯಾಧಾರಿತ ತಲೈವಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇದರಲ್ಲಿ ಕಂಗನಾ ಜಯಲಲಿತಾ ಪಾತ್ರ ನಿರ್ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು