ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಮಿಂಚಿದ್ದ ನಟ ದಿಲೀಪ್ ರಾಜ್ (47) ಹೃದಯಾಘಾತದಿಂದ ನಿಧನರಾಗಿದ್ದಾರೆ. ವೃತ್ತಿ ಜೀವನದಲ್ಲಿ ನಟನೆ, ನೃತ್ಯ, ನಿರ್ದೇಶನ, ನಿರ್ಮಾಣದಲ್ಲಿಯೂ ಛಾಪು ಮೂಡಿಸಿದ್ದ ದಿಲೀಪ್ ಅವರು ಡಬ್ಬಿಂಗ್ ವಿರೋಧಿಯಾಗಿದ್ದರು.

ಈ ಬಗ್ಗೆ ಸುಧಾ ವಾರಪತ್ರಿಕೆಯೊಂದಿಗೆ ಮಾತನಾಡಿದ್ದರು. 2021ರ ಆಗಸ್ಟ್ 19ರಂದು ಪ್ರಕಟಗೊಂಡ ದಿಲೀಪ್ ರಾಜ್ ಅವರ ಜತೆಗಿನ ಮಾತುಕತೆಯ ಪೂರ್ಣಪಾಠ ಇಲ್ಲಿದೆ.

ಹಿಟ್ಲರ್ ಕಲ್ಯಾಣ ಎಂಬ ಹೆಸರಿನ ಹಿನ್ನೆಲೆ ಏನು?

ಹಿಟ್ಲರ್ ಎಂಬ ಹೆಸರು ಹೊಸತೇನೂ ಅಲ್ಲ. ಆ ಹೆಸರು ಜಗತ್ತಿನಲ್ಲೇ ಜನಜನಿತವಾಗಿದೆ. ಆ ಹೆಸರು ಕೇಳಿದ ತಕ್ಷಣ ಕಣ್ಣೆದುರಿಗೆ ಕಾಣುವ ದೃಶ್ಯ ಭಯಾನಕವಾಗಿದೆ. ಏಕೆಂದರೆ ಆತನೊಬ್ಬ ನಿರಂಕುಶ ಅಧಿಕಾರಿ. ಅವನ ಜೊತೆ ಹೆಣಗುವುದು ಕಷ್ಟ. ಹೀಗಿರುವಾಗ ಅಂತಹ ಹೆಸರಿನ ಪಾತ್ರಕ್ಕೆ ಕಲ್ಯಾಣ ಮಾಡಿದರೆ ಹೇಗೆ ಎಂಬ ಕುತೂಹಲ ಹುಟ್ಟಿಕೊಳ್ಳುತ್ತದೆ. ನನಗೂ ವಾವ್ ಚೆನ್ನಾಗಿದೆ ಎಂದೇ ಅನಿಸಿತು. ಧಾರಾವಾಹಿ ನಾಮಕರಣ ಕೂಡ ಸ್ವಾರಸ್ಯಕರವಾಗಿದೆ. ನಾವೆಲ್ಲರೂ ‘ಹಿಟ್ಲರ್ ಕಲ್ಯಾಣ’ಕ್ಕೆ ವೋಟ್ ಮಾಡಿ ಅಂತಿಮಗೊಳಿಸಿದೆವು. ಹಿಟ್ಲರ್ ಎಂದ ತಕ್ಷಣ ಬೇರೆಯ ಕಲ್ಪನೆಯನ್ನೇ ಬರುತ್ತದೆ. ಧಾರಾವಾಹಿಯ ಹೆಸರಿಗೆ ಸಾಕಷ್ಟು ಅವಕಾಶಗಳು ಇದ್ದವು. ಇದು ಹಿಂದಿಯ ರಿಮೇಕ್ ಕಥೆ. ಅಲ್ಲಿ ಬೇರೆಯ ಹೆಸರನ್ನೇ ಇಟ್ಟಿದ್ದಾರೆ. ಸಾಮಾನ್ಯವಾಗಿ ಪುರುಷ ಪ್ರಧಾನ ಹೆಸರಿನ ಧಾರಾವಾಹಿಗಳು ತೀರಾ ಕಡಿಮೆ. ನಾಯಕಿ ಹೆಸರಿನಲ್ಲಿ ಧಾರಾವಾಹಿಗೆ ಹೆಸರಿಡಬೇಕಾ ಎಂಬ ಚರ್ಚೆಯೂ ನಡೆದಿತ್ತು. ಇನ್ನೂ ಬೇರೆ ಹೆಸರುಗಳ ಬಗ್ಗೆ ಯೋಚಿಸಿದೆವು. ಹಿಟ್ಲರ್ ಆಕರ್ಷಣೀಯವಾಗಿರುತ್ತದೆ ಎನ್ನುವ ಕಾರಣಕ್ಕೆ ಇದೇ ಹೆಸರು ಅಂತಿಮವಾಯಿತು.

ಕ್ರಿಯೆಟಿವ್, ರಿಮೇಕ್, ಡಬ್ಬಿಂಗ್ ಮೂರು ಬಗೆಯ ಧಾರಾವಾಹಿಗಳು ಬರುತ್ತಿವೆ. ಒಬ್ಬ ಕಲಾವಿದಾರಾಗಿ ಈ ಬಗ್ಗೆ ಏನು ಹೇಳುತ್ತೀರಿ?

ವೈಯಕ್ತಿಕವಾಗಿ ನಾನು ಸೃಜನಶೀಲತೆಗೆ ಮೊದಲ ಆದ್ಯತೆ ಕೊಡುತ್ತೇನೆ. ಮೂಲಭಾವ– ಮೂಲಕಥೆ ಇಷ್ಟ ಆಗುತ್ತವೆ. ಅದರಲ್ಲಿ ಸರಿ– ತಪ್ಪು ಏನೇ ಇದ್ದರೂ ಹೊಸತರ ಮಿಡಿತ ಇರುತ್ತದೆ. ನಮ್ಮದು, ನಮ್ಮತನ ಎನ್ನುವುದನ್ನು ಅಲ್ಲಿ ಕಾಣಬಹುದು. ನಮ್ಮ ವಾತಾವರಣ ಮತ್ತು ಸಂಸ್ಕೃತಿಗೆ ತಕ್ಕಂತೆ ನಮ್ಮ ಯೋಚನೆ ನಿರ್ಮಿತವಾಗಿರುತ್ತದೆ. ಅದನ್ನು ಮೀರಿ ನಾವೇನೂ ಯೋಚಿಸುವುದಿಲ್ಲ. ಹಾಗಾಗಿ ಸ್ವಂತಿಕೆಯನ್ನು ಮೆಚ್ಚುತ್ತೇನೆ. ರಿಮೇಕ್ ವಿಷಯಕ್ಕೆ ಬಂದರೆ ಒಂದು ಭೂಮಿಕೆ ಇರುತ್ತದೆ, ಅದರ ಮೇಲೊಂದು ನಮ್ಮ ನೆಲೆ ಆವಿರ್ಭವಿಸುತ್ತದೆ. ಅಂದರೆ ಮೂಲ ಕಥೆಯ ಅಸ್ಥಿಪಂಜರಕ್ಕೆ ದೇಸಿಯತೆಯ ಜೀವ ತುಂಬಿ ನಮ್ಮ ಸೊಗಡಿಗೆ ಅದನ್ನು ಹೊಂದಿಸುತ್ತೇವೆ. ಪಾತ್ರ– ಕಥೆ– ಸನ್ನಿವೇಶ ಎಲ್ಲ ಕಡೆ ನಮಗೆ ಬೇಕಾದಂತೆ ಬದಲಾವಣೆಯನ್ನು ಮಾಡಿಕೊಳ್ಳುತ್ತೇವೆ. ಆದರೆ ಡಬ್ಬಿಂಗ್ನಲ್ಲಿ ಇಂತಹ ಸ್ವಾತಂತ್ರ್ಯ ಇರುವುದಿಲ್ಲ. ವೈಯಕ್ತಿಕವಾಗಿ ನನಗೆ ಡಬ್ಬಿಂಗ್ ಇಷ್ಟ ಆಗದಿರುವುದರಿಂದ ಅದನ್ನು ವಿರೋಧಿಸುತ್ತೇನೆ.

ಕಲಾವಿದನಾಗಿ ನಿಮ್ಮನ್ನು ನೀವು ಪರಿಚಯಿಸುವುದಾರೆ...

ಕಲಾವಿದನಾಗಿ ನಾನು ಮೂರು ವೇದಿಕೆಯಲ್ಲಿ ದುಡಿದಿದ್ದೇನೆ. ಮೊದಲು ನಾಟಕ, ಸೀರಿಯಲ್ ನಂತರದಲ್ಲಿ ಸಿನಿಮಾ ಮಾಡಿದ್ದೇನೆ. ಮೂರು ಬಗೆಯ ಮಾಧ್ಯಮದಲ್ಲಿ ಇದ್ದೇನೆ. ಕಲಾವಿದನಾಗಿ ನನ್ನ ಮೊದಲ ಪ್ರಾಮುಖ್ಯತೆ ರಂಗಭೂಮಿ. ಅಲ್ಲಿ ಕೆಲಸ ಮಾಡಬೇಕು ಎನ್ನುವ ಹುಮ್ಮಸ್ಸು ಹೆಚ್ಚು. ವೇದಿಕೆ ನೀಡುವ ಅನುಭವ ಕ್ಯಾಮೆರಾ ಆಗಲಿ ಲೈಟ್ ಆಗಲಿ ನೀಡುವುದಿಲ್ಲ. ಆ ಜೀವನಾನುಭವವೇ ಭಿನ್ನ ಎಂದು ಅನಿಸಿದೆ. ಸೀರಿಯಲ್ ಸಿನಿಮಾ ಎಂದು ಹೇಳುವುದಾದರೆ, ಒಬ್ಬ ಕಲಾವಿದನನ್ನು ಬಿಂಬಿಸುವಲ್ಲಿ ಸಿನಿಮಾ ಮುಂದೆ ನಿಲ್ಲುತ್ತದೆ. ಸಿನಿಮಾದಲ್ಲಿ ಕಲಾವಿದ ಅದ್ಧೂರಿಯಾಗಿ ಖಂಡಿತ ಹೊರಹೊಮ್ಮುತ್ತಾನೆ. ಆದರೆ ಅದೇ ಕಾಲವಿದ ಮನೆ ಮಾತಾಗುವುದು, ವೀಕ್ಷಕರ ಮನಸಿಗೆ ಹತ್ತಿರವಾಗುವುದು ಧಾರಾವಾಹಿಯಲ್ಲಿ. ನನಗೆ ಇದನ್ನೇ ಮಾಡಬೇಕು ಎನ್ನುವ ಉದ್ದೇಶ ಇರಲಿಲ್ಲ. ಸಿಕ್ಕ ಅವಕಾಶವನ್ನು ನಾನು ಇಷ್ಟಪಟ್ಟು ಖುಷಿಯಿಂದ ಮಾಡಿದ್ದೇನೆ.

ಬಣ್ಣ ಹಚ್ಚುವ ಸಂದರ್ಭ ನಿಮಗೆ ಬಂದಿದ್ದಾದರೂ ಹೇಗೆ?

ಮೂಲತಃ ನಾನು ಡಾನ್ಸರ್, ಕೋರಿಯೋಗ್ರಾಫರ್ ಆಗಬೇಕಿತ್ತು. ವೇದಿಕೆ ನನಗೆ ಹೊಸತೇನೂ ಆಗಿರಲಿಲ್ಲ. ಕಾಲೇಜು ದಿನದಲ್ಲಿ ನಾಟಕವೊಂದರಲ್ಲಿ ಬಣ್ಣ ಹಚ್ಚಬೇಕಾಗ ಆಕಸ್ಮಿಕ ಸಂದರ್ಭ ಎದುರಾಯಿತು. ಆ ನಾಟಕದಲ್ಲಿ ನೃತ್ಯ ಪ್ರಧಾನ ಪಾತ್ರಕ್ಕೆ ಡಾನ್ಸ್ರ್ ಬೇಕಿತ್ತು. ಅದನ್ನು ನಾನು ಮಾಡಿದೆ. ಶಾಲಾ ದಿನಗಳಲ್ಲಿ ಪಾತ್ರ ಮಾಡುತ್ತಿದ್ದೆ. ಆದರೆ ಅಲ್ಲಿಗೆ ಸೀಮಿತವಾಗುತ್ತಿತ್ತು. ಕಾಲೇಜು ರಂಗಭೂಮಿಯಲ್ಲಿ ಸಿಕ್ಕ ಮನ್ನಣೆ ಪ್ರೋತ್ಸಾಹದಿಂದ ಒಂದಾದ ಮೇಲೆ ಒಂದು ನಾಟಕಗಳನ್ನು ಆಡಲು ಶುರುಮಾಡಿದೆ. ಅಲ್ಲಿಂದ ನಾನು ನಟನಾದೆ. ಸೀರಿಯಲ್ಗೂ ಅವಕಾಶ ಸಿಕ್ಕವೂ. ಅಲ್ಲಿ ಭಯವೇನೂ ಆಗಲಿಲ್ಲ. ಪಾತ್ರ ಸಿಕ್ಕರೆ ಅದರಲ್ಲಿ ತಲ್ಲೀನ ಆಗುವುದರಿಂದ ಯಾವ ವೇದಿಕೆ ಆದರೂ ಹೆಚ್ಚಿನ ಬದಲಾವಣೆ ಅಥವಾ ವ್ಯತ್ಯಾಸ ಅಂತ ನನಗೆ ಅನಿಸುವುದಿಲ್ಲ.

ಮುಂದೆ ದಿಲೀಪ್ ಅವರ ಪಯಣ ಹೇಗಿರಬಹುದು...

ಈ ಕ್ಷೇತ್ರದಲ್ಲಿ ನನ್ನನ್ನು ನಿರ್ದೇಶನ ಕೂಡ ಆಕರ್ಷಿಸಿದೆ. ಸಾಕಷ್ಟು ಧಾರಾವಾಹಿಗಳು ಆರಂಭಿಕ ಕಂತುಗಳನ್ನು ನಾನೇ ನಿರ್ದೇಶನ ಮಾಡಿದ್ದೂ ಇದೆ. ‘ಹಿಟ್ಲರ್’ನಲ್ಲಿ ಮಾಡಲು ಸಾಧ್ಯ ಆಗುತ್ತಿಲ್ಲ. ಏಕೆಂದರೆ, ಅಭಿನಯದಲ್ಲಿ ಹೆಚ್ಚಿನ ಗಮನಕೇಂದ್ರೀಕೃವಾಗಿದೆ ಹಾಗಾಗಿ ಹಿಂದೆ ಉಳಿದಿದ್ದೇನೆ. ನಿರ್ದೇಶನ ಮಾಡಬೇಕು ಎನ್ನುವ ಬಯಕೆ ಇದ್ದೇ ಇದೆ. ನಿರ್ದೇಶನ ಎಂದು ಆಯ್ಕೆ ಮಾಡಿಕೊಂಡರೆ ಸಿನಿಮಾದಲ್ಲಿ ಅದನ್ನು ಪ್ರಯೋಗಿಸಬೇಕು. ಕ್ಯಾನ್ವಸ್ ನನಗೆ ದೊಡ್ಡದಾಗಿ ಬೇಕು.

ವೈಯಕ್ತಿಕವಾಗಿ ನೀವು ಮತ್ತು ನಿಮ್ಮ ಹೊಣೆಯ ಬಗ್ಗೆ ಹೇಳುವುದಾದರೆ...

ದಿಲೀಪ್ ಆಗಿ ಹೆಚ್ಚು ಅಂತರ್ಮುಖಿ. ಬಿಡುವಿನ ವೇಳೆ ಹೆಚ್ಚು ಮನೆಯಲ್ಲೇ ಇರುತ್ತೇನೆ. ಸ್ನೇಹಿತರ ಜೊತೆ ಹೆಚ್ಚು ಬೆರೆಯುವುದಿಲ್ಲ. ಅಂತಹ ಸಂದರ್ಭ ಎದುರಾದರೂ ಭಾಗವಹಿಸುವುದು ತೀರಾ ಕಡಿಮೆ. ಕೆಲಸ ಇದ್ದರೆ ಮಾತ್ರ ಮನೆಯಿಂದ ಆಚೆ ಬರುತ್ತೇನೆ. ತುಂಬ ಸ್ನೇಹಿತರೂ ಇದ್ದಾರೆ, ಅವರ ಜೊತೆ ನಿರಂತರವಾಗಿ ಸಮಯ ಕಳೆಯಲು ಆಗುವುದಿಲ್ಲ. ಹೋಗದೇ ಇರುವುದಕ್ಕೆ ಯಾವ ನಿರ್ದಿಷ್ಟ ಕಾರಣ ಇಲ್ಲ. ಸ್ವಭಾವತಃ ಹಾಗೆ ಇದ್ದೇನೆ. ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯುತ್ತೇನೆ. ಹೊಣೆಯ ವಿಷಯಕ್ಕೆ ಹೇಳುವುದಾದರೆ ಅಗತ್ಯ ಇದ್ದಲ್ಲಿ ಮೊದಲಿಗನಾಗಿ ನಿಲ್ಲಲು ಇಷ್ಟಪಡುತ್ತೇನೆ. ನನ್ನಿಂದ ಏನೋ ಒಂದು ಸಹಾಯ ಆಗುತ್ತದೆ ಎಂದರೆ ಅದಕ್ಕೆ ಹಿಂಜರಿಯದೇ ಮುಂದಿರುತ್ತೇನೆ. ಉಳಿದಂತೆ ಫಿಟ್ನೆಸ್ ತಾಲೀಮು ಮಾಡುತ್ತೇನೆ. ಕ್ರಿಕೆಟ್ ತುಂಬ ಇಷ್ಟ ಆಗಾಗ ಆಡುತ್ತೇನೆ. ಹೋಮ್ ಥೀಟರ್ನಲ್ಲಿ ಸಿನಿಮಾಗಳನ್ನು ನೋಡುತ್ತೇನೆ. ಸಿನಿಮಾ– ವೆಬ್ ಸೀರಿಯಸ್ ತುಂಬಾನೇ ನೋಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.