ಸೋಮವಾರ, ಮೇ 10, 2021
19 °C

ನಾನು ಬೇಡದ ಹೆಣ್ಣುಮಗುವಾಗಿದ್ದೆ: ಕಂಗನಾ ಹೇಳಿದ ಕಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಟ್ವಿಟರ್‌ನಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುವ ನಟಿ ಕಂಗನಾ ರನೌಟ್‌ ಅದರ ಮೂಲಕ ನಿರಂತರ ಸುದ್ದಿಯಲ್ಲಿರುತ್ತಾರೆ. ನಿಷ್ಠುರ ಮಾತುಗಳಿಗೆ ಹೆಸರಾಗಿರುವ ಅವರು ಟ್ವೀಟ್‌ ಮೂಲಕವೇ ಹಲವರನ್ನು ತಿವಿದಿದ್ದಾರೆ. ಇಂತಿರುವ ಕಂಗನಾ ತಾವು ಬೇಡದ ಹೆಣ್ಣುಮಗುವಾಗಿದ್ದೆ ಎಂಬ ಸಂಗತಿಯನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: 

ನಟಿ ಕಂಗನಾ ಅವರ ಕಾರ್ಯತತ್ಪರತೆಯನ್ನು ಹೊಗಳಿ ಬಾಲಿವುಡ್‌ ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿ ಹೋತ್ರಿ ಅವರು ಭಾನುವಾರ ಟ್ವೀಟ್‌ ಮಾಡಿದ್ದರು. ಅಗ್ನಿಹೋತ್ರಿ ಅವರ ಟ್ವೀಟ್‌ ಅನ್ನು ತಮ್ಮ ಅಭಿಪ್ರಾಯದೊಂದಿಗೆ ಕಂಗನಾ ರೀಟ್ವೀಟ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 

'ನಾನು ಬೇಡದ ಹೆಣ್ಣು ಮಗುವಾಗಿದ್ದೆ. ಇಂದು ನಾನು ಅತ್ಯುತ್ತಮ, ಉತ್ಸಾಹಭರಿತ ಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ, ಹಣಕ್ಕಾಗಿ ಅಲ್ಲ, ಖ್ಯಾತಿಗಾಗಿ ಅಲ್ಲ. ಜಗತ್ತಿನ ಅತ್ಯುತ್ತಮರು ನನ್ನನ್ನು ನೋಡಿದಾಗ ಮತ್ತು ‘ನೀವು ಮಾತ್ರ ಇದನ್ನು ಮಾಡಬಹುದು’ ಎಂದು ಹೇಳಿದಾಗ ನನಗನಿಸುತ್ತದೆ... ನಾನು ಬೇಡವಾಗಿದ್ದೆ, ಆದರೆ ನನಗೆ ಅಗತ್ಯವಾಗಿದ್ದೆ ಎಂದು. ಹೆಚ್ಚು ಅಗತ್ಯವಾಗಿದ್ದೆ ಎಂದೆನಿಸುತ್ತದೆ,' ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು