ಬೆಂಗಳೂರು: ಚಂದನವನದ ನಟ, ನಿರ್ದೇಶಕ ಮತ್ತು ನಿರ್ಮಾಪಕ ದಿಲೀಪ್ ರಾಜ್ (47) ಇಂದು (ಬುಧವಾರ) ನಿಧನರಾದರು.

ಮಿಲನ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು, ಯು ಟರ್ನ್, ಅಂಬಿ ನಿಂಗೆ ವಯಸ್ಸಾಯ್ತೋ ಸೇರಿದಂತೆ 24 ಸಿನಿಮಾ ಹಾಗೂ 12ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದರು.

ಇವರು ಹಾಸನದ ಅರಸೀಕೆರೆಯವರು. ಇತ್ತೀಚೆಗೆ ತೆರೆಕಂಡ 'ಲವ್ ಮಾಕ್ಟೇಲ್ 3' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

ದಿಲೀಪ್ ರಾಜ್ ಅವರು ನಟಿಸಿದ್ದ ಕೊನೆಯ ಸಿನಿಮಾ, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ ಜನವರಿ 10ರಂದು ತೆರೆ ಕಂಡಿದೆ.

2021ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಹಿಟ್ಲರ್ ಕಲ್ಯಾಣ’ದಲ್ಲಿ ಹೀರೋ ಆಗಿ ಮಿಂಚಿದ್ದ ದಿಲೀಪ್ ರಾಜ್, ಎಜೆ ಪಾತ್ರಕ್ಕೆ ಜೀವ ತುಂಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.