ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಕ್‌ ನೃತ್ಯದ ವಿಡಿಯೊ ಹಂಚಿಕೊಂಡ ಕಂಗನಾ ರನೌತ್

Published 4 ಜೂನ್ 2023, 11:06 IST
Last Updated 4 ಜೂನ್ 2023, 11:06 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಬಹು ನಿರೀಕ್ಷಿತ ಸಿನಿಮಾ 'ಎಮರ್ಜೆನ್ಸಿ' ಚಿತ್ರದ ಪೋಸ್ಟ್ ಪ್ರೊಡೆಕ್ಷನ್‌ ಕೆಲಸದಲ್ಲಿ ನಿರತರಾಗಿದ್ದಾರೆ.

ನಟಿ ಕಂಗನಾ, ಕಥಕ್‌ ನೃತ್ಯ ಅಭ್ಯಾಸದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಗುರೂಜಿ ರಾಜೇಂದ್ರ ಚತುರ್ವೇದಿ ಅವರೊಂದಿಗೆ ಬೆಳಗಿನ ನೃತ್ಯ ದಿನಚರಿ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲಿ ನಟಿ ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ತಬಲಾದ ನಾದಕ್ಕೆ ಕಥಕ್‌ ಹೆಜ್ಜೆ ಹಾಕುತ್ತ ನಟಿ ನೃತ್ಯ ಅಭ್ಯಾಸ ಮಾಡಿದ್ದಾರೆ.

'ಎಮರ್ಜೆನ್ಸಿ' ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಇದೇ ವರ್ಷ ಅಕ್ಟೋಬರ್‌ನಲ್ಲಿ ತೆರೆ ಕಾಣಲಿದೆ. 'ತೇಜಸ್' ಚಿತ್ರದಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ 'ಚಂದ್ರಮುಖಿ 2' ಸಿನಿಮಾದಲ್ಲಿಯೂ ಅಭಿನಯಿಸಲಿದ್ದಾರೆ.

 ನಟಿ ಕಂಗನಾ, ಕಥಕ್‌ ನೃತ್ಯ ಅಭ್ಯಾಸದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ  ಹಂಚಿಕೊಂಡಿದ್ದಾರೆ.
ನಟಿ ಕಂಗನಾ, ಕಥಕ್‌ ನೃತ್ಯ ಅಭ್ಯಾಸದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT